2022ರ ಫಾರ್ಚೂನ್ ಗ್ಲೋಬಲ್ 500 ಪಟ್ಟಿ ಬಿಡುಗಡೆಯಾಗಿದ್ದು, ಎಲ್‌ಐಸಿ ಇದೇ ಮೊದಲ ಬಾರಿಗೆ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಅಲ್ಲದೆ, ಇದು ಭಾರತದ ಪ್ರಮುಖ ಸಂಸ್ಥೆ ಎನಿಸಿಕೊಂಡಿದೆ.
ಐಪಿಒ ಮೂಲಕ ಮೊದಲ ಬಾರಿಗೆ ಷೇರುಪೇಟೆಗೆ ಕಾಲಿಟ್ಟು ಸುದ್ದಿಮಾಡಿದ್ದ ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ (ಎಲ್‌ಐಸಿ) (Life Insurance Corporation) ಈಗ ಫಾರ್ಚೂನ್ ಗ್ಲೋಬಲ್ 500 (Fortune Global 500) ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಅಲ್ಲದೆ, ಭಾರತದ ಪ್ರಮುಖ ಸಂಸ್ಥೆ ಎನಿಸಿಕೊಂಡಿದೆ. ಇನ್ನೊಂದೆಡೆ, ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಭಾರತದ ಸಂಸ್ಥೆಗಳ ಪೈಕಿ ನಂತರದ ಸ್ಥಾನ ಪಡೆದಿದೆ. 97.26 ಬಿಲಿಯನ್ ಅಮೆರಿಕ ಡಾಲರ್ ಆದಾಯ ಹಾಗೂ 553.8 ಮಿಲಿಯನ್ ಅಮೆರಿಕ ಡಾಲರ್ ಲಾಭ ಹೊಂದಿರುವ ಸಂಸ್ಥೆಯಾದ ಎಲ್‌ಐಸಿ ಇತ್ತೀಚೆಗಷ್ಟೇ ಬಿಡುಗಡೆಯಾದ ಫಾರ್ಚೂನ್ 500 ಸಂಸ್ಥೆಗಳ ಪಟ್ಟಿಯಲ್ಲಿ ಟಾಪ್ 100 ಗೆ ದಾಂಗುಡಿ ಇಟ್ಟಿದ್ದು, 98 ನೇ ಸ್ಥಾನ ಪಡೆದುಕೊಂಡಿದೆ. ಇನ್ನೊಂದೆಡೆ, 2022 ರ ಈ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಕಳೆದ ಬಾರಿಗಿಂತ 51 ಸ್ಥಾನದಷ್ಟು ಜಿಗಿತ ಕಂಡಿದ್ದು, 104 ನೇ ಸ್ಥಾನದಲ್ಲಿದೆ ಎಂದು ತಿಳಿದುಬಂದಿದೆ.
ಎಲ್‌ಐಸಿ ಈ ಪಟ್ಟಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಅದರಲ್ಲೂ ಭಾರತದ ಅಗ್ರ ಶ್ರೇಯಾಂಕಿತ ಸಂಸ್ಥೆಯಾಗಿರುವುದು ಗಮನಾರ್ಹ. ಕಂಪನಿಯ ಸೇಲ್ಸ್‌ಗಳ ಆಧಾರದ ಮೇಲೆ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಕಂಪನಿಗಳನ್ನು ಶ್ರೇಣಿಕರಿಸುತ್ತದೆ. ಭಾರತದ ಎರಡನೇ ಶ್ರೇಯಾಂಕಿತ ಕಂಪನಿ ಎನಿಸಿಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಇತ್ತೀಚಿನ ವರ್ಷದಲ್ಲಿ 93.98 ಬಿಲಿಯನ್ ಡಾಲರ್ ಆದಾಯ ಮತ್ತು 8.15 ಬಿಲಿಯನ್ ಡಾಲರ್ ನಿವ್ವಳ ಲಾಭದೊಂದಿಗೆ ರಿಲಯನ್ಸ್ 19 ವರ್ಷಗಳಿಂದ ಫಾರ್ಚೂನ್ ಗ್ಲೋಬಲ್ 500 ಸಂಸ್ಥೆಗಳ ಪಟ್ಟಿಯಲ್ಲಿದೆ.
LIC Policy:ಎಲ್ಐಸಿಯ ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದ್ರೆ 22 ಲಕ್ಷ ರೂ. ಗಳಿಸಬಹುದು, ಹೇಗೆ?
ಅಗ್ರಸ್ಥಾನದಲ್ಲಿ ವಾಲ್‌ಮಾರ್ಟ್; ಭಾರತದ 9 ಕಂಪನಿಗಳಿಗೆ ಸ್ಥಾನ
ಯುಎಸ್ ಚಿಲ್ಲರೆ ವ್ಯಾಪಾರಿ ವಾಲ್‌ಮಾರ್ಟ್ ಅಗ್ರಸ್ಥಾನದಲ್ಲಿರುವ ಈ ಪಟ್ಟಿಯಲ್ಲಿ 9 ಭಾರತೀಯ ಕಂಪನಿಗಳು ಕಾಣಿಸಿಕೊಂಡಿವೆ. ಅವುಗಳಲ್ಲಿ ಐದು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾಗಿದ್ದರೆ, ಉಳಿದ ನಾಲ್ಕು ಖಾಸಗಿ ವಲಯದ ಕಂಪನಿಗಳಾಗಿವೆ. ಕಳೆದ ಆರ್ಥಿಕ ವರ್ಷದಲ್ಲಿ ತನ್ನ IPO ನೊಂದಿಗೆ ಹೊರಬಂದ LIC ಮಾತ್ರ ಭಾರತೀಯ ಕಾರ್ಪೊರೇಟ್ ಸಂಸ್ಥೆಗಳಲ್ಲಿ ರಿಲಯನ್ಸ್‌ಗಿಂತ ಫಾರ್ಚೂನ್ ಗ್ಲೋಬಲ್ 500 ಸಂಸ್ಥೆಗಳ ಪಟ್ಟಿಯಲ್ಲಿ ಉನ್ನತ ಸ್ಥಾನದಲ್ಲಿದೆ ಎಂದು ತಿಳಿದುಬಂದಿದೆ.
ಇನ್ನು, ಈ ಪಟ್ಟಿಯಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) (Indian Oil Corporation) 28 ಸ್ಥಾನ ಏರಿಕೆಯಾಗಿದ್ದು 142ನೇ ಸ್ಥಾನಕ್ಕೆ ತಲುಪಿದ್ದರೆ, ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) (Oil and Natural Gas Corporation) 16 ಸ್ಥಾನ ಏರಿಕೆ ಕಂಡು 190ನೇ ಸ್ಥಾನಕ್ಕೆ ತಲುಪಿದೆ. ಈ ಪಟ್ಟಿಯಲ್ಲಿ ಎರಡು ಟಾಟಾ ಸಮೂಹ ಸಂಸ್ಥೆಗಳು ಸಹ ಸ್ಥಾನ ಪಡೆದುಕೊಂಡಿದೆ. ಟಾಟಾ ಮೋಟಾರ್ಸ್ 370 ನೇ ಶ್ರೇಯಾಂಕಿತ ಪಡೆದುಕೊಂಡಿದ್ದರೆ ಟಾಟಾ ಸ್ಟೀಲ್ 435 ನೇ ಸ್ಥಾನದಲ್ಲಿದೆ. ಇನ್ನೊಂದೆಡೆ, 437 ನೇ ಸ್ಥಾನದಲ್ಲಿರುವ ರಾಜೇಶ್ ಎಕ್ಸ್‌ಪೋರ್ಟ್ಸ್ ಈ ಪಟ್ಟಿಯಲ್ಲಿರುವ ಇತರ ಖಾಸಗಿ ಭಾರತೀಯ ಕಂಪನಿಗಳಾಗಿದೆ ಎಂದು ತಿಳಿದುಬಂದಿದೆ.
LIC EV Rise; ಎಲ್‌ಐಸಿ ಆಸ್ತಿ .5.41 ಲಕ್ಷ ಕೋಟಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) (State Bank of India) 17 ಸ್ಥಾನ ಮೇಲೇರಿ 236ನೇ ಸ್ಥಾನ ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ 19 ಸ್ಥಾನ ಮೇಲೇರಿ 295 ನೇ ಸ್ಥಾನ ತಲುಪಿದೆ. ಫಾರ್ಚೂನ್ ಗ್ಲೋಬಲ್ 500 ಪಟ್ಟಿಯು ಮಾರ್ಚ್ 31, 2022 ರಂದು ಅಥವಾ ಅದಕ್ಕೂ ಮೊದಲು ಕೊನೆಗೊಂಡ ಆಯಾ ಹಣಕಾಸಿನ ವರ್ಷಗಳಲ್ಲಿ ಕಂಪನಿಗಳ ಒಟ್ಟು ಆದಾಯದ ಪ್ರಕಾರ ಶ್ರೇಣಿಯನ್ನು ನೀಡುತ್ತದೆ.