
ನವದೆಹಲಿ(ಫೆ.02): ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್’ನ್ನು, ಮಾಜಿ ಹಣಕಾಸು ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಲೇವಡಿ ಮಾಡಿದ್ದಾರೆ.
ಕೇಂದ್ರ ಬಜೆಟ್’ಗೆ 10ಕ್ಕೆ ಎಷ್ಟು ಅಂಕ ನೀಡುತ್ತೀರಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ವ್ಯಂಗ್ಯವಾಗಿ ಉತ್ತರಿಸಿದ ಚಿದಂಬರಂ, 10 ರಲ್ಲಿ ಎರಡು ಅಂಕಿಗಳಿವೆ 1 ಮತ್ತು 0 ಇವುಗಳಲ್ಲಿ ಯಾವುದನ್ನಾದರೂ ನೀವು ಪರಿಣಿಸಿ ಎಂದು ಕುಹುಕವಾಡಿದರು.
ಕೇಂದ್ರ ಬಜಟ್’ನ್ನು ನಿರಾಶಾದಾಯಕ ಎಂದ ಪಿ. ಚಿದಂಬರಂ, ಕಳೆದ ಆರು ತ್ರೈಮಾಸಿಕ ಅವಧಿಯಲ್ಲಿ ನಿರಂತರವಾಗಿ ಜಿಡಿಪಿ ಬೆಳವಣಿಗೆ ಕುಸಿದಿದ್ದು, ಇಷ್ಟಾದರೂ ಸರ್ಕಾರ ಆರ್ಥಿಕ ಪರಿಸ್ಥಿತಿ ಕುರಿತು ಸುಳ್ಳು ಹೇಳುತ್ತಿರುವುದು ನಾಚಿಕೆಗೇಡು ಎಂದು ಕಿಡಿಕಾರದಿದರು.
ಜನಪ್ರಿಯವಲ್ಲದ ಜನಪರ ಬಜೆಟ್: ಸಿಹಿ-ಕಹಿಗಳ ನಿರ್ಮಲಾ 'ಬಹೀ ಖಾತಾ'!
ಮುಂದಿಬ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇ.10 ರಷ್ಟು ಎಂದು ಮೋದಿ ಸರ್ಕಾರ ಅಂದಾಜಿಸಿದೆ. ಸದ್ಯ ಇರುವ ಶೇ. 5ರ ಜಿಡಿಪಿ ಬೆಳವಣಿಗೆಯನ್ನು ದ್ವಿಗುಣ ಹೇಗೆ ಮಾಡುತ್ತಾರೆ ಎಂಬುದರ ಕುರಿತು ಅವರ ಬಳಿ ಉತ್ತರವಿಲ್ಲ ಎಂದು ಚಿದಂಬರಂ ಹರಿಹಾಯ್ದಿದ್ದಾರೆ.
ಇನ್ನು ನಿರ್ಮಲಾ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಷ್ಟು ಉದ್ದ ಬಜೆಟ್ ಆಗಿತ್ತು ಎಂದು ಅತ್ಯಂತ ಮಾರ್ಮಿಕವಾಗಿ ನುಡಿದಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.