ಜನಸಾಮಾನ್ಯರಂತೆ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಪುತ್ರನ ಮದುವೆ, ದಿನಾಂಕವೂ ಬಹಿರಂಗ

Published : Jan 21, 2025, 08:30 PM IST
ಜನಸಾಮಾನ್ಯರಂತೆ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಪುತ್ರನ ಮದುವೆ, ದಿನಾಂಕವೂ ಬಹಿರಂಗ

ಸಾರಾಂಶ

ವಿಶ್ವದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಪುತ್ರನ ಮದುವೆ ಅತ್ಯಂತ ಸರಳ. ಸಿಂಪಲ್ ಅಂದರೆ ಜನಸಾಮಾನ್ಯರ ರೀತಿಯ ಮದುವೆ. ಆದರೆ ಸಂಪ್ರದಾಯ ಬದ್ಧ. ಇಷ್ಟೇ ಅಲ್ಲ ಮದುವೆ ದಿನಾಂಕವೂ ಬಹಿರಂಗವಾಗಿದೆ.

ಪ್ರಯಾಗರಾಜ್(ಜ.21) ಭಾರತದ ಶ್ರೀಮಂತ ಉದ್ಯಮಿಗಳ ಮಕ್ಕಳ ಮದುವೆ ಅದ್ಧೂರಿ ತನಕ್ಕೆ ಸಾಕ್ಷಿಯಾಗಿದೆ. ಅನಂತ್ ಅಂಬಾನಿ ಸೇರಿದಂತೆ ಹಲವು ಮದುಗಳು ಹಿಂದೆಂದೂ ಕಾಣದ ರೀತಿಯಲ್ಲಿ ನಡೆದಿದೆ. ಈ ಪೈಕಿ ಇದೀಗ ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಂದಾಗಿರುವ ಗೌತಮ್ ಅದಾನಿ ಪುತ್ರ ಜೀತ್ ಅದಾನಿ ಮದುವೆ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅದಾನಿ ಕಿರಿಯ ಪುತ್ರನ ಮದುವೆ ಅನಂತ್ ಅಂಬಾನಿ ಮದುವೆಯನ್ನು ಮೀರಿಸಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ನಡುವೆ ಖುದ್ದು ಗೌತಮ್ ಅದಾನಿ ಪುತ್ರನ ಮದುವೆ ಕುರಿತು ಮಾಹಿತಿ ನೀಡಿದ್ದಾರೆ. ಜೀತ್ ಅದಾನಿ ಮದುವೆ ಅತ್ಯಂತ ಸರಳವಾಗಿರಲಿದೆ. ಫೆಬ್ರವರಿ 7 ರಂದು ವಿವಾಹ ಮಹೋತ್ಸವ ನಡೆಯಲಿದೆ ಎಂದು ದಿನಾಂಕವನ್ನು ಬಹಿರಂಗಪಡಿಸಿದ್ದಾರೆ.

ಪ್ರಯಾಗ್‌ರಾಜ್ ಕುಂಭ ಮೇಳದಲ್ಲಿ ಕುಟುಂಬ ಸೇಮತ ಪಾಲ್ಗೊಂಡ ಗೌತಮ್ ಅದಾನಿ, ವಿಶೇಷ ಪೂಜೆ ನೆರವೇರಿಸಿದ್ದರು. ಮಹಾಕುಂಭದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದು ಬಣ್ಣಿಸಿದ ಅದಾನಿ, ಇದೇ ವೇಳೆ ಪುತ್ರನ ಮದುವೆ ಕುರಿತು ಪ್ರಶ್ನೆಗೂ ಉತ್ತರಿಸಿದ್ದಾರೆ. ಕಿರಿಯ ಪುತ್ರ ಜೀತ್ ಅದಾನಿ ಹಾಗೂ ದಿವಾ ಶಾ ಮದುವೆ ಫೆಬ್ರವರಿ 7 ರಂದು ನಡೆಯಲಿದೆ ಎಂದು ಅದಾನಿ ಹೇಳಿದ್ದಾರೆ. ಇದೇ ವೇಳೆ ಅದ್ದೂರಿತನ ಕುರಿತು ಪ್ರಶ್ನೆಗೂ ಅದಾನಿ ಉತ್ತರಿಸಿದ್ದಾರೆ. ಈ ಮದುವೆ ಇತರ ಶ್ರೀಮಂತರ ಅದ್ಧೂರಿ ಮದುವೆ ರೀತಿ ಇರಲ್ಲ. ಜೀತ್ ಅದಾನಿ ಮದುವೆ ಖಾಸಗಿ ಸಮಾರಂಭವಾಗಿದೆ ಎಂದಿದ್ದಾರೆ. 

ಅದಾನಿ ಗ್ರೂಪ್ ಡಿವೈಡ್ ಆಗ್ಬೇಕಾ? ನಿರ್ಧರಿಸಲು ಮಕ್ಕಳು, ಅಳಿಯಂದಿರ 3 ತಿಂಗಳ ಅವಕಾಶ ನೀಡಿದ ಗೌತಮ್ ಅದಾನಿ

ನಾವು ಕೂಡ ಜನಸಾಮಾನ್ಯರಂತೆ. ನಮ್ಮ ಪದ್ದತಿ, ಆಚರಣೆಗಳು ಜನಸಾಮಾನ್ಯ ರೀತಿಯೇ ಇದೆ. ಹೀಗಾಗಿ ಪುತ್ರನ ಮದುವೆ ತುಂಬಾ ಸರಳವಾಗಿ, ಜನಸಾಮಾನ್ಯರಂತೆ ನಡೆಯಲಿದೆ. ಆದರೆ ಸಂಪ್ರದಾಯಬದ್ಧವಾಗಿ ಇರಲಿದೆ ಎಂದು ಗೌತಮ್ ಅದಾನಿ ಹೇಳಿದ್ದಾರೆ. ಕುಟುಂಬದ ಜೊತೆ ಜೀತ್ ಅದಾನಿ ಕೂಡ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಿದ್ದರು. 

ಗೌತಮ್ ಅದಾನಿ ಈ ಮಾತುಗಳ ಇದೀಗ ಭಾರಿ ಸದ್ದು ಮಾಡುತ್ತಿದೆ. ಜನಸಾಮಾನ್ಯರ ರೀತಿಯಲ್ಲಿ ಮದುವೆ ನಡೆಯಲಿದೆ ಅನ್ನೋದು ಇದೀಗ ಚರ್ಚಿತ ವಿಷಯವಾಗಿದೆ. ಜಗತ್ತಿನ ಶ್ರೀಮಂತ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಅದಾನಿ ತಮ್ಮ ಪುತ್ರನ ಮದುವೆಯನ್ನು ಭಾರಿ ಸರಳವಾಗಿ ಮಾಡುತ್ತಾರಾ? ಅದಾನಿ ಸರಳತೆ ಎಂದರೆ ಎಷ್ಟು ಕೋಟಿ ಎಂದು ಚರ್ಚೆಯಾಗುತ್ತಿದೆ. ಆದರೆ ಮೂಲಗಳ ಪ್ರಕಾರ, ಗೌತಮ್ ಅದಾನಿ ಮದುವೆಗೆ ಎರಡು ಕುಟುಂಬಸ್ಥರು, ಅತ್ಯಾಪ್ತರಿಗಷ್ಟೇ ಆಹ್ವಾನ ನೀಡಲಾಗುತ್ತಿದೆ. ಮದುವೆ ಎಲ್ಲಿ ನಡೆಯಲಿದೆ ಅನ್ನೋ ಕುರಿತು ಮಾಹಿತಿ ಬಹಿರಂಗವಾಗಿಲ್ಲ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಆರ್‌ಬಿಐ ಮಹತ್ವದ ನಿರ್ಧಾರ, ರೆಪೋ ದರ ಬದಲಾವಣೆಯಿಂದ ಸಾಲದ ಬಡ್ಡಿ ಭಾರಿ ಇಳಿಕೆ
ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?