2025ರಲ್ಲಿ ಜಾಗತಿಕ ಆರ್ಥಿಕತೆಯಲ್ಲಿ ಕುಂಠಿತ: ಭಾರತಕ್ಕೂ ಕಾದಿದೆಯಾ ಆಪತ್ತು?

Published : Jan 17, 2025, 07:47 AM IST
2025ರಲ್ಲಿ ಜಾಗತಿಕ ಆರ್ಥಿಕತೆಯಲ್ಲಿ ಕುಂಠಿತ: ಭಾರತಕ್ಕೂ ಕಾದಿದೆಯಾ ಆಪತ್ತು?

ಸಾರಾಂಶ

ಸಮೀಕ್ಷೆಯಲ್ಲಿ ಪಾಲ್ಗೊಂಡ ಅರ್ಥಶಾಸ್ತ್ರಜ್ಞರ ಪೈಕಿ ಶೇ.56ರಷ್ಟು ಮಂದಿ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ ಎಂದರೆ, ಕೇವಲ ಶೇ.17ರಷ್ಟು ಜನ ಸುಧಾರಣೆಯ ನಿರೀಕ್ಷೆಯಲ್ಲಿದ್ದಾರೆ. ಅಮೆರಿಕದ ಆರ್ಥಿಕತೆ ಉತ್ತಮ ಬೆಳವಣಿಗೆ ಕಾಣಲಿದ್ದು, ದಕ್ಷಿಣ ಏಷ್ಯಾ, ಮುಖ್ಯವಾಗಿ ಭಾರತವೂ ಬೆಳವಣಿಗೆಯ ಹಾದಿಯಲ್ಲಿ ಸಾಗಲಿದೆ. 

ನವದೆಹಲಿ(ಜ.17):  2025ರಲ್ಲಿ ಜಾಗತಿಕ ಆರ್ಥಿಕತೆ ಕುಂಠಿತವಾಗುವ ನಿರೀಕ್ಷೆ ಇದೆ. ಆದರೂ ಈ ಅವಧಿಯಲ್ಲಿ ಭಾರತದ ಆರ್ಥಿಕತೆ ಉತ್ತಮ ಬೆಳವಣಿಗೆ ಕಾಣಲಿದೆಯೆಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ದಾವೋಸ್‌ನಲ್ಲಿ “ಶೀಘ್ರವೇ ವಿಶ್ವ ಆರ್ಥಿಕ ಶೃಂಗ ನಡೆಯಲಿದ್ದು, ಅದಕ್ಕೂ ಮುನ್ನ ವರ್ಲ್ಡ್ ಎಕನಾಮಿಕ್ ಫೋರಂ ಆರ್ಥಿಕ ತಜ್ಞರ ಸಮೀಕ್ಷೆ ನಡೆಸಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ವರದಿ ಅನ್ವಯ, '2025ರಲ್ಲಿ ಜಾಗತಿಕ ಆರ್ಥಿಕತೆ ಅನೇಕ ಸವಾಲುಗಳನ್ನು ಎದುರಿಸಲಿದೆ ಎಂದು ತಿಳಿಸಿದೆ.

2024ರಲ್ಲಿ ಅತಿ ಹೆಚ್ಚು ಚಿನ್ನ ರಿಸರ್ವ್ ಮಾಡಿರುವ ಟಾಪ್ 10 ದೇಶಗಳಿವು; 2 ಸ್ಥಾನ ಮುಂದೆ ಜಿಗಿದ ಭಾರತ!

ಜೊತೆಗೆ ಸಮೀಕ್ಷೆಯಲ್ಲಿ ಪಾಲ್ಗೊಂಡ ಅರ್ಥಶಾಸ್ತ್ರಜ್ಞರ ಪೈಕಿ ಶೇ.56ರಷ್ಟು ಮಂದಿ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ ಎಂದರೆ, ಕೇವಲ ಶೇ.17ರಷ್ಟು ಜನ ಸುಧಾರಣೆಯ ನಿರೀಕ್ಷೆಯಲ್ಲಿದ್ದಾರೆ. ಅಮೆರಿಕದ ಆರ್ಥಿಕತೆ ಉತ್ತಮ ಬೆಳವಣಿಗೆ ಕಾಣಲಿದ್ದು, ದಕ್ಷಿಣ ಏಷ್ಯಾ, ಮುಖ್ಯವಾಗಿ ಭಾರತವೂ ಬೆಳವಣಿಗೆಯ ಹಾದಿಯಲ್ಲಿ ಸಾಗಲಿದೆ. 

ಆದರೆ ಯುರೋಪ್‌ನ ಆರ್ಥಿಕತೆ ಪತನವಾಗುವ ಸಾಧ್ಯತೆಯಿದೆ. ಕಡಿಮೆಯಾದ ಗ್ರಾಹಕ ಬೇಡಿಕೆ ಮತ್ತು ದುರ್ಬಲ ಉತ್ಪಾದಕತೆಯಿಂದಾಗಿ ಚೀನಾದ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಜಾಗತಿಕ ಆರ್ಥಿಕತೆ ಕುಸಿತಕ್ಕೆ ಸಂರಕ್ಷಣಾ ವಾದ, ಯುದ್ಧಗಳು, ನಿರ್ಬಂಧ ಹಾಗೂ ರಾಷ್ಟ್ರೀಯ ಭದ್ರತಾ ಕಾಳಜಿಗಳೇ ಕಾರಣ ಎನ್ನಲಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!