ವಿದೇಶಿ ವಿನಿಮಯ ಕುಸಿತ: ಇನ್ಮೇಲೆ ಕಾಣಿಸಲ್ಲ ಚಿನ್ನದ ಕುಣಿತ!

Published : Oct 06, 2018, 03:01 PM ISTUpdated : Oct 06, 2018, 03:04 PM IST
ವಿದೇಶಿ ವಿನಿಮಯ ಕುಸಿತ: ಇನ್ಮೇಲೆ ಕಾಣಿಸಲ್ಲ ಚಿನ್ನದ ಕುಣಿತ!

ಸಾರಾಂಶ

ಭಾರತದ ವಿದೇಶಿ ವಿನಿಮಯ ಮೀಸಲು ಕುಸಿತ! ಆರ್‌ಬಿಐ ಬಿಡುಗಡೆ ಮಾಡಿರುವ ಅಂಕಿ ಅಂಶ! 20.34 ಬಿಲಿಯನ್ ಡಾಲರ್‌ಗೆ ಕುಸಿದ ಚಿನ್ನದ ಮೀಸಲು

ನವದೆಹಲಿ(ಅ.6): ಭಾರತದ ವಿದೇಶಿ ವಿನಿಮಯ ಮೀಸಲು ಸೆಪ್ಟೆಂಬರ್ ತಿಂಗಳಾಂತ್ಯಕ್ಕೆ 1.26 ಬಿಲಿಯನ್ ಡಾಲರ್ ಕುಸಿತ ಕಂಡಿದೆ. 

ಆರ್‌ಬಿಐ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಒಟ್ಟಾರೆ ವಿದೇಶಿ ವಿನಿಮಯ ಮೀಸಲು 401.79 ಬಿಲಿಯನ್ ಡಾಲರ್‌ನಿಂದ $400.52 ಬಿಲಿಯನ್ ಗೆ ಕುಸಿದಿದೆ.

ಫಾರಿನ್ ಕರೆನ್ಸಿ ಅಸೆಟ್ಸ್(ಎಫ್‌ಸಿಎ) ಚಿನ್ನದ ಮೀಸಲು, ವಿಶೇಷ ಹಿಂತೆಗೆತ ಅಧಿಕಾರ (ಎಸ್‌ಡಿಆರ್ ) ಹಾಗೂ ಐಎಂಎಫ್ನಲ್ಲಿ ಆರ್‌ಬಿಐ ನ ಸ್ಥಿತಿ ಎಲ್ಲವೂ ವಿದೇಶಿ ವಿನಿಮಯವನ್ನು ನಿರ್ಧರಿಸುವ ಅಂಶಗಳಾಗಿವೆ.

ಇದೇ ವೇಳೆ ದೇಶದ ಚಿನ್ನದ ಮೀಸಲು ಸಹ ಇಳಿಕೆಯಾಗಿದ್ದು, 70.7 ಮಿಲಿಯನ್ ಡಾಲರ್ ಇಳಿಕೆಯಾಗಿದ್ದು, 20.34 ಬಿಲಿಯನ್ ಡಾಲರ್‌ಗೆ ಕುಸಿದಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಒಂದೇ ತಿಂಗಳಲ್ಲಿ ಲಕ್ಷ ಸಂಬಳದ ಕೆಲಸದಿಂದ ವಜಾಗೊಂಡ ಆಘಾತ, ತಿಂಗಳಲ್ಲಿ 6 ಆ್ಯಪ್ ಮಾಡಿ ಪುಟಿದೆದ್ದ 21ರ ಐಐಟಿ ಯುವಕ!
ಅಡೋಬ್‌ನ ಮುಂದಿನ ಸಿಇಒ ಆಗಲಿರುವ ಬೆಂಗಳೂರಿನ ಬಸವನಗುಡಿಯ ಅನಿಲ್‌