ಕಳೆದ 4 ವರ್ಷಗಳಲ್ಲಿ ಭಾರತದ ಆರ್ಥಿಕ ಸಮಾನತೆ ಏರುಗತಿಯಲ್ಲಿ: ವಿಶ್ವ ಆರ್ಥಿಕ ವೇದಿಕೆ ವರದಿ

By Suvarna News  |  First Published Jun 13, 2024, 1:03 PM IST

ಹೆಣ್ಣು ಗಂಡಿನ ನಡುವೆ ಲಿಂಗನುಪಾತದಲ್ಲಿ ಎಷ್ಟು ಅಂತರವಿದೆ ಎಂಬ ಬಗ್ಗೆ ಜಾಗತಿಕ ಲಿಂಗಂತರ ಸೂಚ್ಯಂಕವೂ ತನ್ನ ವರದಿ ಬಿಡುಗಡೆ ಮಾಡಿದ್ದು, ವಿಶ್ವದ ಯಾವ ದೇಶಕ್ಕೆ ಎಷ್ಟನೇ ಸ್ಥಾನವಿದೆ. ಭಾರತ ಎಷ್ಟನೇ ಸ್ಥಾನದಲ್ಲಿದೆ ಎಂಬ ಮಾಹಿತಿ ಇಲ್ಲಿದೆ. 


ನವದೆಹಲಿ: ಜೈವಿಕ ಸರಪಳಿ ಸಮರ್ಪಕವಾಗಿದ್ದರೆ ಪರಿಸರಕ್ಕೆ ಎಷ್ಟು ಫಲಪ್ರದೋ ಅದೇ ರೀತಿ ಹೆಣ್ಣು ಹಾಗೂ ಗಂಡಿನ ಸಂಖ್ಯೆಯೂ ಸಮಾನವಾಗಿದ್ದರಷ್ಟೇ ಸಮಾಜ, ದೇಶ ವಿಶ್ವಕ್ಕೆ ಶ್ರೇಯಸ್ಸು. ಆದರೆ ಗಂಡು ಮಗುವಿನ ವ್ಯಾಮೋಹದ ಕಾರಣವೂ ಸೇರಿದಂತೆ ಬೇರೆ ಬೇರೆ ಕಾರಣಕ್ಕೆ ಭಾರತ ಹಾಗೂ ಇತರ ದೇಶಗಳಲ್ಲಿ ಹಾಗೂ ಇಡೀ ವಿಶ್ವದಲ್ಲಿ ಹೆಣ್ಣು ಗಂಡುಗಳ ಸಂಖ್ಯೆಯಲ್ಲಿ ಭಾರಿ ವ್ಯತ್ಯಾಸವಿದೆ. ಹೆಣ್ಣು ಗಂಡಿನ ನಡುವೆ ಲಿಂಗನುಪಾತದಲ್ಲಿ ಎಷ್ಟು ಅಂತರವಿದೆ ಎಂಬ ಬಗ್ಗೆ ಜಾಗತಿಕ ಲಿಂಗಂತರ ಸೂಚ್ಯಂಕವೂ ತನ್ನ ವರದಿ ಬಿಡುಗಡೆ ಮಾಡಿದ್ದು, ವಿಶ್ವದ ಯಾವ ದೇಶಕ್ಕೆ ಎಷ್ಟನೇ ಸ್ಥಾನವಿದೆ. ಭಾರತ ಎಷ್ಟನೇ ಸ್ಥಾನದಲ್ಲಿದೆ ಎಂಬ ಮಾಹಿತಿ ಇಲ್ಲಿದೆ. 

ವಿಶ್ವ ಆರ್ಥಿಕ ವೇದಿಕೆಯ ಜಾಗತಿಕ ಲಿಂಗ ಅಂತರ ಸೂಚ್ಯಂಕ ನೀಡಿದ ಮಾಹಿತಿ ಪ್ರಕಾರ, ಜಾಗತಿಕ ಲಿಂಗನುಪಾತ ಅಂತರದ ಪಟ್ಟಿಯಲ್ಲಿ ಭಾರತಕ್ಕೆ 129ನೇ ಸ್ಥಾನವಿದೆ. ಹಾಗೆಯೇ ದಕ್ಷಿಣ ಏಷ್ಯಾದ ದೇಶಗಳಲ್ಲಿ ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಮತ್ತು ಭೂತಾನ್ ನಂತರ ಭಾರತಕ್ಕೆ 5ನೇ ಸ್ಥಾನವಿದೆ.  ಪಾಕಿಸ್ತಾನ ಕೊನೆಯ ಸ್ಥಾನದಲ್ಲಿದೆ.  ಹಾಗೆಯೇ ಜಾಗತಿಕ ಮಟ್ಟದ ಲಿಂಗನುಪಾತ ಅಂತರ ಸೂಚ್ಯಂಕದ ಪ್ರಕಾರ ಆಫ್ರಿಕಾ ರಾಷ್ಟ್ರ ಸುಡಾನ್ ಒಟ್ಟು 146 ರಾಷ್ಟ್ರಗಳ ಪೈಕಿ ಕೊನೆಯ ಸ್ಥಾನದಲ್ಲಿದ್ದರೆ ಅದಕ್ಕಿಂತ ಎರಡು ಸ್ಥಾನ ಮುಂದೆ 145ನೇ ಸ್ಥಾನದಲ್ಲಿ ಪಾಕಿಸ್ತಾನವಿದೆ. 

Tap to resize

Latest Videos

ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ದೇಶದ ಪಟ್ಟಿ ಬಿಡುಗಡೆ, ಭಾರತಕ್ಕೆ ಎಷ್ಟನೇ ಸ್ಥಾನ?

ಬಾಂಗ್ಲಾದೇಶ, ಸುಡಾನ್, ಇರಾನ್, ಪಾಕಿಸ್ತಾನ ಮತ್ತು ಮೊರಾಕೊದಂತೆಯೇ  ಭಾರತವು ಕೂಡ ಕಡಿಮೆ ಮಟ್ಟದ ಆರ್ಥಿಕ ಸಮಾನತೆಯನ್ನು ಹೊಂದಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ.  ಏಕೆಂದರೆ ಈ ದೇಶಗಳಲೆಲ್ಲಾ  ಅಂದಾಜು ಗಳಿಸಿದ ಆದಾಯದಲ್ಲಿ 30 ಪ್ರತಿಶತಕ್ಕಿಂತ ಕಡಿಮೆ ಲಿಂಗ ಸಮಾನತೆಯನ್ನು ಹೊಂದಿದ್ದಾರೆ. ಆದರೆ ಮಾಧ್ಯಮಿಕ ಶಿಕ್ಷಣದಲ್ಲಿ ದಾಖಲಾತಿಗೆ ಸಂಬಂಧಿಸಿದಂತೆ ಭಾರತವು ಅತ್ಯುತ್ತಮ ಲಿಂಗ ಸಮಾನತೆಯನ್ನು ಹೊಂದಿದೆ. ಹಾಗೆಯೇ ಮಹಿಳೆಯರ ರಾಜಕೀಯ ಸಬಲೀಕರಣದಲ್ಲಿ ಭಾರತವೂ ವಿಶ್ವ ಮಟ್ಟದಲ್ಲಿ 65 ನೇ ಸ್ಥಾನವನ್ನು ಹೊಂದಿದೆ. 

ಹಾಗೆಯೇ ಕಳೆದ 50 ವರ್ಷಗಳಲ್ಲಿ ರಾಷ್ಟ್ರಗಳ ಮುಖ್ಯಸ್ಥರ ಹುದ್ದೆಯಲ್ಲಿರುವ ಮಹಿಳೆ /ಪುರುಷರ ಸಮಾನತೆಗೆ ಸಂಬಂಧಿಸಿದಂತೆ ಭಾರತವೂ 10ನೇ ಸ್ಥಾನದಲ್ಲಿದೆ. ವಿಶ್ವ ಆರ್ಥಿಕ ವೇದಿಕೆ ಹೇಳುವಂತೆ ಭಾರತದಲ್ಲಿ ಕಳೆದ 4 ವರ್ಷದಲ್ಲಿ ಆರ್ಥಿಕ ಸಮಾನತೆ ಏರುಗತಿಯಲ್ಲಿ ಸಾಗಿದೆ. ಜಗತ್ತು ಶೇ. 68.5 ರಷ್ಟು ಲಿಂಗನುಪಾತ ಅಂತರವನ್ನು ಹೊಂದಿದೆ ಆದರೆ ಪ್ರಸ್ತುತ ಸ್ಥಿತಿಯಲ್ಲಿ ವಿಶ್ವದಲ್ಲಿ ಸಂಪೂರ್ಣ ಲಿಂಗ ಸಮಾನತೆಯನ್ನು ಸಾಧಿಸಲು ಇನ್ನು 134 ವರ್ಷಗಳು ಬೇಕಾಗಬಹುದು ಎಂದು ವಿಶ್ವ ಆರ್ಥಿಕ ವೇದಿಕೆ ಹೇಳಿದೆ.

ಜಾಗತಿಕ ಫರ್ಟಿಲಿಟಿ ರೇಟ್‌ನಲ್ಲಿ ಭಾರೀ ಇಳಿಕೆ, ಆತಂಕ ಮೂಡಿಸಿದ ಅಧ್ಯಯನದ ವರದಿ

click me!