
ನವದೆಹಲಿ: ಬೆಳ್ಳಿ ಬೆಲೆಯ ನಾಗಾಲೋಟ ಮುಂದುವರೆದಿದ್ದು, ಶನಿವಾರ ಒಂದೆ ದಿನ ಬೆಂಗಳೂರಿನಲ್ಲಿ 1 ಕೆಜಿ ಬೆಳ್ಳಿ ಬೆಲೆ 14700 ರು. ಏರಿಕೆಯಾಗಿ 2,57,700 ರು.ಗೆ ತಲುಪಿದೆ. ಶುಕ್ರವಾರವೂ ಕೂಡಾ ಬೆಲೆ 9500 ರು.ನಷ್ಟು ಜಿಗಿದಿತ್ತು.
ಜಾಗತಿಕವಾಗಿ ಕೈಗಾರಿಕಾ ವಲಯದಿಂದ ಭಾರೀ ಬೇಡಿಕೆ, ಅದಿರಿನಲ್ಲಿ ನಿಕ್ಷೇಪದ ಕೊರತೆ, ಹೂಡಿಕೆದಾರರಿಂದ ಹೆಚ್ಚಿನ ಸಂಗ್ರಹಣೆಯು ಬೆಳ್ಳಿ ಬೆಲೆ ಏರಿಕೆಗೆ ಕಾರಣಗಳಾಗಿವೆ. ಕಳೆದ 6 ದಿನಗಳ ಅವಧಿಯಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ 35900 ರು. ಏರಿಕೆ ದಾಖಲಾಗಿದೆ.
1,33,350 ರು.ಗೆ, ಚಿನ್ನ
ಇನ್ನು 22 ಕ್ಯಾರಟ್ ಚಿನ್ನದ ಬೆಲೆಯು 10 ಗ್ರಾಂಗೆ 1150 ರು. ಏರಿಕೆಯಾಗಿ 1,33,350 ರು.ಗೆ, 10 ಗ್ರಾಂ 24 ಕ್ಯಾರಟ್ ಚಿನ್ನ 1250 ರು. ಜಿಗಿದು 1,45,450 ರು.ಗೆ ತಲುಪಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.