‘ಚಾಯ್ ಪೇ ಚರ್ಚಾ’ ಬಿಟ್ಬಿಡಿ: ‘ಪೆಟ್ರೋಲ್ ಪೇ ಖರ್ಚಾ’ ಮಾತಾಡಿ!

Published : Nov 02, 2018, 10:52 AM IST
‘ಚಾಯ್ ಪೇ ಚರ್ಚಾ’ ಬಿಟ್ಬಿಡಿ: ‘ಪೆಟ್ರೋಲ್ ಪೇ ಖರ್ಚಾ’ ಮಾತಾಡಿ!

ಸಾರಾಂಶ

ತೈಲೋತ್ಪನ್ನಗಳ ದರ ಇಳಿಕೆಯ ಗುಡ್ ನ್ಯೂಸ್! ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆ! ದೇಶದ ಮಹಾನಗರಗಳಲ್ಲಿ ಇಳಿಕೆಯತ್ತ ಮುಖ ಮಾಡಿದ ತೈಲದರ! ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟು ಗೊತ್ತಾ?

ನವದೆಹಲಿ(ನ.2): ಸತತ ಮೂರನೇ ವಾರವೂ ತೈಲೋತ್ಪನ್ನಗಳ ದರ ಇಳಿಕೆಯಾಗಿದ್ದು, ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ.

ಇಂದು ಪೆಟ್ರೋಲ್ ದರಲ್ಲಿ 19 ಪೈಸೆಯಷ್ಟು ಇಳಿಕೆಯಾಗಿದ್ದು, ಡೀಸೆಲ್ ದರದಲ್ಲಿ 14 ಪೈಸೆಯಷ್ಟು ಇಳಿಕೆ ಕಂಡು ಬಂದಿದೆ. ರಾಜಧಾನಿ ನವದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 79.18ರೂಗೆ ಇಳಿಕೆಯಾಗಿದ್ದು, ಡೀಸೆಲ್ ದರ 73.64ಕ್ಕೆ ಇಳಿಕೆಯಾಗಿದೆ.

ಇನ್ನು ವಾಣಿಜ್ಯ ರಾಜಧಾನಿ ಮುಂಬೈನಲ್ಲೂ ಪೆಟ್ರೋಲ್ ದರದಲ್ಲಿ 18ಪೈಸೆಯಷ್ಟು ಇಳಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರ 84.68 ರೂಗಳಿಗೆ ಇಳಿಕೆಯಾಗಿದ್ದು, ಡೀಸೆಲ್ ದರ ಕೂಡ 14 ಪೈಸೆಯಷ್ಟು ಕಡಿಮೆಯಾಗಿ ಪ್ರತೀ ಲೀಟರ್ ಡೀಸೆಲ್ ದರ 77.18ಕ್ಕೆ ಇಳಿಕೆಯಾಗಿದೆ.

ಅದರಂತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ 79.82 ರೂ. ಮತ್ತು ಡೀಸೆಲ್ ದರ 74.12 ರೂ. ಆಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಏರ್‌ಟೆಲ್ ಗ್ರಾಹಕರಿಗೆ ಬಂಪರ್ ಆಫರ್, ಐಕ್ಲೌಡ್, ಆ್ಯಪಲ್ ಟಿವಿ, ಆ್ಯಪಲ್ ಆರ್ಕೇಡ್ ಉಚಿತ
ಶಿವಮೊಗ್ಗದ MSME ಉದ್ಯಮಿಗಳಿಗೆ ಡಿಜಿಟಲ್‌ ಬೂಸ್ಟ್‌; ಇ-ಕಾಮರ್ಸ್‌ನಿಂದ ಹೊಸ ಮಾರುಕಟ್ಟೆ ಅವಕಾಶ!