ಹೊಸ ವರ್ಷದಲ್ಲಿ ದುಬಾರಿಯಾಗಲಿದೆಯಾ ಆರೋಗ್ಯ ವಿಮೆ? ಪ್ರೀಮಿಯಂ ಏರಿಕೆ ನಿರೀಕ್ಷೆ
ಕೋವಿಡ್ -19 ಬಳಿಕ ಆರೋಗ್ಯ ವಿಮೆಗೆ ಬೇಡಿಕೆ ಹೆಚ್ಚಿದೆ. ಸೆಪ್ಟೆಂಬರ್ ಬಳಿಕ ಆರೋಗ್ಯ ವಿಮೆ ಕ್ಲೈಮ್ ಪ್ರಮಾಣದಲ್ಲಿ ಕೂಡ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ 2023ರಲ್ಲಿ ಆರೋಗ್ಯ ವಿಮೆ ಪ್ರೀಮಿಯಂ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ಡಿ.31): ಕೊರೋನಾ ಮಹಾಮಾರಿ ಕಾಣಿಸಿಕೊಂಡ ಬಳಿಕ ಜನರಲ್ಲಿ ಆರೋಗ್ಯ ವಿಮೆ ಕುರಿತ ಮನೋಭಾವ ಸಂಪೂರ್ಣ ಬದಲಾಗಿದೆ. ಹಿಂದೆ ಆರೋಗ್ಯ ವಿಮೆ ಮಾಡಿಸೋದು ಸುಮ್ಮನೆ ದಂಡ ಎಂಬ ಭಾವನೆ ಕೆಲವರಲ್ಲಿತ್ತು. ಆದರೆ, ಕೊರೋನಾದ ಸಮಯದಲ್ಲಿ ಆಸ್ಪತ್ರೆಯ ದುಬಾರಿ ವೆಚ್ಚಗಳನ್ನು ಭರಿಸಲು ಸಾಧ್ಯವಾಗದೆ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು. ಇಂಥ ಸಮಯದಲ್ಲಿ ಆರೋಗ್ಯ ವಿಮೆಯ ಮಹತ್ವದ ಅರಿವಾಗಿತ್ತು. ಇದೇ ಕಾರಣಕ್ಕೆ ಕೊರೋನಾ ಬಳಿಕ ಆರೋಗ್ಯ ವಿಮೆಗೆ ಬೇಡಿಕೆ ಹೆಚ್ಚಿತ್ತು. ಇನ್ನು ಇತ್ತೀಚಿನ ಕೆಲವು ತಿಂಗಳಲ್ಲಿ ಆರೋಗ್ಯ ವಿಮೆ ಕ್ಲೈಮ್ ಮಾಡಿಕೊಳ್ಳುತ್ತಿರೋರ ಸಂಖ್ಯೆ ಹೆಚ್ಚಿದೆ. ಇದಕ್ಕೆ ಕಾರಣ ಮಳೆ ಹಿನ್ನೆಲೆಯಲ್ಲಿ ಡೆಂಗ್ಯೂ ಹಾಗೂ ಮಲೇರಿಯಾ ಪ್ರಕರಣಗಳು ಹೆಚ್ಚಿರೋದು. ಇದ್ರಿಂದ ಆಸ್ಪತ್ರೆಗೆ ಸೇರ್ಪಡೆಗೊಳ್ಳುತ್ತಿರೋರ ಸಂಖ್ಯೆ ಕೂಡ ಏರಿಕೆ ಕಂಡಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಐಸಿಐಸಿಐ ಲೋಂಬರ್ಡ್ ಜನರಲ್ ಇನ್ಯುರೆನ್ಸ್ ಕಂಪನಿ ಕ್ಲೈಮ್ 2023ನೇ ಆರ್ಥಿಕ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಶೇ.82ಕ್ಕೆ ಏರಿಕೆಯಾಗಿದೆ. ಇದರ ಹಿಂದಿನ ತ್ರೈಮಾಸಿಕದಲ್ಲಿ ಶೇ.74 ರಷ್ಟಿತ್ತು. ಅದೇರೀತಿ ಸ್ಟಾರ್ ಹೆಲ್ತ್ ಇನ್ಯೂರೆನ್ಸ್ ಕ್ಲೇಮ್ ಪ್ರಮಾಣ ಕೂಡ 2023ನೇ ಆರ್ಥಿಕ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಶೇ.67ರಿಂದ ಶೇ.68ಕ್ಕೆ ಏರಿಕೆ ಕಂಡಿತ್ತು.
ಕೋವಿಡ್ ಸಮಯದಲ್ಲಿ ಆಸ್ಪತ್ರೆಗೆ ಸೇರ್ಪಡೆಗೊಂಡವರ ಸಂಖ್ಯೆಯಲ್ಲಿ ಹೆಚ್ಚಳವಾದ ಕಾರಣ ಎಲ್ಲ ವಿಮಾ ಕಂಪನಿಗಳ ಕ್ಲೈಮ್ ಪ್ರಮಾಣದಲ್ಲಿ ಹೆಚ್ಚಳವಾಗಿತ್ತು. ಆದರೆ, ಕೋವಿಡ್ ಪ್ರಕರಣಗಳು ಇಳಿಕೆಯಾದ ಬೆನ್ನಲ್ಲೇ ಈ ಪ್ರಮಾಣ ಕೋವಿಡ್ ಪೂರ್ವ ಮಟ್ಟಕ್ಕೆ ಇಳಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೋವಿಡ್ ಬಳಿಕದಲ್ಲಿಕೂಡ ಆಸ್ಪತ್ರೆಗೆ ಸೇರ್ಪಡೆಗೊಳ್ಳುತ್ತಿರುವ ಪ್ರಕರಣಗಳು ಹೆಚ್ಚೇ ಇವೆ. ದೀರ್ಘಾಕಾಲಿಕ ಕೋವಿಡ್ ಕಾರಣದಿಂದ ಈ ಪರಿಸ್ಥಿತಿ ನಿರ್ಮಾಣವಾಗಿರಬಹುದು ಎಂದು ಅಂದಾಜಿಸಲಾಗಿದೆ.
ನೀವಿನ್ನೂ ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಿಲ್ವ? ಹಾಗಾದ್ರೆ ಈ ಸರಳ ವಿಧಾನ ಅನುಸರಿಸಿ
ಕ್ಲೈಮ್ ಪ್ರಮಾಣದಲ್ಲಿ ಏರಿಕೆಯಾಗಿರೋದು 2023ರಲ್ಲಿ ಆರೋಗ್ಯ ವಿಮಾ ಪ್ರೀಮಿಯಂ ದರಗಳ ಹೆಚ್ಚಳಕ್ಕೆ ಕಾರಣವಾಗಬಹುದಾ? ಇಂಥದೊಂದು ಪ್ರಶ್ನೆ ಈಗ ವಿಮಾ ವಲಯದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಐಸಿಐಸಿಐ ಲೊಂಬರ್ಡ್ ಮುಖ್ಯ ಹಣಕಾಸು ಅಧಿಕಾರಿ ಗೋಪಾಲ್ ಬಾಲಚಂದ್ರನ್ 'ರಿಟೇಲ್ ಆರೋಗ್ಯ ದೀರ್ಘಕಾಲಿಕ ಪೋರ್ಟ್ ಫೋಲಿಯೋ ಆಗಿದೆ. ಹೀಗಾಗಿ ಅನುಭವದ ಆಧಾರದಲ್ಲಿ ನೀವು ಇದನ್ನು ನಿರ್ವಹಿಸಬೇಕಾಗುತ್ತದೆ. ವಿವಿಧ ಅವಧಿಗಳಲ್ಲಿ, ಅಗತ್ಯ ಬಿದ್ದಾಗಲೆಲ್ಲ ನೀವು ಪರಿಣಾಮಕಾರಿಯಾಗಿ ಬೆಲೆ ಪರಿಷ್ಕರಣೆ ಮಾಡಬೇಕಾಗುತ್ತದೆ' ಎಂದಿದ್ದಾರೆ. ಇನ್ನು ಐಸಿಐಸಿಐ ಲೋಬರ್ಡ್ ಕೊನೆಯದಾಗಿ ಬೆಲೆ ಪರಿಷ್ಕರಣೆ ಮಾಡಿದ್ದು 2021ರ ಮೂರನೇ ತ್ರೈಮಾಸಿಕದಲ್ಲಿ. ಆಗ ಸರಾಸರಿ ಪ್ರೀಮಿಯಂನಲ್ಲಿ ಶೇ.8ರಷ್ಟು ಹೆಚ್ಚಳ ಮಾಡಲಾಗಿತ್ತು.
ತಜ್ಞರ ಪ್ರಕಾರ 2022ನೇ ಸಾಲಿನ ಮೊದಲ ಎರಡು ತ್ರೈಮಾಸಿಕದಲ್ಲಿ ಕ್ಲೈಮ್ ಪ್ರಮಾಣ ಸ್ಥಿರವಾಗಿತ್ತು. ಆದರೆ, ಸೆಪ್ಟೆಂಬರ್ ಬಳಿಕ ಕ್ಲೈಮ್ ಪ್ರಮಾಣದಲ್ಲಿ ಏರಿಕೆ ಕಂಡುಬಂದಿತ್ತು. ಕೋವಿಡ್ -19 ಮುಂದಿನ ಅಲೆಯ ಭಯ ಹೆಚ್ಚುತ್ತಿದ್ದು, ಕ್ಲೈಮ್ ಪ್ರಮಾಣದಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಆರೋಗ್ಯ ವಿಮಾ ಪಾಲಿಸಿಗಳ ದರ ಶೀಘ್ರದಲ್ಲೇ ಹೆಚ್ಚಳವಾಗುವ ನಿರೀಕ್ಷೆಯಿದೆ.
ಹೊಸ ವರ್ಷಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಈ 5 ಹಣಕಾಸಿನ ಉಡುಗೊರೆಗಳನ್ನು ನೀಡಿ
ದೂರು ನೀಡಬಹುದು
ಒಂದು ವೇಳೆ ಕಂಪನಿ ಮೆಡಿಕ್ಲೈಮ್ ತಿರಸ್ಕರಿಸಿದ್ರೆ ನೋಂದಾಯಿತ ಪೋಸ್ಟ್ ಮೂಲಕ ವಿಮಾ ಕಂಪನಿಗೆ ಪತ್ರವನ್ನು ಕಳುಹಿಸುವ ಮೂಲಕ ನಿಮ್ಮ ದೂರನ್ನು ದಾಖಲಿಸಬೇಕು. ಕ್ಲೈಮ್ ತಿರಸ್ಕರಿಸಿದ ಕಾರಣ ಸರಿಯಾಗಿಲ್ಲ ಎಂದು ನೀವು ಕಂಪನಿಗೆ ಹೇಳಬಹುದು. ನಿಮ್ಮ ವಿಷ್ಯದ ಪರವಾಗಿ ನೀವು ವಾದವನ್ನು ಮಂಡಿಸಬೇಕು. ನೀವು ಏಕೆ ಕ್ಲೈಮ್ ಕೇಳುತ್ತಿದ್ದೀರಿ ಹಾಗೂ ಅದು ಏಕೆ ಸರಿಯಾಗಿದೆ ಎಂಬುದನ್ನು ನೀವು ವಿವರಿಸಬೇಕಾಗುತ್ತದೆ. ನೀವು ವಿಮೆ ಪಡೆದ ಕಂಪನಿ ಜೊತೆ ನಿಮ್ಮ ದೂರಿನ ಪತ್ರ ಮತ್ತು ಇಮೇಲ್‌ನ ಪ್ರತಿಯನ್ನು ನೀವು ಐಆರ್ ಡಿಎಐ (IRDAI) ಹೈದರಾಬಾದ್‌ನ ಇಮೇಲ್ ಐಡಿ s@irdai.gov.in ಗೆ ಕಳುಹಿಸಬೇಕು. ಕ್ಲೈಮ್ ನಿರಾಕರಣೆ ನಿಮಗೆ ಏಕೆ ಸಂತೋಷ ತಂದಿಲ್ಲ ಹಾಗೂ ಏಕೆ ವಿರೋಧಿಸುತ್ತಿದ್ದೀರಿ ಎಂಬುದಕ್ಕೆ ನೀವು ದಾಖಲೆ ನೀಡಬೇಕಾಗುತ್ತದೆ.