Business Idea: ಬಹುಬೇಡಿಕೆಯ ಈ ಬ್ಯುಸಿನೆಸ್ ಮಾಡಿ, ತಿಂಗಳಿಗೆ 10 ಲಕ್ಷ ಗಳಿಸಿ

By Suvarna News  |  First Published Aug 10, 2022, 12:56 PM IST

ಲಾಭ ತಂದುಕೊಡುವ ವ್ಯವಹಾರ ಶುರು ಮಾಡಲು ಪ್ರತಿಯೊಬ್ಬರೂ ಬಯಸ್ತಾರೆ. ಹಾಗೆ ತಿಂಗಳಿಗೆ ಲಕ್ಷಗಟ್ಟಲೆ ಲಾಭ ಸಿಗುವ ವ್ಯವಹಾರಕ್ಕೆ ಹೆಚ್ಚು ಒಲವು ನೀಡ್ತಾರೆ. ಕೈತುಂಬ ಸಂಪಾದನೆ ಮಾಡ್ಬೇಕು ಎನ್ನುವವರು ದೊಡ್ಡ ಮಟ್ಟದಲ್ಲಿ ಹಣ ಹೂಡಿಕೆ ಮಾಡಿ ಈ ವ್ಯವಹಾರ ಶುರು ಮಾಡ್ಬಹುದು.
 


ಸ್ವಂತ ವ್ಯಾಪಾರ ಶುರು ಮಾಡ್ಬೇಕು ಎಂದಾಗ ಮೊದಲು ಬರುವ ಪ್ರಶ್ನೆ ಯಾವ ವ್ಯಾಪಾರ ಶುರು ಮಾಡ್ಬೇಕು ಎನ್ನುವುದು. ಅನೇಕರಿಗೆ ತಮ್ಮದೇ ವ್ಯವಹಾರ ಆರಂಭಿಸುವ ಆಸೆಯಿರುತ್ತದೆ. ಆದರೆ ಯಾವುದಕ್ಕೆ ಹೆಚ್ಚು ಬೇಡಿಕೆಯಿದೆ ಹಾಗೆ ಯಾವುದ್ರಿಂದ ಹೆಚ್ಚು ಲಾಭವಿದೆ ಎಂಬುದು ತಿಳಿದಿರುವುದಿಲ್ಲ. ನಿಮ್ಮದೆ ವ್ಯಾಪಾರ ಶುರು ಮಾಡುವ ಆಲೋಚನೆಯಲ್ಲಿದ್ದರೆ ನೀವು ಕಾರ್ಡ್ ಬೋರ್ಡ್ ಬಾಕ್ಸ್ ತಯಾರಿಕೆ ಬ್ಯುಸಿನೆಸ್ ಶುರು ಮಾಡಬಹುದು. ಹೆಚ್ಚು ಬೇಡಿಕೆಯಲ್ಲಿರುವ ವಸ್ತುಗಳಲ್ಲಿ ಇದೂ ಒಂದು. ಪ್ಲಾಸ್ಟಿಕ್ ಕವರ್ ಬ್ಯಾನ್ ಆಗ್ತಿದ್ದಂತೆ ಇದಕ್ಕೆ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಸಣ್ಣ ವಸ್ತುವಿನಿಂದ ಹಿಡಿದು ದೊಡ್ಡ ವಸ್ತುವಿನವರೆಗೆ ಯಾವುದೇ ವಸ್ತುವನ್ನು ನೀವು ಪಾರ್ಸಲ್ ಮಾಡ್ಬೇಕಿದ್ರೆ ಅದಕ್ಕೆ ರಟ್ಟಿನ ಬಾಕ್ಸ್ ಬೇಕೇಬೇಕು. ಈ ವ್ಯವಹಾರದಲ್ಲಿ ನೀವು ತಿಂಗಳಿಗೆ 5 -10 ಲಕ್ಷದವರೆಗೆ ಲಾಭ ಗಳಿಸಬಹುದು. ಹಳ್ಳಿಯಿರಲಿ ಇಲ್ಲ ನಗರ ಪ್ರದೇಶವಿರಲಿ ಎಲ್ಲ ಕಡೆ ಈ ಕಾರ್ಡ್ ಬೋರ್ಡ್ ಬಾಕ್ಸ್ ಗೆ ಬೇಡಿಕೆಯಿದೆ. ನಾವಿಂದು ಕಾರ್ಡ್ ಬೋರ್ಡ್ ಬಾಕ್ಸ್ ಬ್ಯುಸಿನೆಸ್ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿಯನ್ನು ನೀಡ್ತೇವೆ. 

ಕಾರ್ಡ್ ಬೋರ್ಡ್ ಬಾಕ್ಸ್ (Cardboard Box) ಬ್ಯುಸಿನೆಸ್  ಶುರು ಮಾಡಲು ಎಷ್ಟು ಬಂಡವಾಳ ಬೇಕು? : ಇದನ್ನು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸುವುದು ಕಷ್ಟ. ನೀವು ದೊಡ್ಡ ಮಟ್ಟದಲ್ಲಿಯೇ ವ್ಯವಹಾರ (Business) ಶುರು ಮಾಡಿದ್ರೆ ಹೆಚ್ಚಿನ ಲಾಭ ಪಡೆಯಬಹುದು. ಹಾಗಾಗಿ ಬಂಡವಾಳ ಸ್ವಲ್ಪ ಹೆಚ್ಚು ಬೇಕಾಗುತ್ತದೆ.  ಸೆಮಿ ಆಟೋಮ್ಯಾಟಿಕ್ (Automatic) ಮೆಷಿನ್ ಮೂಲಕ ಈ ವ್ಯವಹಾರವನ್ನು ಪ್ರಾರಂಭಿಸಲು ನೀವು ಕನಿಷ್ಟ 20 ಲಕ್ಷ ರೂಪಾಯಿಗಳನ್ನು ಖರ್ಚು (Expense) ಮಾಡಬೇಕಾಗುತ್ತದೆ. ನೀವು ಸಂಪೂರ್ಣ ಸ್ವಯಂಚಾಲಿತ ಯಂತ್ರಗಳ ಮೂಲಕ ಈ ವ್ಯವಹಾರವನ್ನು ಪ್ರಾರಂಭಿಸಲು ಆಲೋಚನೆ ಮಾಡಿದ್ದರೆ ನೀವು 50 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಸಂಪೂರ್ಣ ಸ್ವಯಂಚಾಲಿತ ಯಂತ್ರ ಬಳಕೆ ಮಾಡಿದ್ರೆ ನಿಮ್ಮ ಕೆಲಸ ಸುಲಭವಾಗುತ್ತದೆ.

Tap to resize

Latest Videos

ಇದನ್ನೂ ಓದಿ: ಐಟಿ ರಿಟರ್ನ್ ಸಲ್ಲಿಕೆ ಮಾಡಿರೋರು ರೀಫಂಡ್ ಸ್ಟೇಟಸ್ ಚೆಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ

ಕಾರ್ಡ್ ಬೋರ್ಡ್ ಬಾಕ್ಸ್ ವ್ಯವಹಾರ ಶುರು ಮಾಡಲು ಏನು ಅಗತ್ಯವಿದೆ ? : ಈ ವ್ಯವಹಾರವನ್ನು ಪ್ರಾರಂಭಿಸುವ ಮೊದಲು ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಬೇಕು. ಕಚ್ಚಾ ವಸ್ತುವಿನ ರೂಪದಲ್ಲಿ ಮುಖ್ಯವಾಗಿ ಕ್ರಾಫ್ಟ್ ಪೇಪರ್ ಅಗತ್ಯವಿದೆ. ಇದರ ಮಾರುಕಟ್ಟೆ (Market) ಬೆಲೆ ಕೆಜಿಗೆ 40 ರೂಪಾಯಿ. ನೀವು ಉತ್ತಮ ಗುಣಮಟ್ಟದ ಕ್ರಾಫ್ಟ್ ಪೇಪರ್ ಬಳಸಿದ್ರೆ ಉತ್ತಮ ಗುಣಮಟ್ಟದ ಬಾಕ್ಸ್ ತಯಾರಿಸಬಹುದು. ಹಾಗಾಗಿ ಕ್ರಾಫ್ಟ್ ಪೇಪರ್ ಖರೀದಿ (Purchase) ವೇಳೆ ಗುಣಮಟ್ಟಕ್ಕೆ ಬೆಲೆ ನೀಡಬೇಕಾಗುತ್ತದೆ. 
ಕಚ್ಚಾ ವಸ್ತು (Raw Material) ವಿನ ಜೊತೆ ಜಾಗದ ಅವಶ್ಯಕತೆಯಿದೆ. ಈ ವ್ಯವಹಾರವನ್ನು ಪ್ರಾರಂಭಿಸಲು, ನೀವು ಸುಮಾರು 5000 ಚದರ ಅಡಿ ಜಾಗವನ್ನು ಹೊಂದಿರಬೇಕು. ಇದರೊಂದಿಗೆ, ಸರಕುಗಳನ್ನು ಇಡಲು ಗೋದಾಮು ಕೂಡ ಅಗತ್ಯವಿದೆ.

ಇದನ್ನೂ ಓದಿ: Earn Money: ದಿನದಲ್ಲಿ ಗಂಟೆ ಕೆಲಸ ಮಾಡಿ, ಹಣ ಗಳಿಸಿ 

ಈ ವ್ಯವಹಾರದಿಂದ ನಿಮಗೆ ಬರುವ ಲಾಭ (Profit) ಎಷ್ಟು? : ಮೊದಲೇ ಹೇಳಿದಂತೆ ಈ ವ್ಯವಹಾರ ಶುರು ಮಾಡಲು ನಗರ ಪ್ರದೇಶವಾಗ್ಬೇಕು ಎಂದೇನಿಲ್ಲ. ನಿಮ್ಮದೇ ಸ್ವಂತ ಜಾಗವಿದ್ದರೆ ನೀವು ಹಳ್ಳಿಯಲ್ಲೂ ಇದನ್ನು ಶುರು ಮಾಡಬಹುದು. ನಂತ್ರ ಅಗತ್ಯವಿರುವ ಪ್ರದೇಶಕ್ಕೆ ಬಾಕ್ಸ್ ಕಳುಹಿಸಬಹುದು. ನೀವು ಯಾವ ಗುಣಮಟ್ಟದ ಬಾಕ್ಸ್ ನೀಡ್ತಿರಿ ಎಂಬ ಆಧಾರದ ಮೇಲೆ ಲಾಭ ನಿಂತಿರುತ್ತದೆ. ಒಳ್ಳೆಯ ಗುಣಮಟ್ಟದ ಬಾಕ್ಸ್ ತಯಾರಿಸಿ ಮಾರಾಟ ಮಾಡಿದ್ರೆ ನೀವು ಪ್ರತಿ ತಿಂಗಳು 5 ರಿಂದ 10 ಲಕ್ಷ ರೂಪಾಯಿ ಗಳಿಸಬಹುದು.  ದೊಡ್ಡ ದೊಡ್ಡ ಕಂಪನಿಗಳ ಜೊತೆ ನೀವು ಒಪ್ಪಂದ ಮಾಡಿಕೊಂಡ್ರೆ ಮತ್ತಷ್ಟು ಲಾಭವನ್ನು ನೀವು ಆರಾಮವಾಗಿ ಗಳಿಸಬಹುದು. 

click me!