1,508 ರೂ.ಗೆ ವಿಮಾನದಲ್ಲಿ ಪ್ರಯಾಣಿಸಿ: ಗೋ ಫಸ್ಟ್‌ನಿಂದ ಇಂಡಿಪೆಂಡೆನ್ಸ್ ಡೇ ಸೇಲ್‌

By BK AshwinFirst Published Aug 10, 2022, 4:31 PM IST
Highlights

ಗೋ ಫಸ್ಟ್‌ ವಿಮಾನದಲ್ಲಿ ನೀವು ಇಂದಿನಿಂದ ಕಡಿಮೆ ಬೆಲೆಗೆ ಟಿಕೆಟ್‌ ಬುಕ್‌ ಮಾಡಿದರೆ ಸೆಪ್ಟೆಂಬರ್‌ ನಿಮದ ಮುಂದಿನ ವರ್ಷ ಮಾರ್ಚ್‌ವರೆಗೆ ಪ್ರಯಾಣ ಮಾಡಬಹುದಾಗಿದೆ. ಭಾರತದ 75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಈ ಆಫರ್‌ ಘೋಷಿಸಿದೆ. 

ಭಾರತ ಈಗಾಗಲೇ ತನ್ನ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ. ಈ ದೇಶದ ಹಬ್ಬಕ್ಕೆ ವ್ಯಾಪಾರಿ ಕಂಪನಿಗಳು ತನ್ನ ಗ್ರಾಹಕರಿಗೆ ಭರ್ಜರಿ ಆಫರ್‌ಗಳನ್ನು ನೀಡುತ್ತಿವೆ. ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ಇ - ಕಾಮರ್ಸ್‌ ಕಂಪನಿಗಳು ಇಂಡಿಪೆಂಡೆನ್ಸ್‌ ಸೇಲ್‌ ಅನ್ನು ಈಗಾಗಲೇ ನಡೆಸುತ್ತಿವೆ. ಇದೇ ರೀತಿ, ಹಲವು ಕಂಪನಿಗಳು ಸಹ ಆಫರ್‌ಗಳನ್ನು ನೀಡುತ್ತಿವೆ. ಈಗ ವಿಮಾನಯಾನ ಕಂಪನಿಯೊಂದು ಸಹ ಗ್ರಾಹಕರಿಗೆ ಭರ್ಜರಿ ಆಫರ್‌ ನೀಡುತ್ತಿದೆ.

ಭಾರತೀಯ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ನೆನಪಿಗಾಗಿ, GO FIRST (ಹಿಂದೆ GoAir ಎಂದು ಕರೆಯಲಾಗುತ್ತಿತ್ತು) ಬುಧವಾರದಂದು ಸೀಮಿತ ಅವಧಿಯ ಸ್ವಾತಂತ್ರ್ಯ ದಿನದ ಸೇಲ್‌ ಅನ್ನು ಪ್ರಾರಂಭಿಸಿದೆ. ಈ ಟಿಕೆಟ್‌ಗಳ ದರ ರೂ. 1,508 (ತೆರಿಗೆಗಳನ್ನು ಒಳಗೊಂಡಂತೆ) ರಿಂದ ಆರಂಭವಾಗಲಿದ್ದು, ಇಷ್ಟು ಹಣ ನೀಡಿದರೆ ಸಾಕು ದೇಶೀಯ ವಿಮಾನಗಳಲ್ಲಿ ನೀವು ಪ್ರಯಾಣಿಸಬಹುದು. ಈ ಬೆರಗುಗೊಳಿಸುವ ದರಗಳೊಂದಿಗೆ ಪ್ರಯಾಣಕ್ಕಾಗಿ ಗೋ ಫಸ್ಟ್‌ (Go First) ಕಂಪನಿ ಸೆಪ್ಟೆಂಬರ್‌ 1 ರಿಂದ ಮುಂದಿನ ವರ್ಷ ಮಾರ್ಚ್‌ 31 ರವರೆಗೆ ದೇಶೀಯ ವಿಮಾನಗಳಲ್ಲಿ ಪ್ರಯಾಣಿಸುವ ವ್ಯಕ್ತಿಗಳಿಗೆ ಈ ಆಫರ್‌ ನೀಡುತ್ತಿದೆ. ಆದರೆ, ಈ ಆಫರ್‌ ಪಡೆಯಲು ನೀವು ಆಗಸ್ಟ್‌ 10 ರಿಂದ ಆಗಸ್ಟ್‌ 13 ರವರೆಗೆ ವಿಮಾನದ ಟಿಕೆಟ್‌ ಅನ್ನು ಬುಕ್‌ ಮಾಡಬೇಕಾಗಿದೆ.  

Turn the travel mode 🔛because the Independence Sale is here!
Fly and enjoy domestic fares starting at Rs.1,508 only.

Booking Period: 10th to 13th Aug, 2022
Travel Period: 1st Sep, 2022 to 31st March, 2023.

Hurry! Book Now : https://t.co/y3UWMoztsX pic.twitter.com/W1wdnrZecu

— GO FIRST (@GoFirstairways)

ಆಗಸದಲ್ಲಿ ಸ್ಥಗಿತಗೊಂಡ ವಿಮಾನದ ಎಸಿ : ತಲೆ ತಿರುಗಿ ಬಿದ್ದ 3 ಪಯಣಿಗರು

ಗ್ರಾಹಕರಿಗೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ವಿಮಾನದಲ್ಲಿ ವಿಹರಿಸಲು ಹಾಗೂ ಮುಂಚಿತವಾಗಿ ಪ್ಲ್ಯಾನ್‌ ಮಾಡಲು ಈ ಸೇಲ್‌ ಅನುವು ಮಾಡಿಕೊಡುತ್ತದೆ. ಅನುಕೂಲತೆ ಮತ್ತು ಕೈಗೆಟುಕುವ ಹಾರಾಟದ ಅನುಭವದ ಜೊತೆಗೆ, ಮೌಲ್ಯ ಚಾಲಿತ ಉಪಕ್ರಮಗಳೊಂದಿಗೆ ತಮ್ಮ ಗ್ರಾಹಕರಿಗೆ ವಿಮಾನ ಆಯ್ಕೆಗಳು ಮತ್ತು ನಮ್ಯತೆಯನ್ನು ಒದಗಿಸುವಲ್ಲಿ Go First ಸ್ಥಿರವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ವಿಮಾನದ ಟಿಕೆಟ್‌ ಬುಕ್‌ ಮಾಡುವುದು ಹೇಗೆ..?
ಇನ್ನು, ಗೋ ಫಸ್ಟ್‌ ವಿಮಾನಯಾನ ಸಂಸ್ಥೆಯ ಈ ಇಂಡಿಪೆಂಡೆನ್ಸ್‌ ಡೇ ಸೇಲ್‌ ಅನ್ನು ನೀವು ಸದುಪಯೋಗ ಪಡಿಸಿಕೊಳ್ಳಲು ಮಾಡಬೇಕಿರುವುದು ಇಷ್ಟೇ. ಇಂದಿನಿಂದ ಅಂದರೆ ಆಗಸ್ಟ್‌ 10, 2022 ರಿಂದ ಆಗಸ್ಟ್‌ 13, 2022 ರವರೆಗೆ GO FIRST ವೆಬ್‌ಸೈಟ್‌ನಲ್ಲಿ (www.FlyGoFirst.com) ಅಥವಾ GO FIRST ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಬಹುದು. 
ಈ ಕೊಡುಗೆಯ ಅಡಿಯಲ್ಲಿ ಟಿಕೆಟ್‌ಗಳನ್ನು ರೀಫಂಡ್‌ ಸಹ ಮಾಡಬಹುದು. ಆದರೆ, ಬದಲಾವಣೆ ಶುಲ್ಕ ಮತ್ತು ದರ ವ್ಯತ್ಯಾಸದೊಂದಿಗೆ ಬದಲಾಯಿಸಬಹುದಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿಕೊಂಡಿದೆ.

ಶಿಫ್ಟ್ ಮುಗಿತೆಂದು ವಿಮಾನ ಪ್ರಯಾಣ ಮುಂದುವರೆಸಲು ನಿರಾಕರಿಸಿದ ಪಾಕ್‌ ಪೈಲಟ್‌

 “ಭಾರತೀಯ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ನಮಗೆ ಇದು ಸಂತೋಷದಾಯಕ ಸಂದರ್ಭವಾಗಿದೆ. ಈ ಸಂಭ್ರಮಾಚರಣೆಯ ದಿನದಂದು, ನಾವು ನಮ್ಮ ಸ್ವಾತಂತ್ರ್ಯದ ಬಗ್ಗೆ ಅಪಾರ ಹೆಮ್ಮೆ ಪಡುತ್ತೇವೆ ಮತ್ತು ಈ ವರ್ಷ ನಮ್ಮ ಪ್ರಯಾಣಿಕರೊಂದಿಗೆ ಅದನ್ನು ಆಚರಿಸಲು ನಾವು ಬಯಸುತ್ತೇವೆ. GO FIRST ಗ್ರಾಹಕರನ್ನು ಕೇಂದ್ರೀಕರಿಸುವ ಶ್ರೇಷ್ಠತೆಗೆ ಹಾಗೂ ತನ್ನ ಬದ್ಧತೆಗೆ ದೃಢವಾಗಿ ಉಳಿದಿದೆ ಮತ್ತು ಈ ಸೇವೆಯು ಅತ್ಯುತ್ತಮ ಗ್ರಾಹಕರ ಆನಂದವನ್ನು ನೀಡುವ ಮತ್ತೊಂದು ಉಪಕ್ರಮವಾಗಿದೆ. ಈ ಹಿನ್ನೆಲೆ ಪ್ರಯಾಣಿಕರಿಗೆ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಲು ಮತ್ತು ಅವರ ಪ್ರಯಾಣವನ್ನು ಪ್ಲ್ಯಾನ್‌ ಮಾಡಲು ಇದು ಅತ್ಯುತ್ತಮ ಸಮಯವಾಗಿದೆ’’ ಎಂದು ಗೋ ಫಸ್ಟ್‌ನ ಕಾರ್ಯ ನಿರ್ವಾಹಕ ಅಧಿಕಾರಿ (Chief Executive Officer) (ಸಿಇಒ) ಕೌಶಿಕ್‌ ಖೋನಾ ಮಾಹಿತಿ ನೀಡಿದ್ದಾರೆ.  

click me!