ಜಾಗತಿಕ ನಾವಿನ್ಯತಾ ಸೂಚ್ಯಂಕ (GII) 2023ರ ಶ್ರೇಯಾಂಕದಲ್ಲಿ ಭಾರತವು 132 ಆರ್ಥಿಕತೆಗಳಲ್ಲಿ 40 ನೇ ಸ್ಥಾನ ಪಡೆದಿದೆ. ಜಿನೇವಾ ಮೂಲದ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO) ಈ ಸೂಚ್ಯಂಕ ಸಿದ್ಧಪಡಿಸಿದೆ.
ನವದೆಹಲಿ: ಜಾಗತಿಕ ನಾವಿನ್ಯತಾ ಸೂಚ್ಯಂಕ (GII) 2023ರ ಶ್ರೇಯಾಂಕದಲ್ಲಿ ಭಾರತವು 132 ಆರ್ಥಿಕತೆಗಳಲ್ಲಿ 40 ನೇ ಸ್ಥಾನ ಪಡೆದಿದೆ. ಜಿನೇವಾ ಮೂಲದ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO) ಈ ಸೂಚ್ಯಂಕ ಸಿದ್ಧಪಡಿಸಿದೆ. ಸೂಚ್ಯಂಕದಲ್ಲಿ ಕಳೆದ ಹಲವಾರು ವರ್ಷಗಳಿಂದ ಭಾರತವು ಏರುಗತಿಯಲ್ಲಿದೆ. 2015ರಲ್ಲಿ ಪಡೆದಿದ್ದ 81 ಸ್ಥಾನದಿಂದ ಈ ವರ್ಷ 40 ಕ್ಕೆ ಏರುತ್ತಿರುವ ಪಥದಲ್ಲಿದೆ ಎಂದು ಭಾರತ ಸರ್ಕಾರದ ನೀತಿ ಆಯೋಗ (Niti Aayog) ಹೇಳಿದೆ.
ಸ್ಟಾರ್ಟಪ್‌ಗಳಿಗೆ (startups) ದೇಶದಲ್ಲಿ ಉತ್ತಮ ವಾತಾವರಣ ಸೃಷ್ಟಿ, ಖಾಸಗಿ ಹಾಗೂ ಸರ್ಕಾರಿ ಸಂಶೋಧನಾ ಸಂಸ್ಥೆಗಳ ಅದ್ಭುತ ಕೆಲಸ, ಜ್ಞಾನ ಬಂಡವಾಳ ಸುಧಾರಣೆ- ಇತ್ಯಾದಿಗಳು ಭಾರತದ ಸೂಚ್ಯಂಕ ಸುಧಾರಣೆಗೆ ಕಾರಣವಾಗಿವೆ. ಜಾಗತಿಕ ನಾವಿನ್ಯತಾ ಸೂಚ್ಯಂಕವು(Global Innovation Index), ವಿಶ್ವದಾದ್ಯಂತ ಸರ್ಕಾರಗಳಿಗೆ ತಮ್ಮ ದೇಶಗಳಲ್ಲಿನ ನಾವೀನ್ಯತೆಗೆ ಸಂಬಂಧಿಸಿದ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳನ್ನು ಸೂಚಿಸುವ ವಿಶ್ವಾಸಾರ್ಹ ಮಾನದಂಡವಾಗಿದೆ.
ಅಮೆರಿಕ ರಾಯಭಾರಿ ಕಚೇರಿಯಿಂದ ಈ ವರ್ಷ 10 ಲಕ್ಷ ವೀಸಾ ವಿತರಣೆ
ನವದೆಹಲಿ: ಪ್ರಸಕ್ತ ವರ್ಷದಲ್ಲಿ 10 ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಅಮೆರಿಕದ ವಲಸೆಯಲ್ಲದ ವೀಸಾ ನೀಡಬೇಕೆಂಬ ಗುರಿಯನ್ನು ಅಮೆರಿಕದ ರಾಯಭಾರ (US Embassy) ಕಚೇರಿ ಗುರುವಾರ ಪೂರೈಸಿದೆ. ಅಮೆರಿಕದಲ್ಲಿ ತಮ್ಮ ಮಗನ ಪದವಿ ಸಮಾರಂಭದಲ್ಲಿ ಭಾಗಿಯಾಗಲು ವೀಸಾಗೆ ಅರ್ಜಿ ಸಲ್ಲಿಸಿದ್ದ ದಂಪತಿಗಳು ಈ ವೀಸಾವನ್ನು ಪಡೆದುಕೊಳ್ಳಬಹುದು. ಭಾರತದಲ್ಲಿನ ಅಮೆರಿಕ ರಾಯಭಾರಿ (US Ambassador) ಎರಿಕ್ ಗಾರ್ಸೆಟ್ಟಿ (Eric Garcetti) ಕೊನೆಯ ವೀಸಾವನ್ನು ವಿತರಿಸಿದರು.