ಐಎಂಎಫ್ ಮೊಗಸಾಲೆಯಲ್ಲಿ ಕನ್ನಡತಿ: ಆರ್ಥಿಕ ತಜ್ಞ ಸ್ಥಾನಕ್ಕೆ ಗೀತಾ ಗೋಪಿನಾಥ್ ಸಾರಥಿ!

By Web DeskFirst Published Jan 8, 2019, 12:43 PM IST
Highlights

 ಐಎಂಎಫ್ ಮೊದಲ ಮಹಿಳಾ ಮುಖ್ಯ ಆರ್ಥಿಕ ತಜ್ಞರಾಗಿ ಮೈಸೂರು ಮೂಲದ ಗೀತಾ ಗೋಪಿನಾಥ್ ಅಧಿಕಾರ ಸ್ವೀಕರಿಸಿದ್ದಾರೆ. 

ವಾಷಿಂಗ್ಟನ್(ಜ.08): ಐಎಂಎಫ್ ಮೊದಲ ಮಹಿಳಾ ಮುಖ್ಯ ಆರ್ಥಿಕ ತಜ್ಞರಾಗಿ ಮೈಸೂರು ಮೂಲದ ಗೀತಾ ಗೋಪಿನಾಥ್ ಅಧಿಕಾರ ಸ್ವೀಕರಿಸಿದ್ದಾರೆ. 
ಜಾಗತಿಕ ಆರ್ಥಿಕತೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಐಎಂಎಫ್ ಮುಖ್ಯ ಆರ್ಥಿಕ ತಜ್ಞರಾಗಿ  ಕನ್ನಡತಿ ಗೀತಾ ಗೋಪಿನಾಥ್ ಅಧಿಕಾರ ವಹಿಸಿಕೊಂಡಿದ್ದು, ಹಲವು ಸವಾಲುಗಳನ್ನು ಅವರು ಎದುರಿಸಬೇಕಾಗಿದೆ. 

ಡಿಸೆಂಬರ್ 8 , 1971 ರಲ್ಲಿ ಮೈಸೂರು ನಗರದಲ್ಲಿ ಹುಟ್ಟಿದ ಗೀತಾ ಗೋಪಿನಾಥ್, ಪ್ರಾಥಮಿಕ ಶಿಕ್ಷಣ ಕೂಡ ಮೈಸೂರಿನಲ್ಲೇ ಮುಗಿಸಿದ್ದಾರೆ.  ನಂತರ ದೆಹಲಿಯ ಶ್ರೀರಾಮ್ ಕಾಲೇಜಿನಲ್ಲಿ ಪದವಿ ಮತ್ತು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಮಾಸ್ಟರ್ ಡಿಗ್ರಿ  ಪಡೆದಿದ್ದಾರೆ. 

ಐಎಂಎಫ್  ಸೇರುವದಕ್ಕೂ ಮೊದಲು ಗೀತಾ ಗೋಪಿನಾಥ್ ಅಮೆರಿಕದ ಹಾರ್ವಾರ್ಡ್ ವಿಶ್ವವಿದ್ಯಾನಿಲಯದಲ್ಲಿ  ಇಂಟರ್ನ್ಯಾಷನಲ್ ಸ್ಟಡೀಸ್ ಮತ್ತು ಎಕನಾಮಿಕ್ಸ್ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು. 

ಐಎಂಎಫ್ ಸಂಸ್ಥೆಯ ಆಡಳಿತ ಮಂಡಳಿಗೆ ಭಾರತದ ಮಾಜಿ ಆರ್ ಬಿಐ ಗರ್ವನರ್ ರಘುರಾಮ ರಾಜನ್ ಕೂಡ ಮುಖ್ಯ ಆರ್ಥಿಕ ತಜ್ಞರಾಗಿ ಕೆಲಸ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

click me!