
ನವದೆಹಲಿ(ಮೇ.23) ಸೈಬರ್ ವಂಚಕರು ಭಾರಿ ನಾಜೂಕಾಗಿ ಡೇಟಾ ಸಂಗ್ರಹಿಸಿ ಬಳಿಕ ವಂಚನೆ ಆರಂಭಿಸುತ್ತಾರೆ. ಹೀಗೆ ಮಾಡುವಾಗ ಕೆಲವು ಬಾರಿ ಎಡವಟ್ಟುಗಳಾಗಿದೆ. ಪೊಲೀಸರ ಸೋಗಿನಲ್ಲಿ ಪೊಲೀಸರಿಗೆ ಫೋನ್ ಮಾಡಿದ ಘಟನೆಗಳು ನಡೆದಿದೆ. ಇದೀಗ ವಂಚಕರು ಭಾರಿ ಪ್ಲಾನ್ ಮಾಡಿದ ವಂಚನೆಯೊಂದು ಉಲ್ಟಾ ಹೊಡೆದ ಘಟನೆ ನಡೆದಿದೆ. ಈ ಬಾರಿ ಸೈಬರ್ ವಂಚಕರು ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ವರ್ಮಾ ಹೆಸರಿನಲ್ಲಿ ಹಣ ದೋಚಲು ಪ್ಲಾನ್ ಮಾಡಿದ್ದಾರೆ. ಆದರೆ ಈ ಪ್ಲಾನ್ ಒಂದೇ ನಿಮಿಷದಲ್ಲಿ ಉಲ್ಟಾ ಹೊಡದಿದೆ. ಕಾರಣ ನಾನು ವಿಜಯ್ ಶೇಖರ್ ಶರ್ಮಾ ಎಂದು ಪೇಟಿಎಂ ಸಂಸ್ಥಾಪಕ, ಅಸಲಿ ವಿಜಯ್ ಶೇಖರ್ ಶರ್ಮಾ ಅವರಿಗೇ ವಂಚನೆ ಮಾಡಲು ಹೋದ ಘಟನೆ ನಡೆದಿದೆ. ಇತ್ತ ಅಸಲಿ ವಿಜಯ್ ಶೇಖರ್ ಶರ್ಮಾ ವಂಚಕರ ಜೊತೆ ನಡೆಸಿದ ಸಂಭಾಷಣೆ ಕೂಡ ವೈರಲ್ ಆಗಿದೆ.
ವಿಜಯ್ ಶೇಖರ್ ಶರ್ಮಾ ಹೆಸರಿನಲ್ಲಿ ಪ್ಲಾನ್
ಸೈಬರ್ ವಂಚಕರು ಒಂದು ಸಣ್ಣ ಎಳೆ ಹಿಡಿದು ಅದೆಷ್ಟೋ ದೂರದಲ್ಲಿದ್ದ ವ್ಯಕ್ತಿಯನ್ನು ಡಿಜಿಟಲ್ ಅರೆಸ್ಟ್ ಮಾಡುತ್ತಾರೆ. ಇತ್ತ ಯಾರದ್ದೂ ಖಾತೆಯಿಂದ ಹಣ ಎಗರಿಸಿಬಿಡುತ್ತಾರೆ. ಅಥವಾ ಇನ್ಯಾವುದೋ ಸೋಗಿನಲ್ಲಿ ಅಮಾಯಕರಿಂದ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ತಂತ್ರಜ್ಞಾನ, ಭಾವನೆ, ಸಂಬಂಧ ಸೇರಿದಂತೆ ಹಲವು ವಿಚಾರಗಳ ಮುಂದಿಟ್ಟುಕೊಂಡು ವಂಚನೆ ನಡೆಸುತ್ತಾರೆ. ಹೀಗೆ ಎಲ್ಲಾ ತಯಾರಿ ಜೊತೆ ವಂಚಕರ ಜಾಲ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರ ಪೇಟಿಂ ಕಂಪನಿಯಿಂದ ಹಣ ಎಗರಿಸಲು ಪ್ಲಾನ್ ಮಾಡಿದೆ. ಇದಕ್ಕಾಗಿ ಒಂದು ನಂಬರ್‌ನ್ನು ವಿಜಯ್ ಶೇಖರ್ ಶರ್ಮಾ ಎಂಬ ಹೆಸರಿನಲ್ಲಿ ನಕಲಿ ಮಾಡಿದ್ದಾರೆ. ಈ ಹೊಸ ನಂಬರ್ ಮೂಲ ಹೆಸರು ವಿಜಯೇ ಶೇಖರ್ ಶರ್ಮಾ ಕಾಣಿಸಿಕೊಳ್ಳುತ್ತದೆ. ಬಳಿಕ ಪೇಟಿಎಂ ಉದ್ಯೋಗಳಿಗೆ ಮೇಸೇಜ್ ಮಾಡಿ ಅವರಿಂದ ಮಾಹಿತಿ ಅಥವಾ ಡೇಟಾ ಪಡೆದು ಹಣ ವಂಚಿಸುವುದು ಪ್ಲಾನ್ ಆಗಿತ್ತು.
ಸೈಬರ್ ವಂಚಕರ ಗಂಭೀರ ಪ್ರಯತ್ನ ಈಗ ಫುಲ್ ಟ್ರೋಲ್
ಸೈಬರ್ ವಂಚಕರು ಎಲ್ಲಾ ತಯಾರಿಯೊಂದಿಗೆ ಪೇಟಿಎಂ ಉದ್ಯೋಗಿಯೊಬ್ಬನ ಟಾರ್ಗೆಟ್ ಮಾಡಿ ಮೆಸೇಜ್ ಮಾಡಿದ್ದಾರೆ. ಆದರೆ ಇದು ಉದ್ಯೋಗಿ ಆಗರಿಲ್ಲ. ಅಸಲಿಗೆ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಆಗಿದ್ದರು. ವಿಜಯ್ ಶೇಖರ್ ಶರ್ಮಾಗೆ, ನಕಲಿ ವಿಜಯ್ ಶೇಖರ್ ಶರ್ಮಾ ಮೆಸೇಜ್ ಮಾಡಿ ಪೇಚಿಗೆ ಸಿಲುಕಿದ್ದಾನೆ. ಇತ್ತ ಅಸಲಿ ವಿಜಯ್ ಶೇಖರ್ ಶರ್ಮಾ ಸಂಭಾಷಣೆಯ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಇದರಿಂದ ವಂಚಕರ ಪ್ರಯತ್ನ ಫುಲ್ ಟ್ರೋಲ್ ಆಗಿದೆ.
ಅಸಲಿ ವಿಜಯ್ ಶೇಖರ್ ಶರ್ಮಾಗೆ ಮೆಸೇಜ್ ಮಾಡಿದ ನಕಲಿ ವಂಚಕ, ನಾನು ವಿಜಯ್ ಶೇಖರ್ ಶರ್ಮಾ, ಇದು ನನ್ನ ಹೊಸ ವ್ಯಾಟ್ಸಾಪ್ ನಂಬರ್ ಸೇವ್ ಮಾಡಿಕೊಳ್ಳಿ ಎಂದಿದ್ದಾನೆ. ಒಂದೇ ಒಂದು ಮೆಸೇಜ್‌ನಲ್ಲಿ ಪೇಟಿಎಂ ಸಂಸ್ಥಾಪಕರಿಗೆ ವಂಚನೆ ಜಾಲವೊಂದು ಪ್ರಯತ್ನ ನಡೆಸುತ್ತಿದೆ ಅನ್ನೋದು ಅರಿವಾಗಿದೆ. ಈ ಸಂದೇಶವನ್ನು ವಿಜಯ್ ಶೇಖರ್ ನಿರ್ಲಕ್ಷಿಸಲಿಲ್ಲ. ಇವರ ಜೊತೆಗೆ ಸಂಭಾಷಣೆ ನಡೆಸಿದ್ದಾರೆ. ಸರಿ ಸರ್ ಸೇವ್ ಮಾಡಿಕೊಳ್ಳುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಕಚೇರಿಯಲ್ಲಿದ್ದೀರಾ ಎಂಬ ಮರು ಪ್ರಶ್ನೆಗೆ ವಿಜಯ್ ಶೇಖರ್ ಹೌದು ಎಂದಿದ್ದಾರೆ. ಬಕ್ರಾ ಬಲೆಗೆ ಬಿದ್ದ ಎಂದು ವಂಚಕ, ನಿಮಗೆ ಸ್ವಲ್ಪ ಕೆಲಸ ಹೇಳುತ್ತೇನೆ ಮಾಡಬೇಕು ಎಂದಿದ್ದಾನೆ.
ಕಂಪನಿ ಅಕೌಂಟ್ ಚೆಕ್ ಮಾಡಿ ಎಷ್ಟು ಬ್ಯಾಲೆನ್ಸ್ ಇದೆ. ಇದರ ಸ್ಕ್ರೀನ್ ಶಾಟ್ ಶೇರ್ ಮಾಡಲು ವಂಚಕ ಸೂಚಿಸಿದ್ದಾನೆ. ನನ್ನ ಫೋನ್ ಫಾರ್ಮ್ಯಾಟ್ ಆಗಿದೆ. ಹಲವು ನಂಬರ್ ಇಲ್ಲ. ಸದ್ಯ ಫಿನಾನ್ಸ್ ಟೀಮ್‌ನಲ್ಲಿ ಶಿಫ್ಟ್‌ನಲ್ಲಿ ಯಾರಿದ್ದಾರೆ ಎಂದು ವಂಚಕ ಮರು ಪ್ರಶ್ನೆ ಹಾಕಿದ್ದಾನೆ. ಹೀಗೆ ವಂಚಕನ ಜೊತೆ ಅಸಲಿ ವಿಜಯ್ ಶೇಖರ್ ಶರ್ಮಾ ನಡೆಸಿದ ಸಂಭಾಷಣೆ ವೈರಲ್ ಆಗಿದೆ. ವಿಜಯ್ ಶೇಖರ್ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರೆ. ಇದೀಗ ಪೊಲೀಸರು ಈ ವಂಚಕ ಜಾಲ ಪತ್ತೆ ಹಚ್ಚಲು ಮುಂದಾಗಿದ್ದಾರೆ .
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.