Gold Silver Price: ಬಂಗಾರ ಖರೀದಿಗೆ ಇಂದು ಶುಭದಿನ; ಚಿನ್ನದ ಬೆಲೆಯಲ್ಲಿ ಇಳಿಕೆ, ಬೆಳ್ಳಿ ದರ ಏರಿಕೆ

Suvarna News   | Asianet News
Published : Dec 24, 2021, 12:23 PM ISTUpdated : Dec 24, 2021, 12:24 PM IST
Gold Silver Price: ಬಂಗಾರ ಖರೀದಿಗೆ ಇಂದು ಶುಭದಿನ; ಚಿನ್ನದ ಬೆಲೆಯಲ್ಲಿ ಇಳಿಕೆ, ಬೆಳ್ಳಿ ದರ ಏರಿಕೆ

ಸಾರಾಂಶ

ಶುಕ್ರವಾರ ಚಿನ್ನ ಖರೀದಿಗೆ ಶುಭದಿನ ಎಂದು ಭಾವಿಸಿರೋರಿಗೆ ಇಂದು ಶುಭಸುದ್ದಿ.ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಇಂದು ಕೂಡ ಇಳಿಕೆ ಕಂಡುಬಂದಿದೆ. ಆದ್ರೆ ಬೆಳ್ಳಿ ಬೆಲೆ ಮಾತ್ರ ಏರಿಕೆ ಹಾದಿಯಲ್ಲೇ ಇದೆ. 

ಬೆಂಗಳೂರು (ಡಿ.24): ಚಿನ್ನ(Gold)ಖರೀದಿಸೋದು ಅಂದ್ರೆ ಸುಮ್ನೇನಾ? ಎಷ್ಟೋ ದಿನಗಳಿಂದ ಹಣ ಹೊಂದಿಸಿಕೊಂಡು ಚಿನ್ನದ ದರವನ್ನು ಪರಿಶೀಲಿಸುತ್ತ ಬೆಲೆ ತಗ್ಗಿದ ತಕ್ಷಣ ಖರೀದಿಗೆ ಮುಂದಾಗಬೇಕಾಗುತ್ತದೆ. ಚಿನ್ನ ಖರೀದಿಗೂ(Purchase) ಮುನ್ನ ಕೆಲವು ದಿನಗಳ ಕಾಲ ಮಾರುಕಟ್ಟೆ ದರವನ್ನು ಪರಿಶೀಲಿಸೋದು ಅಗತ್ಯ. ಚಿನ್ನದ ದರ ಇನ್ನೂ ತಗ್ಗುತ್ತದೆ ಎಂಬ ನಿರೀಕ್ಷೆಯಿರೋವಾಗ ಗಡಿಬಿಡಿಯಲ್ಲಿ ಖರೀದಿಗೆ ಮುಂದಾದ್ರೆ ನಮ್ಮ ಜೇಬಿಗೇ ಹೊರೆ. ಹೀಗಾಗಿ ಚಿನ್ನ ಖರೀದಿಸೋವಾಗ ಗಡಿಬಿಡಿ ಒಳ್ಳೆಯದ್ದಲ್ಲ.ಪ್ರಸ್ತುತ ಪರಿಸ್ಥಿತಿಯಲ್ಲಿ ಚಿನ್ನದ ದರವನ್ನು ವಿಶ್ಲೇಷಣೆ ಮಾಡಿದ್ರೆ ಕಳೆದ ಕೆಲವು ದಿನಗಳಿಂದ ಇಳಿಕೆ ಹಾದಿಯಲ್ಲಿರೋದು ಕಂಡುಬರುತ್ತದೆ. ಈ ಇಳಿಕೆ ದೊಡ್ಡ ಮೊತ್ತದಲ್ಲಿ ಅಲ್ಲದಿದ್ರೂ ತುಸು ಇಳಿಕೆಯಂತೂ ಆಗಿದೆ. ಇನ್ನು ಬೆಳ್ಳಿ(Silver) ದರ ನೋಡೋದಾದ್ರೆ ನಿರಂತರ ಏರಿಳಿತ ಕಂಡುಬರುತ್ತಿದೆ. ಕಳೆದ ಕೆಲವು ದಿನಗಳಿಂದ ಮಾತ್ರ ಬೆಳ್ಳಿ(Silver) ಏರಿಕೆಯ ಹಾದಿಯಲ್ಲೇ ಇದೆ.ಇಂದು ಕೂಡ ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದ್ರೆ, ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಇಂದು (ಡಿ.24) ದೇಶದ ಪ್ರಮುಖ ನಗರಗಳಲ್ಲಿ ಚಿನ್ನ(Gold) ಹಾಗೂ ಬೆಳ್ಳಿ (Silver) ದರ ಎಷ್ಟಿದೆ?

ಬೆಂಗಳೂರಿನಲ್ಲಿ(Bengaluru) ದರ ಎಷ್ಟಿದೆ?
ಬೆಂಗಳೂರಿನಲ್ಲಿ (Bengaluru)ಚಿನ್ನದ ಬೆಲೆಯಲ್ಲಿ ಇಂದು ಕೂಡ 10ರೂ. ಇಳಿಕೆಯಾಗಿದೆ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ  45,350ರೂ. ಇದ್ದು, ಇಂದು  45,340ರೂ. ಇದೆ.  24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 49,480ರೂ. ಇದ್ದು, ಇಂದು 49, 470ರೂ. ಇದೆ. ಅಂದ್ರೆ 10ರೂ. ಇಳಿಕೆಯಾಗಿದೆ.  ಒಂದು ಕೆ.ಜಿ. ಬೆಳ್ಳಿ ಬೆಲೆಯಲ್ಲಿ ಇಂದು 100ರೂ. ಏರಿಕೆ ಕಂಡುಬಂದಿದೆ. ಒಂದು ಕೆ.ಜಿ.ಬೆಳ್ಳಿಗೆ ನಿನ್ನೆ 62,300ರೂ. ಇದ್ರೆ ಇಂದು 62,400ರೂ. ಇದೆ.

Petrol Diesel Rate: ವಾಹನ ಸವಾರರಿಗೆ ನಿರಾಳ; ಇಂದು ಕೂಡ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ(Delhi) ಚಿನ್ನದ ಬೆಲೆಯಲ್ಲಿ ಇಂದು 10ರೂ. ಇಳಿಕೆಯಾಗಿದೆ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ  47,500ರೂ. ಇತ್ತು. ಇಂದು  47,490ರೂ.ಇದೆ.  24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 10ರೂ. ಇಳಿಕೆಯಾಗಿದೆ. ನಿನ್ನೆ 51,800ರೂ. ಇದ್ದ ಚಿನ್ನದ ದರ ಇಂದು 51,790ರೂ.ಇದೆ. ಒಂದು ಕೆ.ಜಿ. ಬೆಳ್ಳಿ ದರದಲ್ಲಿ ನಿನ್ನೆಗಿಂತ ಇಂದು 100ರೂ. ಏರಿಕೆಯಾಗಿದೆ. ನಿನ್ನೆ 62,300ರೂ. ಆಗಿದ್ದ ಬೆಳ್ಳಿ ಬೆಲೆ ಇಂದು 61,400ರೂ. ಆಗಿದೆ. 

ಮುಂಬೈನಲ್ಲಿ ಎಷ್ಟಿದೆ?
ಮುಂಬೈನಲ್ಲಿ(Mumbai) ಕೂಡ ಇಂದು ಚಿನ್ನದ ದರದಲ್ಲಿ 10ರೂ. ಇಳಿಕೆಯಾಗಿದೆ.  22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 47,300ರೂ.ಇದ್ದು, ಇಂದು 47,290ರೂ. ಇದೆ.  24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ 48,300ರೂ. ಇತ್ತು, ಇಂದು  48,290ರೂ. ಇದೆ.  ಬೆಳ್ಳಿ ದರದಲ್ಲಿಇಂದು 100ರೂ. ಏರಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 62,300ರೂ. ಇದ್ದು, ಇಂದು 100ರೂ. ಏರಿಕೆಯಾಗಿ 62,400ರೂ.  ಆಗಿದೆ.  

Name Change In PAN Card: ವಿವಾಹದ ಬಳಿಕ ಮಹಿಳೆಯರು ಪ್ಯಾನ್ ಕಾರ್ಡ್ ನಲ್ಲಿ ಹೆಸರು, ವಿಳಾಸ ಬದಲಾಯಿಸಲು ಏನ್ ಮಾಡ್ಬೇಕು?

ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ(Chennai) ಇಂದು ಚಿನ್ನದ ದರದಲ್ಲಿ10ರೂ. ಇಳಿಕೆಯಾಗಿದೆ.  22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು  45, 550ರೂ.ಇದೆ. ನಿನ್ನೆ 45,560ರೂ. ಇತ್ತು.  24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ 49,700ರೂ. ಇದ್ದು, ಇಂದು 10ರೂ. ಇಳಿಕೆಯಾಗಿ 49,690ರೂ. ಆಗಿದೆ. ಬೆಳ್ಳಿ ದರ ಇಂದು ಸ್ಥಿರವಾಗಿದ್ದು, ಒಂದು ಕೆ.ಜಿ. ಬೆಳ್ಳಿಗೆ 62,200ರೂ.ಇದೆ.   

"

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಡ್ರೆಸ್ ಇಸ್ತ್ರಿಗೆ ಹತ್ತೇ ರೂಪಾಯಿ, ತಿಂಗಳ ಗಳಿಕೆ ಮಾತ್ರ ಲಕ್ಷದಲ್ಲಿ, ಶಾಕ್ ಆಗುತ್ತೆ ಡ್ರೈ ಕ್ಲೀನರ್ ಸಂಪಾದನೆ
Top 8 Richest Royal Families: ನಮ್ಮ ಮೈಸೂರಿನ ಮಹಾರಾಜರ ಆಸ್ತಿ ಮೌಲ್ಯ ಎಷ್ಟಿದೆ?