
ಬೆಂಗಳೂರು(ಮಾ.20): ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಅವಧಿ ಮುಗಿದ ಪಾಲಿಸಿದಾರರು ದೇಶದ ಯಾವುದೇ ಶಾಖೆಗಳಲ್ಲಿ ಪಾಲಿಸಿ ದಾಖಲೆಗಳನ್ನು ಸಲ್ಲಿಸಿ ಹಣ ಪಡೆಯುವ ನೂತನ ಉಪಕ್ರಮವನ್ನು ಮಾ.31ರಿಂದ ಪ್ರಾಯೋಗಿಕವಾಗಿ ಆರಂಭಿಸಲಿದೆ.
ಕೊರೋನಾ ಸಂಕಷ್ಟಕ್ಕೆ ಸಿಲುಕಿದ ಪಾಲಿಸಿದಾರರ ಹಿತದೃಷ್ಟಿಯಿಂದ ನಿಗಮ ಉಪ ಕ್ರಮ ರೂಪಿಸಿದೆ. ಮಾ.31ರ ನಂತರ ಹತ್ತಿರದ ಯಾವುದೇ ಎಲ್‌ಐಸಿ ಶಾಖೆಯಲ್ಲಿ ಪಾಲಿಸಿದಾರರು ದಾಖಲೆ ಸಲ್ಲಿಸಿದರೆ ಪಾಲಿಸಿ ಮಾಡಿಸಿದ್ದ ಮೂಲ ಶಾಖೆæಯಿಂದ ಆನ್‌ಲೈನ್ ಮೂಲಕ ಅವರ ಬ್ಯಾಂಕ್ ಖಾತೆಗೆ ಠೇವಣಿಯ ಹಣ ಜಮೆಯಾಗಲಿದೆ.
LICಯ ನೂತನ ವಿಮಾ ಪಾಲಿಸಿ ‘ಬಚತ್ ಪ್ಲಸ್’!
ಈ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗುವ ನಿಟ್ಟಿನಲ್ಲಿ ದೇಶದ 113 ವಿಭಾಗೀಯ ಕಚೇರಿ, 2048 ಶಾಖೆಗಳು, 1526 ಸ್ಯಾಟ್‌ಲೈಟ್ ಕಚೇರಿ ಹಾಗೂ 74 ಗ್ರಾಹಕ ವಲಯ ಕಚೇರಿಗಳಿಗೆ ಎಲ್‌ಐಸಿ ನಿರ್ದೇಶನ ನೀಡಿದೆ. ಜತೆಗೆ ಎಲ್ಲ ಶಾಖೆಯ ಅಧಿಕಾರಿಗಳಿಗೆ ಪಾಲಿಸಿದಾರರ ದಾಖಲೆಗಳ ಪರಿಶೀಲನೆಗೆ ವಿಶೇಷ ಅಧಿಕಾರ ನೀಡಲಾಗಿದೆ.
ಗ್ರಾಹಕರನ್ನು ಕೇಂದ್ರವಾಗಿಟ್ಟುಕೊಂಡು ಉಪಕ್ರಮ ರೂಪಿಸಿರುವ ಎಲ್‌ಐಸಿ, ದೇಶಾದ್ಯಂತ 29 ಕೋಟಿಗೂ ಅಧಿಕ ಪಾಲಿಸಿದಾರರನ್ನು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.