ಕೈ ಹಿಡಿದ ಹೋಳಿಗೆ : ವೈಟರ್ ಕೆಲ್ಸ ಬಿಟ್ಟು ಉದ್ಯಮ ಆರಂಭಿಸಿದ ಇವರ ತಿಂಗಳ ಟರ್ನೋವರ್ ಈಗ 18 ಕೋಟಿ

Published : Feb 07, 2025, 05:09 PM IST
 ಕೈ ಹಿಡಿದ ಹೋಳಿಗೆ : ವೈಟರ್ ಕೆಲ್ಸ ಬಿಟ್ಟು ಉದ್ಯಮ ಆರಂಭಿಸಿದ ಇವರ ತಿಂಗಳ ಟರ್ನೋವರ್ ಈಗ 18 ಕೋಟಿ

ಸಾರಾಂಶ

ಹೊಟೇಲೊಂದರಲ್ಲಿ ವೈಟರ್ ಆಗಿ ವೃತ್ತಿ ಆರಂಭಿಸಿದ ಕೆ.ಆರ್ ಭಾಸ್ಕರ್, ಇಂದು ಕೋಟ್ಯಾಂತರ ರೂ. ವ್ಯವಹಾರ ಮಾಡುವ ಹೋಳಿಗೆ ಉದ್ಯಮದ ಮಾಲೀಕರು. ಮುಂಬೈನ ಬೀದಿಗಳಲ್ಲಿ ಹೋಳಿಗೆ ಮಾರುತ್ತಿದ್ದ ಇವರು, ಇಂದು ದೇಶದೆಲ್ಲೆಡೆ ಗುರುತಿಸಲ್ಪಡುವ 'ಪುರಾನ್ ಪೋಲಿ' ಬ್ರಾಂಡ್‌ನ ಸ್ಥಾಪಕರು.

ಜೀವನದಲ್ಲಿ ತೆಗೆದುಕೊಳ್ಳುವ ಕೆಲವೊಂದು ಸ್ಪಷ್ಟ ನಿರ್ಧಾರಗಳು ಬದುಕನ್ನು ಎಲ್ಲೋ ತಂದು ನಿಲ್ಲಿಸುತ್ತವೆ.  ಬಡತನವನ್ನು ದೂರ ಮಾಡಿ ಶ್ರೀಮಂತಿಕೆ ತರುತ್ತವೆ. ಬಡತನದಲ್ಲಿ ಹುಟ್ಟಿದರು ಕಷ್ಟಪಟ್ಟ ದುಡಿಮೆಯಿಂದ ಶ್ರೀಮಂತಿಕೆಯ ಸಾಮ್ರಾಜ್ಯ ಸ್ಥಾಪಿಸಿದ ಹಲವು ಉದ್ಯಮಿಗಳು ಗಣ್ಯರು ನಮ್ಮ ನಡುವೆ ಇದ್ದಾರೆ. ಅಂತಹವರ ಪಾಲಿಗೆ ಸೇರುತ್ತಾರೆ ನಮ್ಮ ಕರ್ನಾಟಕದವರೇ ಆದ ಉದ್ಯಮಿ ಕೆ.ಆರ್ ಭಾಸ್ಕರ್‌. ಹೌದು ಹೊಟೇಲೊಂದರಲ್ಲಿ ವೈಟರ್ ಆಗಿ ವೃತ್ತಿ ಆರಂಭಿಸಿದ ಅವರು ದೊಡ್ಡ ಉದ್ಯಮಿಯಾಗಿ ಬೆಳೆದ ರೀತಿಯೇ ಒಂದು ಅಮೋಘ

ಪ್ರಸ್ತುತ ನೀವು ಬೆಂಗಳೂರಿನಲ್ಲಿ 'ಭಾಸ್ಕರ್ ಮನೆ ಹೋಳಿಗೆ' ಅಥವಾ ಹೋಳಿಗೆ ಮನೆ ಎಂಬ ಹೆಸರಿನಲ್ಲಿ ಉದ್ಯಾನಗರಿಯ ಜನರಿಗೆ ವಿವಿಧ ರೀತಿಯ ಹೋಳಿಗೆಗಳ ರುಚಿ  ತೋರಿಸುವ ಶಾಪ್‌ನ್ನು ಕೇಳಿರಬಹುದು. ಈ ಪ್ರಸಿದ್ಧ ಹೋಳಿಗೆ ಮನೆಯ ಸ್ಥಾಪಕರೇ ಕೆ. ಆರ್ ಭಾಸ್ಕರ್‌, ಪ್ರಸ್ತುತ ಇವರ ಹೋಳಿಗೆ ಮನೆ ಕರ್ನಾಟಕಕ್ಕಿಂತ ಹೆಚ್ಚು ಮಹಾರಾಷ್ಟ್ರದಲ್ಲಿ ಭಾರಿ ಜನಪ್ರಿಯತೆ ಪಡೆದಿದೆ. Puranpoli Ghar of Bhaskar ಹೆಸರಿನಲ್ಲಿ ಕಾರ್ಯಾಚರಿಸುತ್ತಿರುವ ಈ ಹೊಳಿಗೆ ಮನೆಯನ್ನು ಸ್ಥಾಪಿಸುವ ಮೂಲಕ ಮಹಾರಾಷ್ಟ್ರದಲ್ಲಿಯೂ ಅವರು ಮನೆ ಮನೆಗೂ ಪರಿಚಯವಿರುವ ಹೆಸರಾಗಿದ್ದಾರೆ. ಈ ಮೂಲಕ ಅವರು ಹಣಕಾಸು ವರ್ಷದಲ್ಲಿ  ಅವರು ಸುಮಾರು 3.6 ಕೋಟಿ ರೂಪಾಯಿ ಆದಾಯ ಗಳಿಕೆ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ಅವರು ನಡೆದು ಬಂದ ಹಾದಿಯೇನು ಸುಲಭದ್ದಾಗಿರಲಿಲ್ಲ, 

ಉದ್ಯಮಕ್ಕೆ ಐಡಿಯಾಗಳನ್ನು ನೀಡುವ, ಪ್ರಪಂಚದಾದ್ಯಂತದ ಮಹತ್ವಾಕಾಂಕ್ಷಿ ಉದ್ಯಮಿಗಳು ತಮ್ಮ ವ್ಯವಹಾರ ಮಾದರಿಗಳನ್ನು ಹೂಡಿಕೆದಾರರ ಸಮಿತಿ ಮುಂದಿಡುವ ಹಾಗೂ ಅವರ ಕಲ್ಪನೆಯಲ್ಲಿ ಹಣವನ್ನು ಹೂಡಿಕೆ ಮಾಡುವಂತೆ ಮನವೊಲಿಸುವ ಕಾರ್ಯಕ್ರಮವಾದ ಶಾರ್ಕ್‌ ಟ್ಯಾಂಕ್‌ನ ಸೀಸನ್ 2 ರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಈ ಹೋಳಿಗೆ ಉದ್ಯಮಿ ಕೆ ಆರ್ ಭಾಸ್ಕರ್ ಅವರು, ತಾವು 25 ವರ್ಷಗಳ ಹಿಂದೆ ತೆಗೆದುಕೊಂಡ ನಿರ್ಧಾರ ಹಾಗೂ ತಮ್ಮ ಈ ಯಶಸ್ವಿ ಪಯಣದ ಬಗ್ಗೆ ತಿಳಿಸಿದ್ದಾರೆ. 12ನೇ ವಯಸ್ಸಿನಲ್ಲಿ ಬೆಂಗಳೂರಿನ ಹೊಟೇಲೊಂದರಲ್ಲಿ ವೈಟರ್ ಆಗಿ ಕೆಲಸಕ್ಕೆ ಸೇರಿದ ಭಾಸ್ಕರ್ ಅಲ್ಲಿ ಐದು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಎಲ್ಲಾ ಹೊಟೇಲ್‌ ಮಾಣಿಗಳಂತೆ ಅವರು ಕೂಡ ಪಾತ್ರೆಗಳನ್ನು ತೊಳೆದು ಟೇಬಲ್‌ಗಳನ್ನು ಕ್ಲೀನ್ ಮಾಡಿ ಮ್ಯಾನೇಜರ್‌ಗಳಿಂದ ಬೈಸಿಕೊಂಡು ಕಷ್ಟಪಟ್ಟು, ದುಡಿದಿದ್ದಾರೆ. ಇದಾದ ನಂತರ ಅವರು ಡಾನ್ಸ್ ತರಬೇತುದಾರರಾಗಿ 8 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಇದರ ಜೊತೆಗೆ ಒಂದು ಪಾನ್ ಶಾಪನ್ನು ಕೂಡ ತೆರೆದು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಆದರೆ ಇದು ಯಾವುದೂ ಕೂಡ ಅವರ ಕೈ ಹಿಡಿದಿಲ್ಲ, ಒಳ್ಳೆಯ ಆದಾಯ ತಂದಿಲ್ಲ. 

ಇದಾದ ನಂತರ ತಮ್ಮ 23ನೇ ವಯಸ್ಸಿಗೆ ಅವರು ಹೋಳಿಗೆ ಅಥವಾ ಪುರಾನ್ ಪೋಲಿ (Puran Poli)ಮಾರಾಟ ಮಾಡುವ ಕೆಲಸ ಶುರು ಮಾಡುತ್ತಾರೆ. ಮುಂಬೈಗೆ ತೆರಳಿದ ಅವರು ಅಲ್ಲಿನ ಬೀದಿಗಳಲ್ಲಿ ಸೈಕಲ್‌ಗಳಲ್ಲಿ ಹೋಳಿಗೆ ಮಾರುವ ಉದ್ಯಮವನ್ನು ಆರಂಭಿಸಿದ್ದಾರೆ. ಆದರೆ ಬಾಯಿಗೆ ಸಿಹಿ ನೀಡುವ ಹೋಳಿಗೆ ಅಥವಾ ಪುರಾನ್ ಪೋಲಿ ಅವರ ಕೈ ಹಿಡಿದಿದೆ. ಅಂದು ಬೀದಿಯಲ್ಲಿ ಹೋಳಿಗ ಮಾರುತ್ತಿದ್ದ ಭಾಸ್ಕರ್ ಇಂದು ವರ್ಷಕ್ಕೆ ಕೋಟ್ಯಾಂತರ ರೂ ವ್ಯವಹಾರ ಮಾಡುವ ಹೋಳಿಗೆ ಉದ್ಯಮದ ಮಾಲೀಕರಾಗಿದ್ದು, ತಮ್ಮದೇ ಆದ ಬ್ರಾಂಡ್ ನಿರ್ಮಿಸಿದ್ದಾರೆ. ಅವರೇ ಹೇಳುವಂತೆ ಅವರಿಗೆ ದೊಡ್ಡ ಬ್ರೇಕ್ ನೀಡಿದ್ದು, ಟಿವಿ ಚಾನೆಲೊಂದರ ಕುಕ್ಕಿಂಗ್ ಶೋ. ಇದು ಅವರಿಗೆ ರಾಷ್ಟ್ರದ್ಯಂತ ಗುರುತಿಸಿಕೊಳ್ಳುವಂತೆ ಮಾಡಿತ್ತು. ಹಾಗೂ ತಮ್ಮದೇ ಆದ ಬ್ರಾಂಡ್ ಸ್ಥಾಪಿಸಲು ಕಾರಣವಾಯ್ತು. 

ಇಂದು ಇವರ ಪುರಾನ್ ಪೋಲಿ ಹೆಸರಿನ ಬ್ರಾಂಡನ್ನು ದೇಶದೆಲ್ಲೆಡೆ ಜನ ಗುರುತಿಸುತ್ತಾರೆ. ಪ್ರಸ್ತುತ ಭಾಸ್ಕರ್ ಅವರು ಪ್ರತಿ 8 ತಿಂಗಳಿಗೊಂದಂರಂತೆ ದೇಶದ ವಿವಿಧೆಡೆ ತಮ್ಮ ಕಂಪನಿಯ ಒಂದೊಂದೇ ಹೊಸ ಔಟ್‌ಲೆಟ್‌ಗಳನ್ನು ಸ್ಥಾಪಿಸುತ್ತಿದ್ದಾರೆ. ಇಂದು ಇವರ 17 ಶಾಪ್‌ಗಳಿದ್ದು ಕೇವಲ ಕರ್ನಾಟಕವೊಂದರಲ್ಲೇ10 ಪ್ರಾಂಚೈಸ್‌ಗಳಿವೆ. ಈ ಔಟ್‌ಲೆಟ್‌ಗಳಿಂದ ಇವರಿಗೆ ತಿಂಗಳಿಗೆ ಅಂದಾಜು 18 ಕೋಟಿಯ ಗಳಿಕೆ ಬರುತ್ತಿದೆ. ನೋಡಿದ್ರಲ್ಲ, ಹೇಗೆ ವೇಟರ್ ಆಗಿ ಕೆಲಸ ಮಾಡುತ್ತಿದ್ದ ಭಾಸ್ಕರ್‌, ಮುಂಬೈನ ಬೀದಿಯಲ್ಲಿ ಹೋಳಿಗೆ ಮಾಡುತ್ತಿದ್ದ ಭಾಸ್ಕರ್ ಹೇಗೆ ಇಂದು ಬಹುಕೋಟಿಯ ಒಡೆಯ ಆದ್ರು. ಅಂತ. ಒಂದು ಸರಿಯಾದ ನಿರ್ಧಾರ ಕಠಿಣ ಪರಿಶ್ರಮ ಅವರನ್ನು ಎಲಿಂದ ಎಲ್ಲಿಗೋ ಕೊಂಡೊಯ್ದಿದೆ. ಶ್ರಮ ಪಡುವವನಿಗೆ ಚಂಚಲೆಯಾದರೂ ಲಕ್ಷ್ಮಿ ಸದಾ ಒಲಿಯುತ್ತಾಳೆ ಎಂಬ ಮಾತು ನಿಜವಾಗಿದೆ. ಇವರ ಈ ಯಶೋಗಾಥೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? 

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!