ಫೆರಾರಿ ವೇಗದಲ್ಲಿ ಆದಾಯ ಹೆಚ್ಚಿಸಿಕೊಂಡ ಅದಾನಿ, ಒಂದೇ ದಿನ 3500 ಕೋಟಿ ಸಂಪತ್ತು ಹೆಚ್ಚಳ!

By Santosh NaikFirst Published Feb 9, 2023, 11:55 AM IST
Highlights

ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್‌ ರಿಸರ್ಚ್‌ನ ವರದಿಯಿಂದ ಕಂಪನಿಯ ಷೇರುಗಳಲ್ಲಿ ದೊಡ್ಡ ಮಟ್ಟದ ಮುಸಿದ ಕಂಡಿದ್ದ ಗೌತಮ್‌ ಅದಾನಿ, ಈಗ ಅದರಿಂದ ಚೇತರಿಕೆ ಕಾಣುವ ಹಂತದಲ್ಲಿದ್ದಾರೆ. ಒಂದೇ ದಿನ ಗರಿಷ್ಠ ಸಂಪತ್ತು ಗಳಿಸಿದ ಫೋರ್ಬ್ಸ್‌ ಪಟ್ಟಿಯಲ್ಲಿ ಅದಾನಿ ಹೊಸ ದಾಖಲೆಯನ್ನೇ ನಿರ್ಮಾಣ ಮಾಡಿದ್ದಾರೆ.

ನವದೆಹಲಿ (ಫೆ.9): ಅದಾನಿ ಗ್ರೂಪ್‌ನಲ್ಲಿ ಆಗಿರುವ ಅವ್ಯವಹಾರ ಹಾಗೂ ಷೇರು ಬೆಲೆಯನ್ನು ಏರಿಸಲು ಮಾಡಿರುವ ತಂತ್ರಗಳ ಬಗ್ಗೆ ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್‌ ವಿಸ್ತ್ರತ ವರದಿಯನ್ನು ಕಳೆದ ತಿಂಗಳು ಪ್ರಕಟಿಸಿತ್ತು. ಅದಾದ ಬಳಿಕ ಭಾರತದ ಷೇರು ಮಾರುಕಟ್ಟೆಯಲ್ಲಿ ಅದಾನಿ ಕಂಪನಿಯ ಷೇರುಗಳು ಹೇಳಹೆಸರಿಲ್ಲದಂತೆ ನೆಲಕಚ್ಚಿದ್ದವು. ಗೌತಮ್‌ ಅದಾನಿ ಸಂಪತ್ತಿನ ಮೇಲೂ ಇದು ದೊಡ್ಡ ಪರಿಣಾಮ ಬೀರಿದ್ದರಿಂದ ಬ್ಲೂಮ್‌ಬರ್ಗ್‌ ಬಿಲಿಯನೇರ್‌ ಇಂಡೆಕ್ಸ್‌ನ ಅಗ್ರ 20 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದಿದ್ದರು. ಇಡೀ ಕಂಪನಿಯ ಷೇರುಗಳು ಇಳಿದಿದ್ದರಿಮ 100 ಬಿಲಿಯನ್‌ ಅಮೆರಿಕನ್‌ ಡಾಲರ್‌ಗೂ ಹೆಚ್ಚಿನ ಮೊತ್ತದ ನಷ್ಟವನ್ನು ಕಂಪನಿ ಕಂಡಿತ್ತು. ಬರೀ 10 ದಿನಗಳಲ್ಲಿಯೇ ಅದಾನಿ ಸಾಮ್ರಾಜ್ಯ ಕುಸಿದು ಹೋಗುವ ಹಂತಕ್ಕೆ ಬಂದಿತ್ತು. 2023ರ ಆರಂಭದ ಕೆಲವು ವಾರಗಳಲ್ಲಿ ಅದಾನಿ ಸಂಪತ್ತು 130 ಬಿಲಿಯನ್‌ ಅಮೆರಿಕನ್‌ ಡಾಲರ್‌ ಆಗಿದ್ದರೆ, ಹಿಂಡೆನ್‌ಬರ್ಗ್‌ ವರದಿ ಬಳಿಕ 10 ದಿನಗಳಲ್ಲಿಯೇ ಅವರ ಸಂಪತ್ತು 58 ಬಿಲಿಯನ್‌ ಡಾಲರ್‌ಗೆ ಕುಸಿದಿತ್ತು. ಬ್ಲೂಮ್‌ಬರ್ಗ್‌ ಮಾತ್ರವಲ್ಲ ಫೋರ್ಬ್ಸ್‌ ರಿಯಲ್‌ ಟೈಮ್‌ ಬಿಲಿಯನೇರ್‌ ಪಟ್ಟಿಯಲ್ಲೂ ಅದಾನಿ 2ನೇ ಸ್ಥಾನದಿಂದ 22ನೇ ಸ್ಥಾನಕ್ಕೆ ಕುಸಿದಿದ್ದರು. ಆದರೆ, ಈಗ ಅದಾನಿ ತಿರುಗೇಟು ನೀಡಲು ಸಜ್ಜಾಗಿದ್ದಾರೆ. 



ತಮ್ಮ ಮೇಲಿನ ಆರೋಪಗಳಿಗೆ ಅದಾನಿ ಕೆಲಸದ ಮೂಲಕವೇ ಉತ್ತರ ನೀಡುತ್ತಿದ್ದು, ಶತಕೋಟ್ಯಧಿಪತಿಗಳ ಪಟ್ಟಿಯಲ್ಲಿ ಮತ್ತೆ ಪ್ರಗತಿ ಕಾಣಲು ಆರಂಭಿಸಿದ್ದಾರೆ. ಬುಧವಾರ ಅವರು ಫೋರ್ಬ್ಸ್‌ ಬಿಲಿಯನೇರ್‌ ಪಟ್ಟಿಯಲ್ಲಿ ಗರಿಷ್ಠ ಆದಾಯ ಸಂಪಾದನೆ ಮಾಡಿದ ವ್ಯಕ್ತಿಯಾಗಿದ್ದಾರೆ. ಅದಲ್ಲದೆ, ಫೋರ್ಬ್ಸ್‌ ಬಿಲಿಯನೇರ್‌ ಪಟ್ಟಿಯಲ್ಲಿ ಒಂದೇ ದಿನ ಇಷ್ಟು ಪ್ರಮಾಣದ ಸಂಪತ್ತು ಗಳಿಕೆ ಮಾಡಿದ ಮೊದಲ ವ್ಯಕ್ತಿ ಎನಿಸಿದ್ದಾರೆ.

ಫೋರ್ಬ್ಸ್‌ ವಿನ್ನರ್‌ ಲಿಸ್ಟ್‌ನಲ್ಲಿ ಅಗ್ರಸ್ಥಾನ: ಬುಧವಾರದ ಫೋರ್ಬ್ಸ್‌ ವಿನ್ನರ್‌ ಲಿಸ್ಟ್‌ನಲ್ಲಿ ಗೌತಮ್‌ ಅದಾನಿ ಅಗ್ರಸ್ಥಾನ ಸಂಪಾದಿಸ್ಸಾರೆ. ಫೋರ್ಬ್ಸ್‌ ರಿಯಲ್‌ ಟೈಮ್‌ ಬಿಲಿಯನೇರ್‌ (Forbes Real time billionaires Index) ಇಂಡೆಕ್ಸ್‌, ಪ್ರತಿ ದಿನ ವಿಶ್ವದ ಶ್ರೀಮಂತರು ಎಷ್ಟು ಸಂಪತ್ತು ಗಳಿಸಿದ್ದಾರೆ ಎನ್ನುವ ಆಧಾರದಲ್ಲಿ ಪಟ್ಟಿಯನ್ನು ಅಪ್‌ಡೇಟ್‌ ಮಾಡುತ್ತದೆ. ಫೆ.8ರಂದು ಗೌತಮ್‌ ಅದಾನಿ ವಿಶ್ವದಲ್ಲಿಯೇ ಗರಿಷ್ಠ ಆದಾಯ ಸಂಪಾದನೆ ಮಾಡಿದ ವ್ಯಕ್ತಿ ಎನಿಸಿದ್ದಾರೆ. ಒಂದೇ ದಿನದಲ್ಲಿ ವ್ಯಕ್ತಿಯೊಬ್ಬ ಇಷ್ಟು ಪ್ರಮಾಣದ ಸಂಪತ್ತು ಗಳಿಸಿರುವುದು ಕೂಡ ದಾಖಲಾಗಿದೆ.

ಮುಳುಗಿಯೇ ಬಿಡುತ್ತಾ ಅದಾನಿ ಸಾಮ್ರಾಜ್ಯ..? ಅದಾನಿ ಷೇರಿನಲ್ಲಿರೋ ಎಲ್ಐಸಿ ಹಣ ಎಷ್ಟು ಸೇಫ್?

ಬುಧವಾರ ಒಂದೇ ದಿನ ಗೌತಮ್‌ ಅದಾನಿ (gautam adani) ತಮ್ಮ ಸಂಪತ್ತಿಗೆ 4.3 ಬಿಲಿಯನ್‌ ಅಮೆರಿಕನ್‌ ಡಾಲರ್‌ ಸೇರಿಸಿದ್ದಾರೆ. ಅಂದರೆ ಬರೋಬ್ಬರಿ 3553 ಕೋಟಿ ರೂಪಾಯಿ ಸಂಪತ್ತು ಏರಿಕೆಯಾಗಿದೆ. ಇದರಿಂದಾಗಿ ಅವರ ನಿವ್ವಳ ಸಂಪತ್ತು 64.9 ಬಿಲಿಯನ್‌ ಅಮೆರಿಕನ್‌ ಡಾಲರ್‌ಗೆ ಏರಿದೆ.ಅದಾನಿ ಬಿಟ್ಟರೆ, 2ನೇ ಸ್ಥಾನದಲ್ಲಿ ಎಲಾನ್‌ ಮಸ್ಕ್‌ ಇದ್ದಾರೆ.  ಕ್ಲಾಸ್-ಮೈಕೆಲ್ ಕುಹೆನೆ ಮೂರನೇ ಸ್ಥಾನದಲ್ಲಿಯೇ ಉಳಿದುಕೊಂಡಿದ್ದಾರೆ. ಅವರ ಸಂಪತ್ತು ಬುಧವಾರ ಒಂದೇ ದಿನ 1.9 ಬಿಲಿಯನ್‌ ಅಮೆರಿಕನ್‌ ಡಾಲರ್‌ ಏರಿಕೆಯಾಗಿದೆ.

ಅದಾನಿ ಗ್ರೂಪ್‌ ವಿರುದ್ಧ ಜೆಪಿಸಿ ತನಿಖೆಗೆ ಆಗ್ರಹಿಸಿ ಫೆ.6ಕ್ಕೆ ಕಾಂಗ್ರೆಸ್‌ ದೇಶವ್ಯಾಪಿ ಪ್ರತಿಭಟನೆ!

ನಾಲ್ಕನೇ ಸ್ಥಾನದಲ್ಲಿ ಮುಕೇಶ್‌ ಅಂಬಾನಿ, ನಷ್ಟ ಕಂಡ ಲ್ಯಾರಿ ಪೇಜ್‌: ಇನ್ನು ರಿಲಯನ್ಸ್‌ ಇಂಡಸ್ಟ್ರೀಸ್‌ನ ಚೇರ್ಮನ್‌ ಮುಕೇಶ್‌ ಅಂಬಾನಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರ ಸಂಪತ್ತು ಒಂದೇ ದಿನ 1.6 ಬಿಲಿಯನ್‌ ಡಾಲರ್‌ ಏರಿಕೆಯಾಗಿದೆ. ಫೋರ್ಬ್ಸ್‌ ರಿಯಲ್‌ ಟೈಮ್‌ ಬಿಲಿಯನೇರ್ಸ್‌ ಪಟ್ಟಿಯ ಪ್ರಕಾರ, ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ನ ಮಾಲೀಕ ಲ್ಯಾರಿ ಪೇಜ್‌ ಗರಿಷ್ಠ ಮೊತ್ತದ ಸಂಪತ್ತು ಕಳೆದುಕೊಂಡಿದ್ದಾರೆ. ಒಂದೇ ದಿನ ಅವರ ಸಂಪತ್ತಿನಲ್ಲಿ 6.4 ಬಿಲಿಯನ್‌ ಅಮೆರಿಕನ್‌ ಡಾಲರ್‌ ನಷ್ಟ ಕಂಡಿದ್ದಾರೆ.

click me!