ಭಾರತದ ಯೂಟ್ಯೂಬರ್ಸ್ ಖಾತೆ​ಗೆ ಬಿತ್ತು 21 ಸಾವಿರ ಕೋಟಿ ರೂಪಾಯಿ!

Published : May 05, 2025, 11:41 AM ISTUpdated : May 05, 2025, 11:44 AM IST
ಭಾರತದ ಯೂಟ್ಯೂಬರ್ಸ್ ಖಾತೆ​ಗೆ ಬಿತ್ತು 21 ಸಾವಿರ ಕೋಟಿ ರೂಪಾಯಿ!

ಸಾರಾಂಶ

ಭಾರತದಲ್ಲಿ ಯೂಟ್ಯೂಬರ್‌ಗಳ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ₹೨೧,೦೦೦ ಕೋಟಿ ಆದಾಯ ಗಳಿಸಿದ್ದಾರೆ. ಯೂಟ್ಯೂಬ್ ೪೫% ಪಾಲು ಪಡೆದು ೫೫% ಕಂಟೆಂಟ್ ರಚನೆಕಾರರಿಗೆ ನೀಡುತ್ತದೆ. ಆದರೆ, ೮-೧೦% ರಷ್ಟು ಯೂಟ್ಯೂಬರ್‌ಗಳು ಮಾತ್ರ ಉತ್ತಮ ಆದಾಯ ಗಳಿಸುತ್ತಿದ್ದು, ಉಳಿದವರು ಕಡಿಮೆ ಅಥವಾ ಯಾವುದೇ ಆದಾಯವಿಲ್ಲದೆ ಪ್ರಯತ್ನಿಸುತ್ತಿದ್ದಾರೆ.

ಇಂದು ಡಿಜಿಟಲ್​ ಕಂಟೆಂಟರ್​ಗಳ ಸಂಖ್ಯೆ ದಿನೇ  ದಿನೇ ಏರುತ್ತಲೇ ಇದೆ. ಅದರಲ್ಲಿಯೂ ಯೂಟ್ಯೂಬರ್​ಗಳ ಸಂಖ್ಯೆ ಹೆಚ್ಚಾಗಿದೆ. ಇದಾಗಲೇ 2.5 ಮಿಲಿಯನ್​ಗೂ ಅಧಿಕ ಯೂಟ್ಯೂಬರ್​ಗಳು ಆ್ಯಕ್ಟೀವ್​ ಆಗಿರುವುದಾಗಿ ಅಂಕಿ ಅಂಶ ತಿಳಿಸುತ್ತಿದೆ. ಎಷ್ಟೋ ಮಂದಿ ಇದರಿಂದಲೇ ತಮ್ಮ ಆದಾಯ ಗಳಿಸುತ್ತಿದ್ದಾರೆ. ಹಲವರು ತಮ್ಮ ಇತರ ಉದ್ಯೋಗದ ಜೊತೆಗೆ ಡಿಜಿಟಲ್​ ಕಂಟೆಂಟ್​ ಅನ್ನು ಹವ್ಯಾಸದ ರೀತಿಯಲ್ಲಿ ಬಳಕೆ ಮಾಡುತ್ತಿದ್ದರೆ, ಮತ್ತೆ ಕೆಲವರು ಇದನ್ನೇ  ಮುಖ್ಯ ಉದ್ಯೋಗ ಮಾಡಿಕೊಂಡಿದ್ದಾರೆ. ಉತ್ತಮ ಸಂಬಳ ತರುವ ಉದ್ಯೋಗವನ್ನು ತೊರೆದು ಯೂಟ್ಯೂಬ್​ಗಳನ್ನೇ ಫುಲ್​ ಟೈಂ ಕೆಲಸ ಮಾಡಿಕೊಂಡವರು ಹಲವರಿದ್ದಾರೆ. ಇವರಲ್ಲಿ ಸ್ವಲ್ಪ ಹೆಚ್ಚು ಸಕ್ಸಸ್​ ಆಗುತ್ತಿದ್ದಂತೆಯೇ, ವ್ಯೂವ್ಸ್​, ಫಾಲೋವರ್ಸ್​ ಹೆಚ್ಚಾದಂತೆ ಜಾಹೀರಾತು ಕಂಪೆನಿಗಳು ಕೂಡ ಇವರನ್ನು ಬಳಸಿಕೊಳ್ಳುವ ಕಾರಣ, ಯೂಟ್ಯೂಬರ್​ಗಳಿಗೆ ಆದಾಯ ಹೆಚ್ಚುತ್ತಲೇ ಸಾಗುತ್ತದೆ. 

ಕೆಲವರು ಒಳ್ಳೆಯ ಕಂಟೆಂಟ್​ಗಳನ್ನು ಶೇರ್​ ಮಾಡಿದರೆ, ಹಲವರದ್ದು ವ್ಯೂವ್ಸ್​ ಹೆಚ್ಚಿಗೆ ತರುವ ಶಾರ್ಟ್ಸ್​ಗಳೇ ಹೆಚ್ಚಿರುತ್ತದೆ. ಇಂಥ ಕ್ಲಿಪ್​ಗಳು ಟ್ರೋಲ್​ ಆಗುವ ಮೂಲಕವೇ ಹೆಚ್ಚೆಚ್ಚು ವ್ಯೂವ್ಸ್​ ತರುವ ಕಾರಣ, ಅದರಿಂದಲೂ ದುಡ್ಡು ಗಳಿಸುವವರು ಇದ್ದಾರೆ. ಒಟ್ಟಿನಲ್ಲಿ ಡಿಜಿಟಲ್​  ಕಂಟೆಂಟ್​ ಎನ್ನುವುದು ಇದೀಗ ಭಾರಿ ಆದಾಯ ತರುವ ಉದ್ಯೋಗವಂತೂ ಆಗುತ್ತಿದೆ. ಇದೀಗ, ಯೂಟ್ಯೂಬ್​ ಭಾರತದ ಕುರಿತು ಮಾಹಿತಿಯೊಂದನ್ನು ಶೇರ್​ ಮಾಡಿದೆ. ಅದೇನೆಂದರೆ, ಕಳೆದ ಮೂರು ವರ್ಷಗಳಲ್ಲಿ ಭಾರತದ ಯೂಟ್ಯೂಬರ್​​ಗಳಿಗೆ 21 ಸಾವಿರ ಕೋಟಿ ರೂಪಾಯಿಗಳನ್ನು ನೀಡಿದೆ. ಅಂದರೆ, ಕಳೆದ ಮೂರು ವರ್ಷಗಳಲ್ಲಿ ಭಾರತದ ಯೂಟ್ಯೂಬರ್​ಗಳು ಯೂಟ್ಯೂಬ್​ನಿಂದ 21 ಸಾವಿರ ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಿದ್ದಾರೆ.

ಯೂಟ್ಯೂಬ್ ಚಾನೆಲ್ ಆದಾಯಕ್ಕೆ ಪ್ರಯತ್ನಿಸುತ್ತಿದ್ದೀರಾ? ಮಾನಿಟೈಸ್ ಕುರಿತು BCG ಮಾತು ಒಮ್ಮೆ ಕೇಳಿ

ಇನ್ನು ಲೆಕ್ಕಾಚಾರದ ಕುರಿತು ಮಾತನಾಡುವುದಾದರೆ, ಯಾವುದೇ ಯೂಟ್ಯೂಬರ್​ಗಳಿಗೆ ಬರುವ ಆದಾಯದಲ್ಲಿ ಶೇಕಡಾ 45ರಷ್ಟನ್ನು ಯೂಟ್ಯೂಬ್​ ಇಟ್ಟುಕೊಂಡರೆ, ಶೇಕಡಾ 55ರಷ್ಟನ್ನೂ ಕಂಟೆಂಟರ್​ಗಳಿಗೆ ನೀಡುತ್ತದೆ. ಯೂಟ್ಯೂಬ್​ ಮೂಲಕ ಆದಾಯ ಗಳಿಸುವವರಲ್ಲಿ ಸಹಜವಾಗಿ ದೊಡ್ಡಣ್ಣ ಅರ್ಥಾತ್​ ಅಮೆರಿಕ ಮೊದಲ ಸ್ಥಾನದಲ್ಲಿದೆ. ಇನ್ನು ಭಾರತದಲ್ಲಿನ ಯೂಟ್ಯೂಬ್​ ಕುರಿತು ಹೇಳುವುದಾದರೆ,  ಪ್ರತಿ ದಿನ ಅಥವಾ 2 ರಿಂದ ಮೂರು ದಿನಕ್ಕೊಮ್ಮೆ ಕಂಟೆಂಟ್ ವಿಡಿಯೋ ಪೋಸ್ಟ್ ಮಾಡಲಾಗುತ್ತಿದೆ. ಈ ದೊಡ್ಡ ಸಂಖ್ಯೆಯಲ್ಲಿ ಕೇವಲ ಶೇಕಡಾ 8 ರಿಂದ 10 ರಷ್ಟು ಮಂದಿ ಮಾತ್ರ ಆದಾಯಗಳಿಸುತ್ತಿದ್ದಾರೆ. ಇನ್ನುಳಿದ ಶೇಕಾಡ 90 ರಿಂದ 92 ರಷ್ಟು ಮಂದಿ ಪ್ರಯತ್ನ ಪಡುತ್ತಿದ್ದಾರೆ. ಆದರೆ ಭಾರಿ ಕಡಿಮೆ ಹಣ ಅಥವಾ ಯಾವುದೇ ಹಣ ಬರುತ್ತಿಲ್ಲ ಎಂದು ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್ BCG ವರದಿ ಹೇಳುತ್ತಿದೆ.

ಭಾರತದಲ್ಲಿ ಸರಾಸರಿ ಶೇಕಡಾ 90 ರಷ್ಟು ಸಕ್ರೀಯ ಯೂಟ್ಯೂಬ್ ಚಾನೆಲ್ ಆದಾಯ ಗಳಿಸಲು ವಿಫಲವಾಗುತ್ತಿದೆ. ಉತ್ತಮ ಕೆಂಟೆಂಟ್ ಸೇರದಂತೆ ಇತರ ಎಲ್ಲಾ ಮಾನದಂಡ ಪೂರೈಸಿದರೂ ವೀಕ್ಷಕರ ಸಂಖ್ಯೆ, ಸಬ್‌‌ಸ್ಕ್ರೈಬರ್, ವಾಚ್ ಹವರ್ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಇತ್ತ ಹಣವೂ ಬರುತ್ತಿಲ್ಲ ಎಂದು BCG ವರದಿ ಹೇಳುತ್ತಿದೆ. ಈ ಶೇಕಡಾ 90 ರಷ್ಟು ಮಂದಿಯಲ್ಲಿ ಬಹುತೇಕರು ಇತರ ಪ್ರಾಯೋಜಕತ್ವ, ಸ್ಥಳೀಯ ಜಾಹೀರಾತು ಸೇರಿದಂತೆ ಇತರ ಮೂಲಗಳಿಂದ ಹಣ ಪಡೆಯುತ್ತಿದ್ದಾರೆ. ಆದರೂ ಅವರ ಶ್ರಮ ಹಾಗೂ ಖರ್ಚು ವೆಚ್ಚಕ್ಕೆ ಸಾಧ್ಯವಾಗುವುದಿಲ್ಲ ಎಂದು ವರದಿ ಹೇಳುತ್ತಿದೆ. ಭಾರತದಲ್ಲಿ ಬಹುತೇಕ ಯೂಟ್ಯೂಬ್ ಕಂಟೆಂಟ್ ಕ್ರಿಯಟರ್ಸ್ ಸರಾಸರಿ ಮಾಸಿಕ 18,000 ರೂಪಾಯಿ ಆದಾಯಗಳಿಸುತ್ತಾರೆ. ಇನ್ನು ಸಣ್ಣ ಕಂಟೆಂಟ್ ಕ್ರಿಯೇಟರ್ಸ್ ವಾರ್ಷಿಕ 3 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ. ಮಿಲಿಯನ್‌ಗೂ ಹೆಚ್ಚು ಸಬ್‌ಸ್ಕ್ರೈಬರ್, ಉತ್ತಮ ವಾಚ್ ಹವರ್, ಎಂಗೇಜ್‌ಮೆಂಟ್ ಹೊಂದಿದವರ ಸರಾಸರಿ ಮಾಸಿಕ ಆದಾಯ 50,000 ರೂಪಾಯಿ. ಇನ್ನು ಕೆಲವೇ ಕೆಲವು ಮಂದಿ ಲಕ್ಷ ರೂಪಾಯಿಯಲ್ಲಿ ಯೂಟ್ಯೂಬ್ ಮೂಲಕ ಆದಾಯಗಳಿಸುತ್ತಿದ್ದಾರೆ ಎಂದು BCG ವರದಿ ಹೇಳಿದೆ.

ಮೊಬೈಲ್​ ನಂಬರ್​ನ ಕೊನೆ ಸಂಖ್ಯೆಯಿಂದ ನಿಮ್ಮ ಗುಟ್ಟು ರಟ್ಟು! ಇಲ್ಲಿದೆ ನೋಡಿ ಡಿಟೇಲ್ಸ್​
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!