ರಾಜ್ಯ ಸರ್ಕಾರದ ಬೆನ್ನಲ್ಲೇ ತೈಲ ಮಾರುಕಟ್ಟೆ ಬೆಲೆ ಹೆಚ್ಚಳ, ಎಷ್ಟಿದೆ ಇಂದಿನ ಪೆಟ್ರೋಲ್ ಡೀಸೆಲ್ ದರ?

By Chethan Kumar  |  First Published Jun 22, 2024, 7:37 AM IST

ಪೆಟ್ರೋಲ್ ಹಾಗೂ ಡೀಸೆಲ್ ಇದೀಗ ಮತ್ತಷ್ಟು ದುಬಾರಿಯಾಗುತ್ತಿದೆ. ರಾಜ್ಯ ಸರ್ಕಾರ 3 ರೂಪಾಯಿ ಹೆಚ್ಚಿಸಿದ ಬಳಿಕ ಇಂದು ರಾಜ್ಯದಲ್ಲಿ ಇಂದನ ದರದಲ್ಲಿ ಕೊಂಚ ಏರಿಕೆ ಕಂಡಿದೆ. ಇಂದು ಪೆಟ್ರೋಲ್ ಹಾಗೂ ಡೀಸಲ್ ದರ ಎಷ್ಟಿದೆ?


ಬೆಂಗಳೂರು(ಜೂ.22) ಇಂದನ ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿಯೂ ತಟ್ಟಿದೆ. ಇತ್ತೀಚೆಗಷ್ಟೆ ಸಿದ್ದರಾಮಯ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ 3 ರೂಪಾಯಿ ಮಾರಾಟ ತೆರಿಗೆ ಏರಿಕೆ ಮಾಡಿತ್ತು. ಈ ಮೂಲಕ ಪೆಟ್ರೋಲ್ ಬೆಲೆ 100ರ ಗಡಿ ದಾಟಿತ್ತು. ಇದಾದ ಒಂದೇ ವಾರದಲ್ಲಿ ಇದೀಗ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಬಿಸಿ ತಟ್ಟಿದೆ. ಇಂದು ಪ್ರತಿ ಲೀಟರ್ ಇಂಧನ ಮೇಲೆ 6 ಪೈಸೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 89 ರೂಪಾಯಿಗೆ ಏರಿಕೆಯಾಗಿದ್ದರೆ , ಪೆಟ್ರೋಲ್ ಪ್ರತಿ ಲೀಟರ್ ಬೆಲೆ 102.96 ರೂಪಾಯಿಗೆ ಏರಿಕೆಯಾಗಿದೆ. 

ಜೂನ್ 21ರಂದು ಡೀಸೆಲ್ ಪ್ರತಿ ಲೀಟರ್ ಬೆಲೆ 88.94 ರೂಪಾಯಿಯಿಂದ ಇದೀಗ 89 ರೂಪಾಯಿಗೆ ಏರಿಕೆಯಾಗಿದ್ದರೆ. ಇತ್ತ ಪೆಟ್ರೋಲ್ ಬೆಲೆ 102.86 ರೂಪಾಯಿಯಿಂದ 102.96 ರೂಪಾಯಿಗೆ ಏರಿಕೆಯಾಗಿದೆ. ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 94.72 ರೂಪಾಯಿ ಆಗಿದೆ. ಇನ್ನು ಡೀಸೆಲ್ ಬೆಲೆ 87.62 ರೂಪಾಯಿ ಆಗಿದೆ. ಚೆನ್ನೈನಲ್ಲಿ ಡೀಸೆಲ್ ಪ್ರತಿ ಲೀಟರ್ ಬೆಲೆ 92.43 ರೂಪಾಯಿ ಆಗಿದ್ದರೆ, ಪೆಟ್ರೋಲ್ ಬೆಲೆ 100.85 ರೂಪಾಯಿ ಆಗಿದೆ. ಗೋವಾದಲ್ಲಿ ಇಂಧನ ಬೆಲೆ ಏರಿಕೆಯಾಗಿದೆ. ಗೋವಾದಲ್ಲಿ ಪೆಟ್ರೋಲ್ ಬೆಲೆ 1 ರೂಪಾಯಿ ಏರಿಕೆಯಾಗಿದೆ. ಇದೀಗ 96.45 ರೂಪಾಯಿ ಆಗಿದ್ದರೆ. ಡೀಸೆಲ್ ಬೆಲೆ 88.98 ರೂಪಾಯಿಗೆ ಏರಿಕೆಯಾಗಿದೆ. 

Tap to resize

Latest Videos

ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡವರಿಗೆ ಕೇಂದ್ರ ಬಜೆಟ್‌ನಲ್ಲಿ ಆದಾಯ ಮಿತಿ ಏರಿಕೆ?

ಬಾಗಲಕೋಟೆ: ಪೆಟ್ರೋಲ್ ದರ:103.21 ರೂಪಾಯಿ 
ಬೆಳಗಾವಿ: ಪೆಟ್ರೋಲ್ ದರ: 103.18 ರೂಪಾಯಿ
ಧಾರವಾಡ: ಪೆಟ್ರೋಲ್ ದರ:  102.72  
ಗದಗ: ಪೆಟ್ರೋಲ್ ದರ:  103.70
ಹಾವೇರಿ: ಪೆಟ್ರೋಲ್ ದರ:  103.92
ಉತ್ತರ ಕನ್ನಡ: ಪೆಟ್ರೋಲ್ ದರ: 102.94  
ವಿಜಯಪುರ: ಪೆಟ್ರೋಲ್ ದರ:  102.86
ಬೆಂಗಳೂರು ಗ್ರಾಮಾಂತರ: ಪೆಟ್ರೋಲ್ ದರ: 103.18
ಬೆಂಗಳೂರು ನಗರ: ಪೆಟ್ರೋಲ್ ದರ:  102.92
ಚಿಕ್ಕಬಳ್ಳಾಪುರ: ಪೆಟ್ರೋಲ್ ದರ:  102.93
ಚಿತ್ರದುರ್ಗ: ಪೆಟ್ರೋಲ್ ದರ: 104.55 
ದಾವಣಗೆರೆ: ಪೆಟ್ರೋಲ್ ದರ:  104.98
ಕೋಲಾರ: ಪೆಟ್ರೋಲ್ ದರ:  102.80 
ರಾಮನಗರ: ಪೆಟ್ರೋಲ್ ದರ: 103.18 
ಶಿವಮೊಗ್ಗ: ಪೆಟ್ರೋಲ್ ದರ:  104.23
ತುಮಕೂರು: ಪೆಟ್ರೋಲ್ ದರ:  103.20
ಬಳ್ಳಾರಿ: ಪೆಟ್ರೋಲ್ ದರ:  104.58
ಬೀದರ್: ಪೆಟ್ರೋಲ್ ದರ: 103.88  
ಕಲಬುರಗಿ: ಪೆಟ್ರೋಲ್ ದರ:103.40 
ಕೊಪ್ಪಳ: ಪೆಟ್ರೋಲ್ ದರ: 103.82 
ರಾಯಚೂರು: ಪೆಟ್ರೋಲ್ ದರ:  102.92
ವಿಜಯನಗರ: ಪೆಟ್ರೋಲ್ ದರ:  105.01 
ಯಾದಗಿರಿ: ಪೆಟ್ರೋಲ್ ದರ:  103.38
ಚಾಮರಾಜನಗರ: ಪೆಟ್ರೋಲ್ ದರ: 103.18
ಚಿಕ್ಕಮಗಳೂರು: ಪೆಟ್ರೋಲ್ ದರ:  104.17
ದಕ್ಷಿಣ ಕನ್ನಡ: ಪೆಟ್ರೋಲ್ ದರ: 102.03
ಹಾಸನ: ಪೆಟ್ರೋಲ್ ದರ:  103.04
ಕೊಡಗು: ಪೆಟ್ರೋಲ್ ದರ:  103.64  
ಮಂಡ್ಯ: ಪೆಟ್ರೋಲ್ ದರ:  102.75
ಮೈಸೂರು : ಪೆಟ್ರೋಲ್ ದರ: 102.41
ಉಡುಪಿ: ಪೆಟ್ರೋಲ್ ದರ:  102.76 
 

click me!