Income Tax Return: ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ವೇಳೆ ಈ ವಿಷ್ಯ ಗಮನದಲ್ಲಿರಲಿ!

By Suvarna News  |  First Published Jul 17, 2023, 11:57 AM IST

ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಇದೇ ತಿಂಗಳು ಕೊನೆ. ಹಾಗಾಗಿ ಜನರು ತೆರಿಗೆ ಪಾವತಿಗೆ ಸಂಬಂಧಿಸಿದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಐಟಿಆರ್ ಸಲ್ಲಿಕೆ ಸರಳವಾಗಿದ್ರೂ ಕೆಲ ವಿಷ್ಯಗಳನ್ನು ನೀವು ತಿಳಿದಿರಬೇಕು.
 


ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕ ಹತ್ತಿರ ಬರ್ತಿದೆ. ಆದಾಯ ತೆರಿಗೆ ಇಲಾಖೆ, ಕೊನೆಯ ದಿನಾಂಕಕ್ಕಿಂತ ಮೊದಲೇ ಐಟಿಆರ್ ಸಲ್ಲಿಸುವಂತೆ ಕೇಳ್ತಿದೆ. ಐಟಿಆರ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿದೆ. ಒಂದ್ವೇಳೆ ಸರ್ಕಾರ ಕೊನೆಯ ದಿನಾಂಕವನ್ನು ವಿಸ್ತರಿಸದೆ ಹೋದ್ರೆ ನೀವು ದಂಡ ತೆರಬೇಕಾಗುತ್ತದೆ. ಹಾಗಾಗಿ ಆದಷ್ಟು ಬೇಗ ಆದಾಯ ತೆರಿಗೆ ರಿಟರ್ನ್ ಪಾವತಿ ಮಾಡೋದು ಒಳ್ಳೆಯದು.

ಐಟಿಆರ್ (ITR) ಸಲ್ಲಿಕೆ ವಿಧಾನವನ್ನು ಆದಾಯ ತೆರಿಗೆ (Tax) ಇಲಾಖೆ ಸರಳಗೊಳಿಸಿದೆ. ಮೊದಲಿನಂತೆ ಹೆಚ್ಚು ಕಷ್ಟಪಡಬೇಕಾಗಿಲ್ಲ. ನಿಮ್ಮ ಬಳಿ ಎಲ್ಲ ದಾಖಲೆ ಲಭ್ಯವಿದೆ ಎಂದಾದ್ರೆ ನೀವು ಕೆಲವೇ ನಿಮಿಷದಲ್ಲಿ ಐಟಿಆರ್ ಸಲ್ಲಿಕೆ ಮಾಡ್ಬಹುದು. ನೀವೂ ಐಟಿಆರ್ ಸಲ್ಲಿಕೆ ಮಾಡಲು ನೀವು ಮುಂದಾಗಿದ್ದರೆ ನಾಲ್ಕು ವಿಷ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. 

Tap to resize

Latest Videos

10 ಕೋಟಿ ಟ್ಯಾಕ್ಸ್‌ ಕಟ್ತಾರೆ ಬಾಲಿವುಡ್‌ನ ಈ ನಟಿ ಮಣಿಯರು!

ಐಟಿಆರ್ ಸಲ್ಲಿಕೆ ವೇಳೆ ಇದನ್ನು ಗಮನಿಸಿ :

ತೆರಿಗೆ ಪದ್ಧತಿ ಆಯ್ಕೆ ಮಾಡಿ : ಐಟಿಆರ್ ಸಲ್ಲಿಸುವಾಗ ಈ ಬಾರಿ ಹೊಸ ತೆರಿಗೆ ಪದ್ಧತಿಯನ್ನು ಡೀಫಾಲ್ಟ್ (Default) ಆಗಿ ಇರಿಸಲಾಗಿದೆ ಎಂಬುದನ್ನು ನೆನಪಿನಲ್ಲಿಡಿ. ಹಳೆಯ ತೆರಿಗೆ ಪದ್ಧತಿಯಲ್ಲೇ ನೀವು ಐಟಿಆರ್ ಸಲ್ಲಿಸಲು ಬಯಸಿದರೆ ಅದನ್ನು ನೀವೇ ಪರಿವರ್ತಿಸಬೇಕಾಗುತ್ತದೆ. ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ಬಹಳ ಸೀಮಿತ ಆಯ್ಕೆಗಳಿವೆ.  7 ಲಕ್ಷದವರೆಗೆ ವಾರ್ಷಿಕ ಆದಾಯ ಪಡೆಯುವ ಜನರು ತೆರಿಕೆಯಿಂದ ಮುಕ್ತಿ ಪಡೆದಿದ್ದಾರೆ. ಇದು ಹೊಸ ತೆರಿಗೆ ಪದ್ಧತಿಗೆ ಅನ್ವಯವಾಗಲಿದೆ. ಆದ್ರೆ ಹಳೆ ತೆರಿಗೆ ಪದ್ಧತಿಯಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಲಾಗಿಲ್ಲ.

ಫಾರ್ಮ್ 16 ಅಥವಾ ಫಾರ್ಮ್ 16 ಎ ನಲ್ಲಿ ಸಿಗುತ್ತೆ ಮಾಹಿತಿ : ಉದ್ಯೋಗದಲ್ಲಿರುವ ಜನರು, ಪ್ರತಿ ತಿಂಗಳು ಸಂಬಳ ಪಡೆಯುವ ಜನರು ಕಚೇರಿಯಿಂದ ಫಾರ್ಮ್ 16 ಅಥವಾ ಫಾರ್ಮ್ 16ಎ ಪಡೆಯಬೇಕು. ಇದ್ರಲ್ಲಿ ನಿಮ್ಮ ಬೇಸಿಕ್ ಸಂಬಳ, ಎಚ್ ಆರ್ ಎ ಸೇರಿದಂತೆ ಅನೇಕ ಮಾಹಿತಿ ಸಿಗುತ್ತದೆ. ಹಾಗೆ ಕೆಲವೊಂದು ತೆರಿಗೆ ವಿನಾಯಿತಿ ನಿಮಗೆ ಲಭ್ಯವಿದೆ.

GPay, Paytm ಮತ್ತು ಇತರ UPI ಅಪ್ಲಿಕೇಶನ್‌ ಬಳಸಿಕೊಂಡು ಕ್ರೆಡಿಟ್ ಕಾರ್ಡ್‌ ಮೂಲಕ ಪೇಮೆಂಟ್‌ ಮಾಡಲು ಹೀಗೆ ಮಾಡಿ..

26ಎಎಸ್ ನಲ್ಲಿ ಟಿಡಿಎಸ್ ವಿವರಗಳು : ನೀವು ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಹೋದರೆ, ನಿಮ್ಮ ದಾಖಲೆಗಳನ್ನು ಪರಿಶೀಲಿಸಬೇಕು. ಅದ್ರಲ್ಲಿ 26ಎಎಸ್ ದಾಖಲೆ ಕೂಡ ಸೇರಿದೆ.  ತೆರಿಗೆದಾರನ ಆದಾಯದಿಂದ ಎಷ್ಟು ತೆರಿಗೆ ಕಟ್ ಆಗುತ್ತದೆ ಎಂಬುದರ ಮಾಹಿತಿ ಲಭ್ಯವಾಗುತ್ತದೆ. ಬೇಸಿಕ್ ತೆರಿಗೆ ಕಡಿತ, ನಿಯಮಿತ ತೆರಿಗೆ, ಮರುಪಾವತಿ ಮುಂತಾದ ಮಾಹಿತಿಯನ್ನು ನೀವು ಇದ್ರಲ್ಲಿ ಪಡೆಬಹುದಾಗಿದೆ. ಆದ್ರೆ ಅನೇಕ ಬಾರಿ 26ಎಎಸ್ ನಲ್ಲಿಯೂ ಕೆಲ ತಪ್ಪುಗಳಿರುತ್ತವೆ. ಹಾಗಾಗಿ ಅದನ್ನು ನೀವು ಸರಿಯಾಗಿ ಪರಿಶೀಲಿಸಬೇಕು.

ಬಂಡವಾಳ ಲಾಭದ ಮಾಹಿತಿ : ನೀವು ಷೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದರೆ, ಬ್ರೋಕರ್ ಮತ್ತು ಮ್ಯೂಚುವಲ್ ಫಂಡ್‌ಗಳಿಂದ ನಿಮಗೆ ಎಷ್ಟು ಲಾಭ ಬರ್ತಿದೆ ಎಂಬುದನ್ನು ನೀವು ಹೇಳ್ಬೇಕು. ತೆರಿಗೆ ಉಳಿಸಲು ನೀವು ಎಲ್ಲೆಲ್ಲಿ ಹೂಡಿಕೆ ಮಾಡಿದ್ದೀರೋ ಅದೆಲ್ಲ ಮಾಹಿತಿಯನ್ನು ನೀಡಬೇಕಾಗುತ್ತದೆ. 

ಎಐಎಸ್ ನಲ್ಲಿ ಬರುವ ಆದಾಯ ಹಾಗೂ ಟಿಡಿಎಸ್ : ಒಮ್ಮೆ ನೀವು 26ಎಎಸ್ ನಲ್ಲಿರುವ ಟಿಡಿಎಸ್, ಟಿಸಿಎಸ್ ಅನ್ನು ಪರಿಶೀಲಿಸಿದ ನಂತ್ರ ವಾರ್ಷಿಕ ಮಾಹಿತಿ ಹೇಳಿಕೆಗೆ (AIS) ಹೋಲಿಕೆ ಮಾಡಿ ನೋಡಿ. ಇದ್ರಲ್ಲಿ ಎಲ್ಲ ಸೇವಿಂಗ್ ಖಾತೆಯ ಮಾಹಿತಿ ಇರುತ್ತದೆ. ಆಗ ನಿಮಗೆ ಉಳಿತಾಯ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತಕ್ಕೆ ಅನುಗುಣವಾಗಿ ಐಟಿಆರ್ ಅನ್ನು ಸಲ್ಲಿಸುವ ಅಗತ್ಯವಿದೆಯೇ ಇಲ್ಲವೆ ಎಂಬುದು ಗೊತ್ತಾಗುತ್ತದೆ. 

click me!