ವಿಶ್ವದ 4ನೇ ಅತಿ ಶ್ರೀಮಂತ ವ್ಯಕ್ತಿ ಅದಾನಿಗೆ ಎಸ್‌ಬಿಐನಿಂದ 14 ಸಾವಿರ ಕೋಟಿ ಸಾಲ ಬೇಕಂತೆ..!

By BK AshwinFirst Published Jul 21, 2022, 12:52 PM IST
Highlights

ದೇಶದ ಹೆಚ್ಚು ಶ್ರೀಮಂತ ವ್ಯಕ್ತಿ ಯಾರು ಎಂದರೆ ನೆನಪಾಗೋದೇ ಮುಖೇಶ್‌ ಅಂಬಾನಿ ಹಾಗೂ ಗೌತಮ್‌ ಅದಾನಿ. ಸದ್ಯ ದೇಶದಲ್ಲಿ ಅತಿ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಅದಾನಿಯ ಬಬಳಿ ಸಾವಿರಾರು ಕೋಟಿ ಆಸ್ತಿ ಇದ್ದರೂ ಹೆಚ್ಚೆಚ್ಚು ಹಣವನ್ನು ಸಾಲವಾಗಿಯೇ ಪಡೆಯುತ್ತಾರೆ ಎಂದರೆ ನಿಮಗೆ ಆಶ್ಚರ್ಯ ಮೂಡಬಹದು. ಆದರೂ, ಇದು ನಿಜ. ಈಗ ಎಸ್‌ಬಿಐನಿಂದ ಗೌತಮ್‌ ಅದಾನಿ 14 ಸಾವಿರ ಕೋಟಿ ರೂ. ಸಾಲ ಪಡೆಯಲು ಮುಂದಾಗಿದ್ದಾರೆ.

ಗುಜರಾತ್‌ನ ಪ್ರಖ್ಯಾತ ಉದ್ಯಮಿ ಗೌತಮ್‌ ಅದಾನಿ ಸದಾ ಒಂದಿಲ್ಲೊಂದು ಸುದ್ದಿಯಲ್ಲಿ ಇರುತ್ತಾರೆ. ನಿನ್ನೆಯಷ್ಟೇ ಫೋರ್ಬ್ಸ್‌ ವರದಿಯಲ್ಲಿ ವಿಶ್ವದ ನಾಲ್ಕನೇ ಅತಿ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದ ಅದಾನಿ ಇಂದು ಹೊಸ ಸುದ್ದಿಯಲ್ಲಿದ್ದಾರೆ. ಭಾರತದಲ್ಲೇ ಅತಿ ಶ್ರೀಮಂತ ಎನಿಸಿಕೊಂಡಿರುವ ಅದಾನಿಗೆ ಭಾರತದ ಅತಿ ದೊಡ್ಡ ಬ್ಯಾಂಕ್‌ ಆದ ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ ಮೊರೆ ಹೋಗಿದ್ದಾರೆ. ಯಾಕೆ ಅಂತೀರಾ..? ಮುಂದೆ ಓದಿ..

ಗುಜರಾತ್‌ನ ಮುಂದ್ರಾದಲ್ಲಿ ಪಿವಿಸಿ ಸ್ಥಾವರವೊದನ್ನು ನಿರ್ಮಿಸಲು ಅದಾನಿ ಗ್ರೂಪ್‌ ಎಸ್‌ಬಿಐ ಮೊರೆ ಹೋಗಿದ್ದು, 14 ಸಾವಿರ ಕೋಟಿ ರೂ. ಸಾಲ ನೀಡುವಂತೆ ದೇಶದ ಅತಿ ದೊಡ್ಡ ಸಾಲದಾತ ಬ್ಯಾಂಕ್‌ ಅನ್ನು ಕೇಳಿಕೊಂಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಬಿಲ್‌ ಗೇಟ್ಸ್‌ ಅನ್ನೇ ಮೀರಿಸಿದ ಉದ್ಯಮಿ ಗೌತಮ್‌ ಅದಾನಿ ಆಸ್ತಿ ಎಷ್ಟು ಗೊತ್ತಾ..?

ಈ ಹಿಂದೆಯೂ ಸಾವಿರಾರು ಕೋಟಿ ಸಾಲ ಪಡೆದಿರುವ ಅದಾನಿ ಗ್ರೂಪ್‌
 
ಮಾರ್ಚ್‌ 2022ರಲ್ಲಿ ನವಿ ಮುಂಬೈ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ ನಿರ್ಮಾಣಕ್ಕಾಗಿ ಅದಾನಿ ಎಂಟರ್‌ಪ್ರೈಸಸ್‌ 12,770 ಕೋಟಿ ರೂ. ಸಾಲ ಪಡೆದಿತ್ತು. ಕೆಲವೇ ತಿಂಗಳುಗಳ ಬಳಿಕ ಈಗ ದೇಶದ ಅತಿ ಶ್ರೀಮಂತ ವ್ಯಕ್ತಿ ಒಡೆತನದ ಕಂಪನಿ ಅದಕ್ಕೂ ಹೆಚ್ಚಿನ ಮೊತ್ತದ ಸಾಲ ಪಡೆಯಲು ಮುಂದಾಗಿರುವುದು ಹಲವರಲ್ಲಿ ಆಶ್ಚರ್ಯ ತರಬಹುದು. 

ಗುಜರಾತ್‌ನ ಮುಂದ್ರಾದಲ್ಲಿನ ಈ ಪಿವಿಸಿ ಸ್ಥಾವರ ನಿರ್ಮಾಣಕ್ಕೆ 19 ಸಾವಿರ ಕೋಟಿ ರೂ. ಗೂ ಅಧಿಕ ಬಂಡವಾಲ ಬೇಕಂತೆ. ಈ ಪೈಕಿ ಎಸ್‌ಬಿಐ 14 ಸಾವಿರ ಕೋಟಿ ರೂ. ಸಾಲ ನೀಡಲಿದೆ ಎನ್ನಲಾಗಿದೆ. ಉಳಿದ ಹಣವನ್ನು ಈಕ್ವಿಟಿಯ ರೂಪದಲ್ಲಿ ಅದಾನಿ ಸಂಸ್ಥೆ ಬಂಡವಾಳ ಹೂಡಲಿದೆ ಎಂದೂ ತಿಳಿದುಬಂದಿದೆ.

ಹಲವು ಬ್ಯಾಂಕುಗಳಿಂದಲೂ ಆಸಕ್ತಿ
ಇನ್ನು, ಇತರ ಬ್ಯಾಂಕುಗಳು ಸಹ ಈ ಸಾಲದ ಪ್ರಸ್ತಾವನೆಯನ್ನು ಮೌಲ್ಯಮಾಪನ ಮಾಡುತ್ತವೆ ಹಾಗೂ ಕಾರ್ಪೊರೇಟ್‌ ಸಾಲಕ್ಕೆ ಸಂಬಂಧಪಟ್ಟಂತೆ ಕೆಲವು ಮಾನ್ಯತೆಗಳನ್ನು ತೆಗೆದುಕೊಳ್ಳಲು ಬಯಸುತ್ತದೆ ಎಂದೂ ಈ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದ ಮೂಲಗಳು ತಿಳಿಸಿವೆ.

ಈ ನಡುವೆ, ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 12,770 ಕೋಟಿ ರೂ. ಸಾಲ ನೀಡಲು ಎಸ್‌ಬಿಐ ಒಪ್ಪಿಗೆ ನೀಡಿರುವುದು ಪ್ರತಿಸ್ಪರ್ಧಿ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕಿದೆ ಎಂದು ಏಪ್ರಿಲ್‌ನಲ್ಲಿ ವರದಿಯಾಗಿತ್ತು.

ಇನ್ನು, ಈ ಬೆಳವಣಿಗೆಗೆ ಸಂಬಂಧಪಟ್ಟಂತೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಹಾಗೂ ಅದಾನಿ ಎಂಟರ್‌ಪ್ರೈಸಸ್‌ ವಕ್ತಾರರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಗುಜರಾತ್‌ನಲ್ಲಿ ನಿರ್ಮಾಣವಾಗಲಿರುವ ಈ ಸ್ಥಾವರ ನಿರ್ಮಿಸಲಿರುವ ಅದಾನಿ ಎಂಟರ್‌ಪ್ರೈಸಸ್‌ನ ಈ ಯೋಜನೆಯು PVC ಶ್ರೇಣಿಗಳಾದ ಸಸ್ಪೆನ್ಷನ್ PVC, ಕ್ಲೋರಿನೇಟೆಡ್ PVC ಮತ್ತು ಎಮಲ್ಷನ್ PVC ಅನ್ನು ಉತ್ಪಾದನೆ ಮಾಡುತ್ತದೆ ಎಂದು ತಿಳಿದುಬಂದಿದೆ. ಇನ್ನು, ಈ ಯೋಜನೆಗೆ ಉಪ್ಪು, ಸುಣ್ಣದ ಕಲ್ಲು, ಕಲ್ಲಿದ್ದಲು/ಕೋಕ್ ಮತ್ತು ಪೊಟ್ಯಾಸಿಯಮ್ ಕ್ಲೋರೈಡ್ ನಂತಹ ಪ್ರಮುಖ ಕಚ್ಚಾ ವಸ್ತುಗಳನ್ನು ಬಳಸಿಕೊಳ್ಳಲಾಗುತ್ತದೆ.

2021-22 ರ ತನ್ನ ವಾರ್ಷಿಕ ವರದಿಯಲ್ಲಿ, ಅದಾನಿ ಎಂಟರ್‌ಪ್ರೈಸಸ್ 2021 ರಲ್ಲಿ ಪೆಟ್ರೋಕೆಮಿಕಲ್ ವ್ಯವಹಾರದಲ್ಲಿ ತೊಡಗಿದೆ ಮತ್ತು ಮುಂದ್ರಾದಲ್ಲಿ ಪೆಟ್ರೋಕೆಮಿಕಲ್ ಕ್ಲಸ್ಟರ್ ಅನ್ನು ಅಭಿವೃದ್ಧಿಪಡಿಸುವ ಅವಕಾಶಗಳನ್ನು ಅನ್ವೇಷಿಸುತ್ತಿದೆ ಎಂದು ಮಾಹಿತಿ ನೀಡಿದೆ.

ಬಿಲ್ ಗೇಟ್ಸ್ ಹಿಂದಿಕ್ಕಿದ ಗೌತಮ್ ಅದಾನಿ, ಈಗ ವಿಶ್ವದ ನಾಲ್ಕನೇ ಸಿರಿವಂತ ವ್ಯಕ್ತಿ

2 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯವಿರಲಿದೆ ಎನ್ನಲಾದ ಈ ಪ್ರಸ್ತಾವಿತ ಯೋಜನೆಯನ್ನು ಹಂತ ಹಂತವಾಗಿ ನಿರ್ಮಿಸುವ ಸಾಧ್ಯತೆಯಿದೆ. ಮೊದಲ ಹಂತವು 1,000 KTPA PVC ಯ ಅಭಿವೃದ್ಧಿಯನ್ನು ಒಳಗೊಂಡಿರುತ್ತದೆ ಮತ್ತು ನವೆಂಬರ್ 2024 ರ ವೇಳೆಗೆ ಈ ಸ್ಥಾವರ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ ಎಂದು ಸಂಸ್ಥೆ ತಿಳಿಸಿದೆ.

click me!