ಒಂದು ಡಿಸೈನ್, ಟ್ಯಾಗ್‌ಲೈನ್ ಮಾಡಿ 15 ಲಕ್ಷ ಗಳಿಸಿ: ಕೇಂದ್ರದ ಆಫರ್!

Published : Jul 28, 2021, 02:56 PM ISTUpdated : Jul 28, 2021, 02:59 PM IST
ಒಂದು ಡಿಸೈನ್, ಟ್ಯಾಗ್‌ಲೈನ್ ಮಾಡಿ 15 ಲಕ್ಷ ಗಳಿಸಿ: ಕೇಂದ್ರದ ಆಫರ್!

ಸಾರಾಂಶ

* ನೀವು ಮನೆಯಲ್ಲೇ ಕುಳಿತು ಹಣ ಸಂಪಾದಿಸುವ ಅವಕಾಶ * 15 ಲಕ್ಷ ರೂಪಾಯಿ ಗೆಲ್ಲುವ ಅವಕಾಶ ಮಾಡಿಕೊಟ್ಟ ಸರ್ಕಾರ * ಸೃಜನಶೀಲ ಹೆಸರು, ಟ್ಯಾಗ್‌ಲೈನ್ ಮತ್ತು ಲೋಗೋ ಮಾಡೋರಿಗೆ ಈ ಆಫರ್

ನವದೆಹಲಿ(ಜು.28): ನೀವು ಮನೆಯಲ್ಲೇ ಕುಳಿತು ಹಣ ಸಂಪಾದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಕೇಂದ್ರ ಸರ್ಕಾರ ನಿಮಗೆ 15 ಲಕ್ಷ ರೂಪಾಯಿ ಗೆಲ್ಲುವ ಅವಕಾಶ ನೀಡುತ್ತಿದೆ. ಇದಕ್ಕಾಗಿ ನೀವು ಒಂದೋ ಹೆಸರನ್ನು ನೀಡಬೇಕು ಇಲ್ಲವೇ ಲೋಗೋ ಮತ್ತು ಟ್ಯಾಗ್‌ಲೈನ್ ಕೊಟ್ಟೂ ಈ ಮೊತ್ತ ಗಳಿಸಬಹುದು. My Gov India ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ಕೊಟ್ಟಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ನೀವು ಆಗಸ್ಟ್ 15 ರವರೆಗೆ ಅರ್ಜಿ ಸಲ್ಲಿಸಬಹುದು. ಹಾಗಾದ್ರೆ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲೋದು ಹೇಗೆ? ಇಲ್ಲಿದೆ ವಿವರ

My Gov Indiaದ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಸೃಜನಶೀಲ ಹೆಸರು, ಟ್ಯಾಗ್‌ಲೈನ್ ಮತ್ತು ಲೋಗೋವನ್ನು ಮಾಡಬೇಕು ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ. ಈ ಸ್ಪರ್ಧೆಯನ್ನು ಅಭಿವೃದ್ಧಿ ಹಣಕಾಸು ಸಂಸ್ಥೆ (ಡಿಎಫ್‌ಐ) ಗಾಗಿ ಆಯೋಜಿಸಲಾಗಿದೆ. ಇದರಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 5 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಏನು ಮಾಡಬೇಕು?

ಹಣಕಾಸು ಸೇವಾ ಇಲಾಖೆ, ಹಣಕಾಸು ಸಚಿವಾಲಯ, ಅಭಿವೃದ್ಧಿ ಹಣಕಾಸು ಸಂಸ್ಥೆ (ಡಿಎಫ್‌ಐ) ಸಂಸ್ಥೆಯ ಹೆಸರು, ಟ್ಯಾಗ್‌ಲೈನ್ ಮತ್ತು ಅದರ ಲೋಗೋದ ವಿನ್ಯಾಸವನ್ನು ಸೂಚಿಸಲು ಜನರಿಗೆ ಆಹ್ವಾನ ಕೊಟ್ಟಿದೆ. ಈ ಹೆಸರು, ಲೋಗೊ ಮತ್ತು ಟ್ಯಾಗ್‌ಲೈನ್ ಸಂಸ್ಥೆಯ ಕೆಲಸಕ್ಕೆ ಸಂಬಂಧಿಸಿರಬೇಕು.

ನೀವು ಕೊಡುವ ಹೆಸರು, ಟ್ಯಾಗ್‌ಲೈನ್ ಮತ್ತು ಲೋಗೊವನ್ನು ಡಿಎಫ್‌ನ್ನ ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಬೇಕು. ಇದೊಂದು ವರ್ಚುವಲ್ ಸಹಿಯಂತೆ ಇದ್ದು, ಇದು ನೆನಪಿಟ್ಟುಕೊಳ್ಳಲು ಮತ್ತು ಉಚ್ಚರಿಸಲು ಸುಲಭವಿರಬೇಕು. ಹೆಸರು, ಟ್ಯಾಗ್‌ಲೈನ್‌ಗಳು ಮತ್ತು ಲೋಗೊ ಈ ಮೂರೂ ತಮ್ಮದೇ ಆದ ರೀತಿಯಲ್ಲಿ ಭಿನ್ನವಾಗಿರಬೇಕು.

ನೋಂದಣಿ ಮಾಡೋದು ಹೇಗೆ?

* ಈ ಸ್ಪರ್ಧೆಯಲ್ಲಿ ಭಾಗವಹಿಸಲು, ನೀವು ಮೊದಲು mygov.in ಪೋರ್ಟಲ್‌ಗೆ ಹೋಗಬೇಕು.
* ಇಲ್ಲಿ ನೀವು ಲಾಗಿನ್ ಟು ಪಾರ್ಟಿಸಿಪೇಟ್ ಟ್ಯಾಬ್ ಕ್ಲಿಕ್ ಮಾಡಬೇಕು.
* ಬಳಿಕ ನೀವು ನೋಂದಣಿ ವಿವರಗಳನ್ನು ಭರ್ತಿ ಮಾಡಬೇಕು.
* ನೋಂದಣಿ ನಂತರ, ನೀವು ನಿಮ್ಮ ಎಂಟ್ರಿ ಖಚಿತಪಡಿಸಿಕೊಳ್ಳಬೇಕು.

ಬಹುಮಾನ ವಿವರಗಳು

ಈ ಸ್ಪರ್ಧೆಯಲ್ಲಿ ಭಾಗವಹಿಸುವ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಪ್ರಶಸ್ತಿ ನೀಡಲಾಗುವುದು.
* ಹೆಸರು - 5,00,000 / -, ರೂ. 3,00,000 / - ರೂ. 2,00,000 / -
* ಟ್ಯಾಗ್‌ಲೈನ್ - ರೂ. 5,00,000 / -, ರೂ. 3,00,000 / - ರೂ. 2,00,000 / -
* ಲೋಗೋ - 5,00,000 / -, ರೂ. 3,00,000 / - ರೂ. 2,00,000 / -

ಹೆಚ್ಚಿನ ಮಾಹಿತಿ ಇಲ್ಲಿ ಪಡೆಯಿರಿ

ಈ ಸ್ಪರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನೀವು ಈ ಅಧಿಕೃತ ಲಿಂಕ್‌ಗೆ ಭೇಟಿ ನೀಡಿ. https://www.mygov.in/task/name-tagline-and-logo-contest-development-financial-institution/

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?
ನಿಖಿಲ್‌ ಕಾಮತ್‌ ಅವಿವಾಹಿತರಲ್ಲ, ವಿಚ್ಛೇದಿತ; ಅವರ ಮೊದಲ ಪತ್ನಿ ದೇಶದ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿ ನಿರ್ದೇಶಕಿ!