ಎಲ್ಐಸಿ ಈ ಪಾಲಿಸಿಯಲ್ಲಿ ದಿನಕ್ಕೆ 130ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ 27 ಲಕ್ಷ ರೂ. ರಿಟರ್ನ್

By Suvarna News  |  First Published Dec 31, 2022, 5:34 PM IST

ಹೆಣ್ಣು ಮಕ್ಕಳ ಮದುವೆ ವೆಚ್ಚಕ್ಕೆ ಹಣ ಕೂಡಿಡಲು ಕೂಡ ಎಲ್ಐಸಿ ಯೋಜನೆಯೊಂದನ್ನು ರೂಪಿಸಿದೆ. ಅದೇ ಎಲ್ಐಸಿ ಕನ್ಯಾದಾನ ಪಾಲಿಸಿ. ಈ ಪಾಲಿಸಿಯ ಮುಖ್ಯ ಉದ್ದೇಶ ಕಡಿಮೆ ಆದಾಯ ಹೊಂದಿರುವ ಪಾಲಕರಿಗೆ ಮಗಳ ಮದುವೆಗೆ ಸಂಪತ್ತು ಸಂಗ್ರಹಿಸಲು ನೆರವು ನೀಡೋದು. 
 


Business Desk:ಭಾರತದಲ್ಲಿ ಎಲ್ಲ ವರ್ಗದ ಜನರಿಗೂ ಹೂಡಿಕೆಗೆ ಸೂಕ್ತವಾದ ಯೋಜನೆಗಳನ್ನು ಭಾರತೀಯ ಜೀವ ವಿಮಾ ನಿಗಮ (ಎಲ್ ಐಸಿ) ರೂಪಿಸುತ್ತಲಿರುತ್ತದೆ. ಇದೇ ಕಾರಣಕ್ಕೆ ಇಂದಿಗೂ ಬಹುತೇಕ ಹೂಡಿಕೆದಾರರು ಎಲ್ಐಸಿಯ ಪಾಲಿಸಿಗಳನ್ನು ಖರೀದಿಸಲು ಜಾಸ್ತಿ ಯೋಚಿಸೋದಿಲ್ಲ. ಎಲ್ಐಸಿಗೆ ಕೇಂದ್ರ ಸರ್ಕಾರದ ಬೆಂಬಲವಿರುವ ಕಾರಣ  ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುವ ಕಾರಣ ಭಯಪಡುವ ಅಗತ್ಯವೂ ಇಲ್ಲ. ಹೆಣ್ಣು ಮಕ್ಕಳ ಮದುವೆ ವೆಚ್ಚಕ್ಕೆ ಹಣ ಕೂಡಿಡಲು ಕೂಡ ಎಲ್ಐಸಿ ಯೋಜನೆಯೊಂದನ್ನು ರೂಪಿಸಿದೆ. ಅದೇ ಎಲ್ಐಸಿ ಕನ್ಯಾದಾನ ಪಾಲಿಸಿ. ಈ ಪಾಲಿಸಿಯ ಮುಖ್ಯ ಉದ್ದೇಶ ಕಡಿಮೆ ಆದಾಯ ಹೊಂದಿರುವ ಪಾಲಕರಿಗೆ ಮಗಳ ಮದುವೆಗೆ ಸಂಪತ್ತು ಸಂಗ್ರಹಿಸಲು ನೆರವು ನೀಡೋದು. ಮದುವೆಗೆ ಸಾಕಷ್ಟು ಹಣದ ಅಗತ್ಯವಿರುವ ಕಾರಣ ಒಮ್ಮೆಗೆ ಸಂಗ್ರಹಿಸೋದು ಕಷ್ಟದ ಕೆಲಸ.  ಹೀಗಾಗಿ ಮೊದಲೇ ಸೂಕ್ತವಾದ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಮದುವೆ ಸಮಯದಲ್ಲಿ ಹಣದ ಅಡಚಣೆ ಉಂಟಾಗೋದಿಲ್ಲ. ಎಲ್ಐಸಿ ಕನ್ಯಾದಾನ ಪಾಲಿಸಿಯಲ್ಲಿ ದಿನಕ್ಕೆ 130 ರೂ. ಹೂಡಿಕೆ ಮಾಡಿದ್ರೆ ಸಾಕು, 25  ವರ್ಷಗಳ ಬಳಿಕ 27ಲಕ್ಷ ರೂ. ರಿಟರ್ನ್ ಗಳಿಸಬಹುದು. ಹಾಗಾದ್ರೆ ಎಲ್ಐಸಿ ಕನ್ಯಾದಾನ ಪಾಲಿಸಿಯಲ್ಲಿ ಯಾರು ಹೂಡಿಕೆ ಮಾಡಬಹುದು? ಎಷ್ಟು ಹೂಡಿಕೆ ಮಾಡಬಹುದು? ಇಲ್ಲಿದೆ ಮಾಹಿತಿ. 

ವಯಸ್ಸಿನ ಮಿತಿ ಎಷ್ಟು?
ಎಲ್ಐಸಿ ಕನ್ಯಾದಾನ ಪಾಲಿಸಿಯಲ್ಲಿ ಹೂಡಿಕೆ (Invest) ಮಾಡಲು ಹೂಡಿಕೆದಾರರಿಗೆ (Investors) ಕನಿಷ್ಠ 30 ವರ್ಷ ವಯಸ್ಸಾಗಿರಬೇಕು. ಹಾಗೆಯೇ ಮಗಳ ವಯಸ್ಸು ಕನಿಷ್ಠ ಒಂದು ವರ್ಷವಾಗಿರಬೇಕು. ಎಲ್ಐಸಿ ಕನ್ಯಾದಾನ ಪಾಲಿಸಿಯನ್ನು 13 ರಿಂದ 25 ವರ್ಷಗಳ ಅವಧಿಗೆ ಖರೀದಿಸಬಹುದು. 

Tap to resize

Latest Videos

ಹೊಸ ವರ್ಷದಲ್ಲಿ ದುಬಾರಿಯಾಗಲಿದೆಯಾ ಆರೋಗ್ಯ ವಿಮೆ? ಪ್ರೀಮಿಯಂ ಏರಿಕೆ ನಿರೀಕ್ಷೆ

ಈ ಪಾಲಿಸಿಗೆ ನೋಂದಣಿ ಮಾಡಿಸಿದ ಬಳಿಕ ಪಾಲಿಸಿದಾರ (Policyholder) ಮರಣ ಹೊಂದಿದ್ರೆ ಎಲ್ಐಸಿ ಪ್ರೀಮಿಯಂ (Premium) ವೆಚ್ಚವನ್ನು ಕವರ್ (Cover) ಮಾಡುತ್ತದೆ. ಹಾಗೆಯೇ ಮಗಳಿಗೆ 21 ವರ್ಷಗಳು ತುಂಬಿದ ಬಳಿಕ 11ಲಕ್ಷ ರೂ. ಪ್ರೀಮಿಯಂ (Premium) ಪಾವತಿ ಸಿಗಲಿದೆ. ಈ ಪಾಲಿಸಿಯ (Policy) ಕನಿಷ್ಠ ಅವಧಿ 13 ವರ್ಷಗಳು. ಹಾಗೆಯೇ ಇದರ ಮೆಚ್ಯೂರಿಟಿ ಅವಧಿ (Maturity peroid) 65 ವರ್ಷಗಳು. 
ಒಬ್ಬ ವ್ಯಕ್ತಿ 5ಲಕ್ಷ ರೂ. ಭರವಸೆ ನೀಡಿರುವ ಮೊತ್ತದ ವಿಮೆಯನ್ನು ಖರೀದಿಸಿದ್ರೆ 22 ವರ್ಷಗಳ ತನಕ ಪ್ರೀಮಿಯಂಗಳನ್ನು (Premiums) ಪಾವತಿಸಬೇಕು. ಇನ್ನು ರಿಕರಿಂಗ್ ಶುಲ್ಕ (Recuring fee) ಅಂದಾಜು 1,951ರೂ. ಆಗಿರಲಿದೆ. ಮೆಚ್ಯೂರಿಟಿ ಬಳಿಕ ಎಲ್ಐಸಿ ಪಾಲಿಸಿದಾರರಿಗೆ ಅಂದಾಜು 13.37ಲಕ್ಷ ರೂ. ಪಾವತಿಸಲಿದೆ. 

ಹೊಸ ವರ್ಷಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಈ 5 ಹಣಕಾಸಿನ ಉಡುಗೊರೆಗಳನ್ನು ನೀಡಿ

ದಿನಕ್ಕೆ 130 ರೂ. ಹೂಡಿಕೆ ಮಾಡಿ, 27ಲಕ್ಷ ರೂ. ರಿಟರ್ನ್ ಗಳಿಸೋದು ಹೇಗೆ?
ಒಂದು ವೇಳೆ ಒಬ್ಬ ವ್ಯಕ್ತಿ 10ಲಕ್ಷ ರೂ. ಕವರೇಜ್ ಹೊಂದಿರುವ ಕನ್ಯಾದಾನ ಪಾಲಿಸಿ (Kanyadaan Policy) ಖರೀದಿಸಿದ್ರೆ ಆತ 25 ವರ್ಷಗಳ ತನಕ ಪ್ರೀಮಿಯಂಗಳನ್ನು (Premiums) ಪಾವತಿಸಬೇಕು. ಇದಕ್ಕೆ ರಿಕರಿಂಗ್ ಶುಲ್ಕ (Reccuring fee) ಅಂದಾಜು 3,901ರೂ. ಮೆಚ್ಯೂರಿಟಿ ಬಳಿಕ ಎಲ್ಐಸಿ ವಿಮೆ ಕವರೇಜ್ ಪಡೆದ ವ್ಯಕ್ತಿಗೆ 26.75 ಲಕ್ಷ ರೂ. ಪಾವತಿಸಲಿದೆ. ಆದಾಯ ತೆರಿಗೆ ಕಾಯ್ದೆ (Income Tax Act) 1961ರ ಸೆಕ್ಷನ್ 80ಸಿ ಪ್ರೀಮಿಯಂ (Premium) ಪಾವತಿಗಳ ಮೇಲೆ ತೆರಿಗೆ ವಿನಾಯ್ತಿ ಪಡೆಯಲು ಹೂಡಿಕೆದಾರರಿಗೆ (Investors) ಅವಕಾಶ ನೀಡಲಿದೆ. ಈ ಪಾಲಿಸಿಯಲ್ಲಿ ಹೂಡಿಕೆ (Invest) ಮಾಡಿದ್ರೆ ಗರಿಷ್ಠ 1.50ಲಕ್ಷ ರೂ. ತೆರಿಗೆ ವಿನಾಯ್ತಿ (Tax exemption) ಪಡೆಯಬಹುದು. ಹೀಗಾಗಿ ನಿಮ್ಮ ಮಗಳ ವಿವಾಹ ವೆಚ್ಚಕ್ಕಾಗಿ ಉಳಿತಾಯ ಮಾಡಲು ಬಯಸಿದ್ರೆ ಎಲ್ಐಸಿಯ ಕನ್ಯಾದಾನ ಪಾಲಿಸಿಯಲ್ಲಿ ಹೂಡಿಕೆ ಮಾಡಬಹುದು. 
 

click me!