
ಬೆಂಗಳೂರು (ಡಿ.28) ಹೂಡಿಕೆ ಯಾವುದು ಉತ್ತಮ? ಹಾಗಂತ ಹೂಡಿಕೆ ಮಾಡಲು ಹೆಚ್ಚಿನ ಹಣವಿಲ್ಲ, ಇರೋ ಸ್ವಲ್ಪ ಹಣದಲ್ಲಿ ಹೂಡಿಕೆ ಮಾಡಿ ಉತ್ತಮ ರಿಟರ್ನ್ ಪಡೆಯುವುದು ಹೇಗೆ? ಈ ಕುರಿತು ಹಲವು ಹೂಡಿಕೆ ತಜ್ಞರು ಸಲಹೆ ನೀಡುತ್ತಾರೆ. ಇದೀಗ ಅಂಕಿ ಅಂಶಗಳ ಪ್ರಕಾರ ಹೂಡಿಕೆ ಯಾವುದೇ ಉತ್ತಮ ಅನ್ನೋ ಲೆಕ್ಕಾಚಾರ ಮಾಹಿತಿ ಇಲ್ಲಿದೆ. 40 ವರ್ಷದ ಹಿಂದೆ ಕೇವಲ 100 ರೂಪಾಯಿ ಹೂಡಿಕೆ ಮಾಡಿದರೆ ಈಗ ಎಷ್ಟಾಗುತ್ತಿತ್ತು? ಚಿನ್ನ, ಬ್ಯಾಂಕ್ ಠೇವಣಿ, ಷೇರು ಈ ಪೈಕಿ ಯಾವ ಹೂಡಿಕೆ ನಿಮಗೆ ಉತ್ತಮ ರಿಟರ್ನ್ಸ್ ನೀಡಲಿದೆ ಅನ್ನೋ ಅಂಕಿ ಅಂಶ ಇಲ್ಲಿದೆ.
40 ವರ್ಷ ಹಿಂದೆ ಅಂದರೆ 1985ರಲ್ಲಿ ಕೇವಲ 100 ರೂಪಾಯಿ ಹೂಡಿಕೆ ಮಾಡಿದರೆ ಈಗ ಎಷ್ಟಾಗುತ್ತಿತ್ತು? 100 ರೂಪಾಯಿ ಹೂಡಿಕೆ ಚಿನ್ನದ ಮೇಲೆ ಮಾಡಿದ್ದರೆ ಇದೀಗ ಈ ಮೌಲ್ಯ 6,518 ರೂಪಾಯಿಯಾಗುತ್ತಿತ್ತು. 40 ವರ್ಷದ ಹಿಂದೆ ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದ ಚಿನ್ನದ ಬೆಲೆ ಇದೀಗ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 1.4 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಹೀಗಾಗಿ ಅಂದಿನ 100 ರೂಪಾಯಿ ಚಿನ್ನ ಇದೀಗ 6,518 ರೂಪಾಯಿ ಆಗಿದೆ. ನೀವು ಚಿನ್ನದ ಮೇಲೆ ಸುದೀರ್ಘ ವರ್ಷಕ್ಕೆ ಹೂಡಿಕೆ ಮಾಡಿದರೆ ಉತ್ತಮ ರಿಟರ್ಸನ್ ಇದೆ.
ಇದೇ 100 ರೂಪಾಯಿ ಮೊತ್ತವನ್ನು 1985ರಲ್ಲಿ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದರೆ ಇದೀಗ 40 ವರ್ಷಗಳ ಬಳಿಕ ಇದೇ ಮೊತ್ತ 2,100 ರೂಪಾಯಿ ಆಗಲಿದೆ. ಹೂಡಿಕೆ ಮಾಡಿ ಸುಮ್ಮನ್ನಿದರೂ ಸಾಕು ಬ್ಯಾಂಕ್ ನಲ್ಲಿ ಠೇವಣಿ ಭದ್ರವಾಗಲಿದೆ. ಆದರೆ ಚಿನ್ನಕ್ಕೆ ಹೋಲಿಸಿದರೆ ಬ್ಯಾಂಕ್‌ನಲ್ಲಿನ ಠೇವಣಿ ರಿಟರ್ನ್ಸ್ ಕಡಿಮೆ.
ಇದೇ 100 ರೂಪಾಯಿ ಮೊತ್ತವನ್ನು ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿ ಹೂಡಿಕೆ ಮಾಡಿದರೆ ರಿಟರ್ನ್ಸ್ ದುಪ್ಪಟ್ಟು. ಹೌದು, 100 ರೂಪಾಯಿಯನ್ನು ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿ ಹೂಡಿಕೆ ಮಾಡಿದರೆ ಇದೀಗ ಈ ಮೊತ್ತ 13,484 ರೂಪಾಯಿ. ಚಿನ್ನ, ಬ್ಯಾಂಕ್ ಠೇವಣಿ, ಷೇರು ಈ ಪೈಕಿ ಷೇರು ಹೆಚ್ಚಿನ ಮೊತ್ತ ರಿಟರ್ನ್ಸ್ ನೀಡಲಿದೆ. ಆದರೆ ಷೇರು ವಹಿವಾಟು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಇತರ ಎರಡು ಹೂಡಿಕೆಯಾಗಿರುವ ಚಿನ್ನ ಹಾಗೂ ಬ್ಯಾಂಕ್ ಠೇವಣಿ ಸ್ಥಿರ ರಿಟರ್ನ್ಸ್ ನೀಡಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.