40ರ ಗಡಿ ದಾಟಿದ ಚಿನ್ನ, 50ರ ಸಮೀಪ ಬೆಳ್ಳಿ: ಆಭರಣದಾಸೆಗೆ ಬಿತ್ತು ಕೊಳ್ಳಿ!

Suvarna News   | Asianet News
Published : Feb 02, 2020, 03:23 PM IST
40ರ ಗಡಿ ದಾಟಿದ ಚಿನ್ನ, 50ರ ಸಮೀಪ ಬೆಳ್ಳಿ: ಆಭರಣದಾಸೆಗೆ ಬಿತ್ತು ಕೊಳ್ಳಿ!

ಸಾರಾಂಶ

ಮುಗಿಲು ಮುಟ್ಟಿದ ಚಿನ್ನ ಹಾಗೂ ಬೆಳ್ಳಿ ಬೆಲೆ| ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಪರಿಣಾಮವೇ?| 10 ಗ್ರಾಂ ಚಿನ್ನದ ಬೆಲೆ ಇದೀಗ 40,060 ರೂ.|  ಒಂದು ಕೆಜಿ ಬೆಳ್ಳಿ ಬೆಲೆ ಇದೀಗ 49,990 ರೂ.| ದೇಶದ ಮಹಾ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರಗಳ ಪಟ್ಟಿ|

ನವದೆಹಲಿ(ಫೆ.02): ಕೇಂದ್ರ ಬಜೆಟ್ ಮಂಡನೆಯಾಗುತ್ತಿದ್ದಂತೇ ದೇಶಾದ್ಯಂತ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಆಭರಣ ಪ್ರಿಯರನ್ನು ದಂಗುಬಡಿಸಿದೆ.

ದೇಶೀಯ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 4,001 ರೂ. ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ ಇದೀಗ 40,060 ರೂ. ಆಗಿದೆ. 

ಅದರಂತೆ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು , ಒಂದು ಕೆಜಿ ಬೆಳ್ಳಿ ಬೆಲೆ ದೇಶೀಯ ಮಾರುಕಟ್ಟೆಯಲ್ಲಿ ಇದೀಗ 49,990 ರೂ. ಆಗಿದೆ.

ಮದುವೆ, ಮುಂಜಿ ಪ್ಲ್ಯಾನ್ ಇದೆಯಾ?: 45 ಸಾವಿರ ರೂ. ಗಡಿ ದಾಟಲಿದೆ ಚಿನ್ನ!

ದೇಶದ ಮಹಾನಗರಗಳಲ್ಲಿ ಇಂದಿನ ಚಿನ್ನ ಹಾಗೂ ಬೆಳ್ಳಿ ಬೆಲೆಯತ್ತ ಗಮನಹರಿಸುವುದಾದರೆ...

ರಾಷ್ಟ್ರ ರಾಜಧಾನಿ ನವದೆಹಲಿ:
ಚಿನ್ನ: 40,060 ರೂ.
ಬೆಳ್ಳಿ: 49,990 ರೂ.

ವಾಣಿಜ್ಯ ರಾಜಧಾನಿ ಮುಂಬೈ:
ಚಿನ್ನ: 40,010 ರೂ.
ಬೆಳ್ಳಿ: 49,990 ರೂ.


ಪ.ಬಂಗಾಳ ರಾಜಧಾನಿ ಕೋಲ್ಕತ್ತಾ:
ಚಿನ್ನ: 40,310 ರೂ.
ಬೆಳ್ಳಿ: 49,990 ರೂ.

ತಮಿಳುನಾಡು ರಾಜಧಾನಿ ಚೆನ್ನೈ:
ಚಿನ್ನ: 39,230 ರೂ.
ಬೆಳ್ಳಿ: 49,990 ರೂ.

ರಾಜ್ಯ ರಾಜಧಾನಿ ಬೆಂಗಳೂರು:
ಚಿನ್ನ: 38,410 ರೂ.
ಬೆಳ್ಳಿ: 49,990 ರೂ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!