
Gold Rate on December 17th 2022: ಚಿನ್ನದ ದರ ಶನಿವಾರ ಚಿನಿವಾರ ಪೇಟೆಯಲ್ಲಿ ಕೊಂಚ ಹಿಗ್ಗಿದೆ. ಕಳೆದ ಎರಡು ದಿನಗಳಲ್ಲಿ ಚಿನ್ನದ ದರದಲ್ಲಿ ಇಳಿಕೆ ಕಂಡಿದ್ದರಿಂದ ಜನರು ಸಮಾಧಾನ ಕಂಡಿದ್ದರು. ಆದರೆ, ಚಿನ್ನದ ಬೆಲೆ ಎರಡು ದಿನ ಇಳಿಕೆಯಾದರೆ, ನಾಲ್ಕು ದಿನ ಏರಿಕೆ ಆಗುತ್ತದೆ. ಪ್ರತಿದಿನ ಚಿನ್ನದ ಬೆಲೆಯನ್ನು ನೋಡಿಕೊಂಡೇ, ಚಿನ್ನವನ್ನು ಖರೀದಿಸುವವರ ಸಂಖ್ಯೆ ಹೆಚ್ಚಿದೆ. ಅಂಥವರಿಗೆ ಇಂದಿನ ದಿನ ಚಿನ್ನ ಖರೀದಿಗೆ ಸೂಕ್ತವಲ್ಲ. ಇಂದು ಬೆಂಗಳೂರಿನಲ್ಲಿ (Bengaluru) ಬಂಗಾರ, ಬೆಳ್ಳಿ ಬೆಲೆ ಎಷ್ಟಿದೆ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ದರ ಹೇಗಿದೆ ಎಂಬ ಬಗ್ಗೆ ತಿಳ್ಕೋಬೇಕಾ.. ಇಲ್ಲಿದೆ ವಿವರ..
ಇಂದು ದೇಶದಲ್ಲಿ (India) ಬಂಗಾರದ ಏರಿಕೆಯಾಗಿದೆ. ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ ಹೀಗಿದೆ ನೋಡಿ..
ಒಂದು ಗ್ರಾಂ ಚಿನ್ನ (1GM)
ಎಂಟು ಗ್ರಾಂ ಚಿನ್ನ (8GM)
ಹತ್ತು ಗ್ರಾಂ ಚಿನ್ನ (10GM)
ನೂರು ಗ್ರಾಂ ಚಿನ್ನ (100GM)
ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) 50 ಸಾವಿರ ರೂಪಾಯಿ ಆಗಿದೆ. ಶುಕ್ರವಾರದ ಬೆಲೆಗೆ ಹೋಲಿಸಿದರೆ 250 ರೂಪಾಯಿ ಏರಿಕೆಯಾಗಿದೆ. ದೇಶದ ಪ್ರಮುಖ ಮೆಟ್ರೋಪಾಲಿಟನ್ ನಗರಗಳಾದ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಕ್ರಮವಾಗಿ ಚಿನ್ನದ ಬೆಲೆ ರೂ. 50,450, ರೂ. 49,950, ರೂ. 49,950 ಆಗಿದೆ. ಅದೇ ರೀತಿ, ರಾಷ್ಟ್ರ ರಾಜಧಾನಿ ಹೊಸ ದೆಹಲಿಯಲ್ಲಿ ಸಹ ಚಿನ್ನದ ಬೆಲೆ ಶನಿವಾರ 50,100 ರೂ. ಆಗಿದ್ದು, ಶುಕ್ರವಾರದ ದರಕ್ಕಿಂತ 250 ರೂಪಾಯಿ ಏರಿಕೆ ಆಗಿದೆ.
ಇಂದಿನ ಬೆಳ್ಳಿ ದರ
ಇನ್ನು, ದೇಶದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿ ದರದಲ್ಲಿ ಬೆಂಗಳೂರಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದರೆ, ಇತರ ನಗರಗಳಲ್ಲಿ ಕೊಂಚ ಮಟ್ಟಿಗೆ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದೆ.
ವಾಹನ ಪೂಜೆಗಾಗಿ ಹೆಲಿಕಾಪ್ಟರನ್ನೇ ದೇಗುಲಕ್ಕೆ ತಂದ ಹೈದರಾಬಾದ್ ಉದ್ಯಮಿ
ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್
ದೇಶಾದ್ಯಂತ ಇಂದು ಬಂಗಾರದ ದರದಲ್ಲಿ ಏರಿಕೆಯಾಗಿದ್ದರೆ, ಬೆಳ್ಳಿ ದರದಲ್ಲಿ ಕೂಡ ಏರುಗತಿ ಕಂಡಿದೆ. ಆದರೆ, ಬೆಂಗಳೂರಿನಲ್ಲಿ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. ಇಂದು, ಬೆಂಗಳೂರಿನಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 725, ರೂ. 7,250 ಹಾಗೂ ರೂ. 72,500 ಗಳಾಗಿವೆ. ಇನ್ನು, ದೇಶದ ಇತರೆ ಪ್ರಮುಖ ನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 72,500 ಆಗಿದ್ದು, ವಾಣಿಜ್ಯ ರಾಜಧಾನಿ ಮುಂಬೈ, ಕೋಲ್ಕತ್ತ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಳ್ಳಿ ದರ 1 ಕೆಜಿಗೆ 69 ಸಾವಿರ ರೂಪಾಯಿ ಆಗಿದೆ. ಶುಕ್ರವಾರಕ್ಕಿಂತ 500 ರೂಪಾಯಿ ಕಡಿಮೆ ಆಗಿದೆ.
ಇನ್ಫೋಸಿಸ್‌ಗೆ 40ನೇ ವರ್ಷದ ಸಂಭ್ರಮ: ಶ್ರೇಯಾ ಘೋಷಾಲ್ ಹಾಡಿಗೆ ಹೆಜ್ಜೆ ಹಾಕಿದ ಸುಧಮ್ಮ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.