
ಬರ್ಲಿನ್(ಅ.17): ಬೃಹತ್ ತೆರಿಗೆ ವಂಚನೆ ಪ್ರಕರಣ ಬಯಲಾದ ಪರಿಣಾಮ ಇಡೀ ಯೂರೋಪ್ ತತ್ತರಿಸಿ ಹೋಗಿದೆ. ಟ್ಯಾಕ್ಸ್ ಹಗರಣದಿಂದ ಯೂರೋಪ್ ನ ರಾಷ್ಟ್ರೀಯ ಖಜಾನೆಗೆ ಬರೋಬ್ಬರಿ 57 ಬಿಲಿಯನ್ ಯೂರೋ ನಷ್ಟವಾಗಿದೆ.
ಜರ್ಮನಿ, ಫ್ರಾನ್ಸ್, ಸ್ಪೇನ್, ಇಟಲಿ, ನೆದರಲ್ಯಾಂಡ್, ಡೆನ್ಮಾರ್ಕ್, ಬೆಲ್ಜಿಯಂ, ಆಸ್ಟ್ರೀಯಾ, ನಾರ್ವೆ, ಸ್ವಿಡ್ಜರಲ್ಯಾಂಡ್ ಮತ್ತು ಫಿನ್ಲ್ಯಾಂಡ್ ರಾಷ್ಟ್ರಗಳಲ್ಲಿ ಬೃಹತ್ ತೆರಿಗೆ ವಂಚನೆ ನಡೆದಿದ್ದು, ಇದರಿಂದ ಯೂರೋಪ್ ಆರ್ಥಿಕತೆ ಮೇಲೆ ಊಹಿಸಲಸಾಧ್ಯವಾದ ದುಷ್ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.
ಈ ರಾಷ್ಟ್ರಗಳ ಪೈಕಿ ಜರ್ಮನಿಯೊಂದರಲ್ಲೇ 31.8 ಬಿಲಿಯನ್ ಯೂರೋ ಮೊತ್ತದ ತೆರಿಗೆ ವಂಚನೆ ನಡೆದಿದ್ದು, ಅಲ್ಲಿನ ಸರ್ಕಾರ ಉನ್ನತ ತನಿಖೆಗೆ ಸಿದ್ಧವಿದೆ ಎಂದು ಹಣಕಾಸು ಸಚಿವರು ಭರವಸೆ ನೀಡಿದ್ದಾರೆ.
ಇನ್ನುಳಿದಂತೆ ಫ್ರಾನ್ಸ್ ನಲ್ಲಿ 17 ಬಿಲಿಯನ್ ಯೂರೋ, ಇಟಲಿಯಲ್ಲಿ 4.5, ಡೆನ್ಮಾರ್ಕ್ ನಲ್ಲಿ 1.7 ಮತ್ತು ಬೆಲ್ಜಿಯಂನಲ್ಲಿ 201 ಮಿಲಿಯನ್ ಯೂರೋ ತೆರಿಗೆ ವಂಚನೆ ಪ್ರಕರಣ ದಾಖಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.