
ನವದೆಹಲಿ: 2022 ವರ್ಷ ಅಂತ್ಯವಾಗಿ ಹೊಸವರ್ಷ 2023ಕ್ಕೆ ಕಾಲಿರಿಸಿ ಆಗಿದೆ. ಈ ವರ್ಷ ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಆಗಿರುವ ಹಲವು ಬದಲಾವಣೆಗಳು ಜನರನ್ನು ಸ್ವಾಗತಿಸಲು ಸಜ್ಜಾಗಿದೆ, ಕಾರುಗಳ ಖರೀದಿ, ಲಾಕರ್, ಕ್ರೆಡಿಟ್ ಕಾರ್ಡ್‌ಗೆ ಹೆಚ್ಚಿನ ಶುಲ್ಕ, ವಾಹನ ಪ್ರೀಮಿಯಂ ಹೆಚ್ಚಳ ಜನರ ಕೈ ಸುಡಲಿದೆ. ವಿಮೆ ಖರೀದಿಗೆ ಕೆವೈಸಿ ಕಡ್ಡಾಯ, ಕೇಬಲ್ ಟೀವಿ ಶುಲ್ಕ ಕೊಂಚ ಇಳಿಕೆ, ಹೈ ಸೆಕ್ಯೂರಿಟಿ ಪ್ಲೇಟ್ ಇಲ್ಲದಿದ್ದರೆ ಅಧಿಕ ದಂಡದಂತಹ ಹಲವು ನಿಯಮಗಳು ಜಾರಿಗೆ ಬರಲಿವೆ.
1. ಕಾರು ಖರೀದಿ ಇನ್ನು ದುಬಾರಿ
ನೀವು ಹೊಸ ಕಾರು ಖರೀದಿಸಲು ಯೋಜಿಸುತ್ತಿದ್ದರೆ, ಹೊಸ ವರ್ಷವು ನಿಮಗೆ ದುಬಾರಿಯಾಗಲಿದೆ. ದೇಶದ ಬಹುತೇಕ ಎಲ್ಲಾ ಪ್ರಮುಖ ಕಾರು ಕಂಪನಿಗಳು (major car companies) ತಮ್ಮ ಉತ್ಪನ್ನಗಳ ಬೆಲೆಯನ್ನು 90,000 ರು.ವರೆಗೆ ಹೆಚ್ಚಿಸಲಿವೆ. ಮಾರುತಿ (Maruti), ಕಿಯಾ (Kia), ಟಾಟಾ ಮೋಟಾರ್ಸ್(Tata Motors), ಮರ್ಸಿಡಿಸ್, ಹ್ಯುಂಡೈ, ಆಡಿ, ರೆನಾಲ್ಟ್ ಮತ್ತು ಎಂಜಿ ಮೋಟಾರ್ಸ್ ಈಗಾಗಲೇ ಬೆಲೆ ಏರಿಕೆ ಘೋಷಿಸಿವೆ. ಅದೇ ಸಮಯದಲ್ಲಿ, ಹೀರೋ ಮೋಟೋಕಾರ್ಪ್ ಕೂಡ ಬೆಲೆ ಏರಿಕೆಯನ್ನು ಘೋಷಿಸಿದೆ.
2. ಬ್ಯಾಂಕ್ ಲಾಕರ್‌ಗೆ ಹೆಚ್ಚು ಶುಲ್ಕ, ಹೊಸ ಒಪ್ಪಂದ
ನೀವು ಲಾಕರ್ ಅನ್ನು ಬಾಡಿಗೆಗೆ ಪಡೆದು ಅಮೂಲ್ಯ ವಸ್ತುಗಳನ್ನು ಅದರಲ್ಲಿ ಇಡಲು ಬಯಸಿದ್ದರೆ ಜ.1ರಿಂದ ನಿಯಮ ಬದಲಾಗಲಿವೆ. ಪರಿಷ್ಕೃತ ಲಾಕರ್ ಶುಲ್ಕ ನೀಡಲು ಹೊಸದಾಗಿ ಬ್ಯಾಂಕ್‌ನೊಂದಿಗೆ ಗ್ರಾಹಕರು ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲದೆ, ಬ್ಯಾಂಕ್‌ಗಳು ಒಪ್ಪಂದ ಮಾಡಿಕೊಳ್ಳುವ ಸಂದರ್ಭದಲ್ಲಿ ಯಾವುದೇ ಅನ್ಯಾಯದ ನಿಯಮಗಳು ಹಾಗೂ ಷರತ್ತುಗಳನ್ನು ಜ.1ರಿಂದ ಗ್ರಾಹಕರಿಗೆ ವಿಧಿಸುವಂತಿಲ್ಲ ಎಂದು ಆರ್‌ಬಿಐ (RBI) ಹೇಳಿದೆ.
ಹೊಸ ವರ್ಷದಲ್ಲಿ ದುಬಾರಿಯಾಗಲಿದೆಯಾ ಆರೋಗ್ಯ ವಿಮೆ? ಪ್ರೀಮಿಯಂ ಏರಿಕೆ ನಿರೀಕ್ಷೆ
3. ಕ್ರೆಡಿಟ್ ಕಾರ್ಡ್‌ಗೆ ಶೇ.1 ಹೆಚ್ಚು ಶುಲ್ಕ
ನೀವು ಕ್ರೆಡಿಟ್ ಕಾರ್ಡ್ (credit card) ಬಳಸುತ್ತಿದ್ದರೆ, ಹಲವು ಬ್ಯಾಂಕ್‌ಗಳಲ್ಲಿನ ರಿವಾರ್ಡ್ ಪಾಯಿಂಟ್‌ಗಳಿಗೆ ಸಂಬಂಧಿಸಿದ ನಿಯಮಗಳು ಜ.1ರಿಂದ ಬದಲಾಗಲಿವೆ. ಬ್ಯಾಂಕ್‌ಗಳು ರಿವಾರ್ಡ್ ಪಾಯಿಂಟ್‌ನ ಸ್ವರೂಪ ಹಾಗೂ ಶುಲ್ಕ ಬದಲಿಸಲಿವೆ. ಇದಕ್ಕಾಗಿ ಗ್ರಾಹಕರು ಶೇ.1ರಷ್ಟು ಹೆಚ್ಚು ಶುಲ್ಕ ನೀಡಬೇಕಾಗುತ್ತದೆ.
4. ಕೇಬಲ್ ಟೀವಿ ಶುಲ್ಕ ಇಳಿಕೆ
ಈ ಹೊಸ ವರ್ಷದಲ್ಲಿ ನಿಮ್ಮ ಕೇಬಲ್ ಟಿವಿ ವೆಚ್ಚಗಳು ಸ್ವಲ್ಪ ಕಡಿಮೆಯಾಗಬಹುದು. ಟ್ರಾಯ್ ಹೊಸ ನಿಯಮಗಳ ಪ್ರಕಾರ, 19 ರು.ಗಿಂತ ಕಮ್ಮಿ ದರ ಇರುವ ಚಾನೆಲ್‌ಗಳನ್ನು ಚಾನೆಲ್‌ಗಳ ಗುಚ್ಛದಲ್ಲಿ ಸೇರಿಸಬೇಕಾಗುತ್ತದೆ. ಅಲ್ಲದೆ, ಚಾನೆಲ್‌ಗಳ ಗುಚ್ಛಕ್ಕೆ ಶೇ.45ರಷ್ಟು ಗರಿಷ್ಠ ವಿನಾಯ್ತಿ ಮಿತಿ ಹೇರಲಾಗಿದೆ.
5. ವಾಹನ ವಿಮೆ ದುಬಾರಿ
ಜ.2023 ರಿಂದ ಮೋಟಾರು ವಿಮಾ ಪ್ರೀಮಿಯಂ ಸಹ ದುಬಾರಿಯಾಗಬಹುದು. ವಿಮಾ ನಿಯಂತ್ರಕ ಐಆರ್‌ಡಿಎಐ ಹೊಸ ನಿಯಮಗಳನ್ನು ಪರಿಗಣಿಸುತ್ತಿದೆ, ಅದರ ಅಡಿಯಲ್ಲಿ ವಿಮಾ ಕಂಪನಿಗಳು ವಾಹನಗಳ ಬಳಕೆ ಮತ್ತು ನಿರ್ವಹಣೆಯ ಆಧಾರದ ಮೇಲೆ ವಿಮಾ ಕಂತುಗಳನ್ನು ನಿಗದಿಪಡಿಸಬಹುದು. ಹೊಸ ವರ್ಷದಿಂದ ಜನರು ದುಬಾರಿ ವಿಮಾ ಕಂತುಗಳ (Auto insurance) ಆಘಾತಕ್ಕೆ ಒಳಗಾಗುವ ಸಾಧ್ಯತೆಯಿದೆ. ಇದರ ಹೊರತಾಗಿ, ಕೆವೈಸಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
ಎಲ್ಐಸಿ ಈ ಪಾಲಿಸಿಯಲ್ಲಿ ದಿನಕ್ಕೆ 130ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ 27 ಲಕ್ಷ ರೂ. ರಿಟರ್ನ್
6. ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಇಲ್ದಿದ್ರೆ ದಂಡ
ಹೈ ಸೆಕ್ಯುರಿಟಿ ರಿಜಿಸ್ಪ್ರೇಶನ್ (High security registration) ಪ್ಲೇಟ್‌ಗಳನ್ನು ಈಗಾಗಲೇ ಕಡ್ಡಾಯಗೊಳಿಸಲಾಗಿದೆ. ಆದಾಗ್ಯೂ, ಅದರ ಗಡುವು ವಿಸ್ತರಣೆ ಆಗುತ್ತಲೇ ಇದೆ. ಒಂದು ವೇಳೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸುವ ಅವಧಿಯನ್ನು ವಿಸ್ತರಿಸದಿದ್ದರೆ, ಇಂಥ ನಂಬರ್ ಪ್ಲೇಟ್ ಇಲ್ಲದವರು 5000 ರೂಪಾಯಿವರೆಗೆ ದಂಡ ತೆರಬೇಕಾಗುತ್ತದೆ.
7. ಫೋನ್ ಉತ್ಪಾದಕರಿಗೆ ಐಎಂಇಐ ನೋಂದಣಿ ಕಡ್ಡಾಯ
ಜ.1ರಿಂದ ಪ್ರತಿ ಫೋನ್ ತಯಾರಕರು, ಫೋನ್ ಆಮದು ಮತ್ತು ರಫ್ತು ಕಂಪನಿಗೆ ಪ್ರತಿ ಫೋನ್‌ನ ಐಎಂಇಐ ಸಂಖ್ಯೆಯ ನೋಂದಣಿ ಕಡ್ಡಾಯವಾಗಿರುತ್ತದೆ. ದೇಶ ಮತ್ತು ಪ್ರಪಂಚದಲ್ಲಿ ಹೆಚ್ಚುತ್ತಿರುವ ಡಿಜಿಟಲ್ ವಂಚನೆಯನ್ನು ತಡೆಯಲು ಸರ್ಕಾರವು ಈ ವ್ಯವಸ್ಥೆ ಜಾರಿಗೆ ತಂದಿದೆ.
8. ಭಾಗಶಃ ಪಿಂಚಣಿ ಹಿಂಪಡೆಯುವಿಕೆ ಇನ್ನು ಇರಲ್ಲ
ಎನ್‌ಪಿಎಸ್ (ರಾಷ್ಟ್ರೀಯ ಪಿಂಚಣಿ) ಯೋಜನೆಯಲ್ಲಿ ಜ.1ರಿಂದ ಮಹತ್ವದ ಬದಲಾವಣೆ ಆಗಲಿದೆ. ಎನ್‌ಪಿಎಸ್ ಖಾತೆಯಿಂದ ಭಾಗಶಃ ಮೊತ್ತವನ್ನು ಹಿಂಪಡೆಯಲು ಜ.1ರಿಂದ ಸಾಧ್ಯವಿಲ್ಲ. ಈ ಹಿಂದೆ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಕೋವಿಡ್ ಹಿನ್ನೆಲೆಯಲ್ಲಿ ನೌಕರರಿಗೆ ಭಾಗಶಃ ಹಿಂಪಡೆತದ ಸೌಲಭ್ಯವನ್ನು ನೀಡಿತ್ತು, ಅದನ್ನು ಈಗ ಹಿಂತೆಗೆದುಕೊಳ್ಳಲಾಗುತ್ತಿದೆ.
9. ಆದಾಯ ತೆರಿಗೆ ರಿಟನ್ಸ್‌ರ್ ಸಲ್ಲಿಕೆಗೆ ಅವಕಾಶವಿಲ್ಲ
ಆದಾಯ ತೆರಿಗೆ ರಿಟನ್ಸ್‌ರ್ ಸಲ್ಲಿಸಲು 2022ರ ಡಿ.31ರ ವರೆಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ ಅವಕಾಶ ನೀಡಿತ್ತು. ಜ.1ರಿಂದ ಈ ಅವಕಾಶ ಇಲ್ಲ. ಫೈಲ್ ಮಾಡದವರು ನಾನ್ ಫೈಲರ್ ಎಂಬ ಹಣೆಪಟ್ಟಿಗೆ ಪಾತ್ರರಾಗಲಿದ್ದಾರೆ ಹಾಗೂ ಅದರ ಪರಿಣಾಮ ಎದುರಿಸಬೇಕಾಗುತ್ತದೆ, ಪರಿಷ್ಕೃತ ರಿಟನ್ಸ್‌ರ್ ಸಲ್ಲಿಕೆಗೂ ಇನ್ನು ಅವಕಾಶವಿಲ್ಲ. ವಾರ್ಷಿಕ 2 ಕೋಟಿ ವಹಿವಾಟು ನಡೆಸುವ ವ್ಯಾಪಾರಿಗಳ ಜಿಎಸ್‌ಟಿ ಫೈಲಿಂಗ್ ಗಡುವು ಕೂಡ ಡಿ.31ಕ್ಕೇ ಮುಗಿದಿದೆ.
10. ವಿಮಾ ಪಾಲಿಸಿಗಳಿಗೆ ಕೆವೈಸಿ ಕಡ್ಡಾಯ
ಭಾರತೀಯ ವಿಮಾ ಪ್ರಾಧಿಕಾರ ಜ.1ರಿಂದ ವಿಮಾ ಪಾಲಿಸಿಗಳನ್ನು ಖರೀದಿಸಲು ಕೆವೈಸಿ ವಿವರ ಸಲ್ಲಿಕೆ ಕಡ್ಡಾಯಗೊಳಿಸಿದೆ. ವಿಮಾದಾರರು ಈಗ ಪಾಲಿಸಿ ಮಾರಾಟ ಮಾಡುವ ಮೊದಲು ಪಾಲಿಸಿದಾರರಿಂದ ಕೆವೈಸಿ ದಾಖಲೆಗಳನ್ನು ಪಡೆಯುತ್ತಾರೆ. ಜೀವವಿಮೆ, ಆರೋಗ್ಯ, ಮೋಟಾರು, ಮನೆ ಮತ್ತು ಪ್ರಯಾಣ ವಿಮೆ ಹೀಗೆ ಎಲ್ಲ ಪಾಲಿಸಿಗಳಿಗೆ ಇದು ಅನ್ವಯಿಸಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.