ಹಬ್ಬದ ಎರಡನೇ ದಿನ: ಪೆಟ್ರೋಲ್ ಇಳಿದಿದ್ದೆಷ್ಟು ನೋಡಣ್ಣ!

Published : Oct 19, 2018, 02:51 PM IST
ಹಬ್ಬದ ಎರಡನೇ ದಿನ: ಪೆಟ್ರೋಲ್ ಇಳಿದಿದ್ದೆಷ್ಟು ನೋಡಣ್ಣ!

ಸಾರಾಂಶ

ಎರಡನೇ ದಿನವೂ ತೈಲದರ ಇಳಿಸಿದ ಕೇಂದ್ರ ಸರ್ಕಾರ! ಹಬ್ಬದ ನಿಮಿತ್ತ ಜನಸಾಮಾನ್ಯರಿಗೆ ಕೊಂಚ ರಿಲೀಫ್ ನೀಡಿದ ಸರ್ಕಾರ! ದೇಶದ ಮಹಾನಗರಗಳಲ್ಲಿ ಇಳಿದ ಪೆಟ್ರೋಲ್, ಡೀಸೆಲ್ ಬೆಲೆ  

ನವದೆಹಲಿ(ಅ.19): ತೈಲದರದ ನಿರಂತರ ಏರಿಕೆ ಜನಸಾಮಾನ್ಯರಿಗೆ ತೊಂದರೆ ಮಾಡಿದ್ದು ಸುಳ್ಳಲ್ಲ. ಆದರೆ ತೈಲದರದಲ್ಲಿ ನಿಯಂತ್ರಣ ಸಾಧಿಸುವಲ್ಲಿ ಕೇಂದ್ರ ಸರ್ಕಾರ ಕೂಡ ಪ್ರಾಮಾಣಿಕ ಪ್ರಯತ್ನ ನಡೆಸಿಸಿರುವುದು ಎಲ್ಲರಿಗೂ ಗೊತ್ತಿರುವಂತದ್ದೇ.

ಆದರೆ ಹಬ್ಬದ ನಿಮಿತ್ತ ತೈಲದರ ಕಡಿಮೆ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ, ಕಳೆದ ಎರಡು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ ಮಾಡಿದೆ. ಅದರಂತೆ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರ  24 ಪೈಸೆ , ಡೀಸೆಲ್ ಬೆಲೆಯಲ್ಲಿ 10 ಪೈಸೆ ಇಳಿದಿದೆ.

ಇದರಿಂದ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 82.38 ರೂ. ಮತ್ತು ಡೀಸೆಲ್ ದರ 75.48 ರೂ. ಆಗಿದೆ. ಅಲ್ಲದೇ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ದರ 87.84 ರೂ. ಮತ್ತು ಡೀಸೆಲ್ ದರ  79.13 ರೂ. ಇಳಿಕೆಯಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅಮೆರಿಕಾದ ಬಳಿಕ ಈಗ ಮೆಕ್ಸಿಕೋದಿಂದಲೂ ಭಾರತದ ಮೇಲೆ ಶೇ.50 ಸುಂಕ: ಜನವರಿ 1ರಿಂದಲೇ ಹೊಸ ತೆರಿಗೆ ಜಾರಿ
ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!