ದಾವೂದ್‌ ಅಕ್ರಮ ಹಣ ಪಾಕ್‌ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ!

By Web DeskFirst Published Jul 29, 2019, 10:10 AM IST
Highlights

ದಾವೂದ್‌ ಅಕ್ರಮ ಹಣ ಪಾಕ್‌ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ| ಸಾಕ್ಷಾಧಾರಗಳನ್ನು ತಯಾರಿಸುತ್ತಿದೆ ಭಾರತ

ನವದೆಹಲಿ[ಜು.29]: ಭಯೋತ್ಪಾದನೆ ಪ್ರಕರಣಗಳಡಿ ಭಾರತ ಸೇರಿ ಹಲವು ದೇಶಗಳಿಗೆ ಬೇಕಾಗಿರುವ ಮೋಸ್ಟ್‌ ವಾಟೆಂಡ್‌ ಭೂಗತ ಪಾತಕಿ ದಾವೂದ್‌ ಇಬ್ರಾಹಿಂಗೆ ಸಂಬಂಧಿಸಿದ ಆಸ್ತಿಗಳನ್ನು ಜಪ್ತಿ ಮಾಡಲಾಗಿದ್ದರೂ, ದಾವೂದ್‌ ಭಂಟರು ಮಾತ್ರ ಅಕ್ರಮ ಮಾರ್ಗದಿಂದ ದಾವೂದ್‌ ಸಂಗ್ರಹಿಸಿತ್ತಿರುವ ಭಾರೀ ಪ್ರಮಾಣದ ಹಣವನ್ನು ಪಾಕಿಸ್ತಾನದ ಷೇರುಪೇಟೆಯಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಮಾದಕ ವಸ್ತು ಸಾಗಣೆ, ಶಸ್ತ್ರಾಸ್ತ್ರಗಳ ಪೂರೈಕೆ, ಭಾರತದ ನೋಟುಗಳನ್ನು ನಕಲಿ ಮಾಡುವುದು ಸೇರಿ, ಅಕ್ರಮವಾಗಿ ಸಂಗ್ರಹಿಸಿದ ಸಂಪತ್ತನ್ನು ಕೆಲ ಭದ್ರತಾ ಸಂಸ್ಥೆಗಳ ಮೂಲಕ ದಾವೂದ್‌ ಪಾಕಿಸ್ತಾನ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ವಹಿವಾಟು ನಡೆಸುತ್ತಿದ್ದಾನೆ.

ಈ ಕುರಿತಂತೆ ಭಾರತ ಸಾಕ್ಷಾಧಾರಗಳನ್ನು ತಯಾರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

click me!