ಇಂದಿನಿಂದ ಬ್ಯಾಂಕಿಂಗ್, ಹಣಕಾಸು ಸೇವೆಯಲ್ಲಿ ಮಹತ್ವದ ಬದಲಾವಣೆಗಳು!

By Kannadaprabha News  |  First Published Jul 1, 2021, 7:41 AM IST

* ಇಂದಿನಿಂದ 8 ಮಹತ್ವದ ಬದಲಾವಣೆ

* ಇಂದಿನಿಂದ ಏನು ಬದಲಾಗುತ್ತಿದೆ ಗೊತ್ತಾ?

* ಹಣಕಾಸು ವಲಯದಲ್ಲಿ 8 ಮಹತ್ವದ ಬದಲಾವಣೆ ಜಾರಿ


ನವದೆಹಲಿ(ಜು.01): ಜು.1ರಿಂದ ಬ್ಯಾಂಕಿಂಗ್‌ ಹಾಗೂ ದಿನನಿತ್ಯದ ಸೇವೆಗಳಲ್ಲಿ ಕೆಲವೊಂದು ಬದಲಾವಣೆಗಳು ಆಗಲಿವೆ. ಬದಲಾವಣೆ ಆಗಲಿರುವ ಏಳು ಅಂಶಗಳು ಏನು ಎಂಬ ಮಾಹಿತಿ ಇಲ್ಲಿದೆ.

ಎಸ್‌ಬಿಐ ಎಟಿಎಂ ವಿತ್‌ಡ್ರಾವಲ್‌ಗೆ ಶುಲ್ಕ

Latest Videos

undefined

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ)ನ ಗ್ರಾಹಕರು ಮುಂದಿನ ತಿಂಗಳಿನಿಂದ ಎಟಿಎಂನಲ್ಲಿ 4 ಬಾರಿ ಮಾತ್ರ ಉಚಿತವಾಗಿ ಹಣ ವಿತ್‌ಡ್ರಾ ಮಾಡಬಹುದು. ಉಚಿತ ಕೋಟಾ ಮುಗಿದ ಬಳಿಕ ಹಣ ವಿತ್‌ಡ್ರಾವಲ್‌ ಮಾಡಿದರೆ ಪ್ರತಿ ವಹಿವಾಟಿಕಗೆ ಎಸ್‌ಬಿಐ 15 ರು. ಶುಲ್ಕ ವಿಧಿಸಲಿದೆ.

ಹೆಚ್ಚುವರಿ ಚೆಕ್‌ಬುಕ್‌ ಬಳಕೆಗೆ ಶುಲ್ಕ

ಎಸ್‌ಬಿಐನ ನೂತನ ನಿಯಮದ ಪ್ರಕಾರ ಒಂದು ಹಣಕಾಸು ವರ್ಷದಲ್ಲಿ 10 ಚೆಕ್‌ ಲೀಫ್‌ಗಳನ್ನು ಮಾತ್ರ ಉಚಿತವಾಗಿ ಬಳಕೆ ಮಾಡಬಹುದು. ಹೆಚ್ಚುವರಿ ಚೆಕ್‌ಬುಕ್‌ ಬಳಕೆಗೆ 40 ಶುಲ್ಕ ವಿಧಿಸಲಾಗುತ್ತದೆ.

ಐಟಿಆರ್‌ ಸಲ್ಲಿಸದಿದ್ದರೆ ದುಪ್ಪಟ್ಟು ಟಿಡಿಎಸ್‌

ಕಳೆದ ಎರಡು ವರ್ಷದಿಂದ ಆದಾಯ ತೆರಿಗೆ ಪಾವತಿ (ಐಟಿಆರ್‌) ವಿವರ ಸಲ್ಲಿಸದೇ ಬಾಕಿ ಉಳಿಸಿಕೊಂಡಿದ್ದರೆ ವೇತನದಾರರಿಗೆ ಜು.1ರಿಂದ ದುಪ್ಪಟ್ಟು ಟಿಡಿಎಸ್‌ ಕಡಿತಗೊಳ್ಳಲಿದೆ. 50 ಸಾವಿರ ಮೇಲ್ಪಟ್ಟಟಿಡಿಎಸ್‌ಗೆ ಈ ನಿಯಮ ಅನ್ವಯ ಆಗಲಿದೆ.

ಸಿಂಡಿಕೇಟ್‌ ಬ್ಯಾಂಕ್‌ ಐಎಫ್‌ಎಸ್‌ಸಿ ಕೋಡ್‌ ಬದಲು

ಸಿಂಡಿಕೇಟ್‌ ಬ್ಯಾಂಕ್‌ ಕೆನರಾ ಬ್ಯಾಂಕ್‌ನಲ್ಲಿ ವಿಲೀನ ಆಗಿರುವುದರಿಂದ ಜು.1ರಿಂದ ಸಿಂಡಿಕೇಟ್‌ ಬ್ಯಾಂಕಿನ ಐಎಫ್‌ಎಸ್‌ಸಿ ಕೋಡ್‌ ಬದಲಾಣೆ ಆಗಲಿದೆ. ನೂತನ ಐಎಫ್‌ಎಸ್‌ಸಿ ಕೋಡ್‌ ಇಲ್ಲದಿದ್ದರೆ ಹಣದ ವರ್ಗಾವಣೆ ಆಗಲ್ಲ.

2 ಬ್ಯಾಂಕುಗಳ ಚೆಕ್‌ ಬುಕ್‌ ಬದಲು

ಆಂಧ್ರ ಬ್ಯಾಂಕ್‌ ಮತ್ತು ಕಾರ್ಪೊರೇಷನ್‌ ಬ್ಯಾಂಕುಗಳು ಯೂನಿಯನ್‌ ಬ್ಯಾಂಕಿನಲ್ಲಿ ವಿಲೀನಗೊಂಡಿರುವುದರಿಂದ ಈ ಎರಡು ಬ್ಯಾಂಕುಗಳ ಗ್ರಾಹಕರಿಗೆ ಜು.1ರಿಂದ ಹೊಸ ಚೆಕ್‌ಬುಕ್‌ ನೀಡಲಾಗುತ್ತದೆ.

ಹೀರೋ ಬೈಕ್‌, ಮಾರುತಿ ಕಾರು ದುಬಾರಿ

ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಿಕಾ ಕಂಪನಿಗಳಲ್ಲಿ ಒಂದಾದ ಹೀರೋ ಮೋಟರ್‌ ಕಾಪ್‌ರ್‍ ಹಾಗೂ ಕಾರು ಉತ್ಪಾದಕ ‘ಮಾರುತಿ’ ಜು.1ರಿಂದ ಎಕ್ಸ್‌ ಶೋ ರೂಮ್‌ ದರಗಳನ್ನು ಏರಿಕೆ ಮಾಡಲಿದೆ.

ಎಲ್‌ಪಿಜಿ ಸಿಲಿಂಡರ್‌ ದರ ಪರಿಷ್ಕರಣೆ

ತೈಲ ಕಂಪನಿಗಳು ಪ್ರತಿ ತಿಂಗಳ 1ನೇ ತಾರೀಖಿನಂದು ಎಲ್‌ಪಿಜಿ ಸಿಲಿಂಡರ್‌ ದರವನ್ನು ಪರಿಷ್ಕರಿಸುತ್ತಿವೆ. ಹೀಗಾಗಿ ಜು.1ರಿಂದ ಎಲ್‌ಪಿಜಿ ಸಿಲಿಂಡರ್‌ ದರ ಪರಿಷ್ಕರಣೆಗೊಳ್ಳುವ ಸಾಧ್ಯತೆ ಇದೆ.

click me!