ಪಾಕ್‌ಗೆ ಯುಎಇ ಹೆಲ್ಪ್: ಕಂತೆ ಕಂತೆ ದುಡ್ಡು ಇಮ್ರಾನ್ ಜೇಬಿಗೆ!

Published : Jan 06, 2019, 01:54 PM IST
ಪಾಕ್‌ಗೆ ಯುಎಇ ಹೆಲ್ಪ್: ಕಂತೆ ಕಂತೆ ದುಡ್ಡು ಇಮ್ರಾನ್ ಜೇಬಿಗೆ!

ಸಾರಾಂಶ

ಸೌದಿ ಅರೇಬಿಯಾ ಬಳಿಕ ಪಾಕ್‌ಗೆ ಆರ್ಥಿಕ ಸಹಾಯ ಘೋಷಿಸಿದ ಯುಎಇ| ಒಟ್ಟು 6.2 ಬಿಲಿಯನ್ ಯುಎಸ್ ಡಾಲರ್ ಮೊತ್ತದ ಆರ್ಥಿಕ ಸಹಾಯ| ಪ್ರಧಾನಿ ಇಮ್ರಾನ್ ಕಾನ್ ಮನವಿಗೆ ಸ್ಪಂದಿಸಿದ ಯುಎಇ| ಪಾಕ್‌ಗೆ 7.9 ಬಿಲಿಯನ್ ಯುಎಸ್ ಡಾಲರ್ ಮೊತ್ತದ ತೈಲ ಆಮದು ಉಳಿತಾಯ

ದುಬೈ(ಜ.06): ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಧಿಕಾರ ವಹಸಿಕೊಂಡ ದಿನದಿಂದ ವಿದೇಶಗಳನ್ನು ಸುತ್ತಿ ನಮಗೆ ಏನಾದರೂ ಹೆಲ್ಪ್ ಮಾಡಿ ಪ್ಲೀಸ್ ಅಂತಾ ಗೋಗರೆದಿದ್ದೇ ಬಂತು.

ಈಗಾಗಲೇ ಸೌದಿ ಅರೇಬಿಯಾ, ಚೀನಾ ದೇಶಗಳಿಗೆ ಭೇಟಿ ನೀಡಿ ಆರ್ಥಿಕ ಸಹಾಯಕ್ಕಾಗಿ ಅಂಗಲಾಚಿದ್ದ ಇಮ್ರಾನ್‌ಗೆ, ಸೌದಿ ಅರೇಬಿಯಾ ಅಷ್ಟಿಷ್ಟು ಸಹಾಯ ಮಾಡಿ ಸಾಗ ಹಾಕಿತ್ತು.

ಚೀನಾ ಹೆಲ್ಪ್ ಮಾಡ್ತಿನಿ ಆದ್ರೆ ನಂಗೂ ಒಂದಿಷ್ಟು ಫೇವರ್ ಬೇಕು ಅಂತಾ ಹೇಳಿ ಕಳುಹಿಸಿತ್ತು. ಇದೀಗ ಮತ್ತೆ ಸಹಾಯ ಕೇಳಿ ಯಾವ ದೇಶಕ್ಕೆ ಹೋಗೋದು ಅಂಥಾ ಇಮ್ರಾನ್ ಭೂಪಟ ತೆರೆದು ಕುಳಿತಿದ್ದೇ ತಡ, ನಾನು ಹೆಲ್ಪ್ ಮಾಡ್ತಿನಿ ಅಂತಾ ಯುಎಇ ಕರೆ ಮಾಡಿದೆ.

ಹೌದು, ಪಾಕಿಸ್ತಾನಕ್ಕೆ ಆರ್ಥಿಕ ಸಹಾಯ ಮಾಡಲು ಯುಎಇ ಮುಂದಾಗಿದ್ದು, 6.2 ಬಿಲಿಯನ್ ಯುಎಸ್ ಡಾಲರ್ ಧನಸಹಾಯದ ಭರವಸೆ ನೀಡಿದೆ. ಇದರಲ್ಲಿ 3.2 ಬಿಲಿಯನ್ ಯುಎಸ್ ಡಾಲರ್ ಮೊತ್ತದ ಕಚ್ಚಾತೈಲ ರಫ್ತು ಮತ್ತು 3 ಬಿಲಿಯನ್ ಯುಎಸ್ ಡಾಲರ್ ಮೊತ್ತದ ನಗದು ಠೇವಣಿ ಸೇರಿದೆ.

ಸೌದಿ ಅರೇಬಿಯಾ ಮತ್ತು ಯುಎಇ ಆರ್ಥಿಕ ಸಹಾಯದಿಂದಾಗಿ ಪಾಕಿಸ್ತಾನಕ್ಕೆ ಒಟ್ಟು 7.9 ಬಿಲಿಯನ್ ಯುಎಸ್ ಡಾಲರ್ ಮೊತ್ತದ ತೈಲ ಆಮದು ಉಳಿತಾಯವಾಗಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Breaking: ಜೊಮಾಟೋ ಸಿಇಒ ಸ್ಥಾನದಿಂದ ಕೆಳಗಿಳಿದ ದಿಪೀಂದರ್‌ ಗೋಯೆಲ್‌!
ಬೆಳ್ಳಿ ಬೆಲೆ ಏರಿಕೆಯ ನಾಗಲೋಟ : ಚಿನ್ನದ ಬೆಲೆಯಲ್ಲಿಯೂ ಭಾರಿ ಹೆಚ್ಚಳ