ಚಿನ್ನ ಈಗ್ಬೇಡ ಚಿನ್ನ, ಬೆಳ್ಳಿ ಕೇಳ್ಬೇಡ ಕಳ್ಳಿ: ಗಗನ ತಲುಪಿದ ದರ!

By Web DeskFirst Published Aug 9, 2019, 7:05 PM IST
Highlights

ಚಿನ್ನ, ಬೆಳ್ಳಿ ದರ ಕೇಳಿದರೆ ತಲೆ ತಿರುಗುವುದು ಗ್ಯಾರಂಟೀ| ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಕಸಿದ ಚಿನ್ನದ ದರ| 38,000 ರೂ. ಗಡಿ ದಾಟಿದ 10 ಗ್ರಾಂ ಚಿನ್ನದ ಬೆಲೆ| ಪ್ರತಿ ಕೆ.ಜಿ.ಗೆ 44,300 ರೂ. ಗೆ ತಲುಪಿದ ಬೆಳ್ಳಿ ಬೆಲೆ| ದೇಶೀಯ ನಕಾರಾತ್ಮಕ ಆರ್ಥಿಕ ಚಟುವಟಿಕೆಗಳ ಪರಿಣಾಮ|

ನವದೆಹಲಿ(ಆ.09): ದೇಶಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಚಿನ್ನ ಮತ್ತು ಬೆಳ್ಳಿ ದರದಲ್ಲಿನ ಏರಿಕೆ ಹಬ್ಬದ ಸಂಭ್ರವನ್ನು ತುಸು ಕಸಿದುಕೊಂಡಿದೆ.

ಬಾರತೀಯ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇದೇ ಮೊದಲ ಬಾರಿಗೆ 38,000 ರೂ. ಗಡಿ ದಾಟಿದೆ. ಇಂದು 550 ರೂ. ದರ ಏರಿಕೆ ಕಂಡ ಚಿನ್ನದ ಬೆಲೆ,  10 ಗ್ರಾಂಗೆ 38,470 ರೂ.ಗೆ ತಲುಪಿದೆ. 

ಆರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ  1,500 ಯುಎಸ್ ಡಾಲರ್ ಗಡಿ ದಾಟಿದೆ. ಅದರಂತೆ ಒಂದು ಕೆಜಿ ಬೆಳ್ಳಿ ಬೆಲೆ 630 ರೂ.ನಷ್ಟು ಏರಿಕೆಯಾಗಿ,  ಪ್ರತಿ ಕೆ.ಜಿ.ಗೆ 44,300 ರೂ. ಗೆ ತಲುಪಿದೆ. 

ಅಮೆರಿಕ-ಚೀನಾದೊಂದಿಗಿನ ವ್ಯಾಪಾರದಲ್ಲಿನ ಉದ್ವಿಗ್ನತೆ ಹಾಗೂ ದೇಶೀಯ ನಕಾರಾತ್ಮಕ ಆರ್ಥಿಕ ಚಟುವಟಿಕೆಗಳ ಪರಿಣಾಮವಾಗಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಏರಿಕೆ ಕಂಡು ಬಂದಿದೆ.

click me!