ಮೊಟ್ಟಮೊದಲ ಬಾರಿಗೆ ಅದಾನಿ ಗ್ರೂಪ್‌ ಕಂಪನಿಯ ಶೇ. 26ರಷ್ಟು ಪಾಲು ಖರೀದಿ ಮಾಡಿದ ಮುಖೇಶ್‌ ಅಂಬಾನಿ!

By Santosh NaikFirst Published Mar 28, 2024, 8:52 PM IST
Highlights

ಬ್ಯುಸಿನೆಸ್‌ನಲ್ಲಿ ಎದುರಾಳಿಗಳೆಂದೇ ಬಿಂಬಿತರಾಗಿದ್ದ ಗೌತಮ್‌ ಅದಾನಿ ಹಾಗೂ ಮುಖೇಶ್‌ ಅಂಬಾನಿ ನಡುವೆ ವ್ಯವಹಾರ ಕುದುರಿದೆ. ಅದಾನಿ ಪವರ್‌ ಪ್ರಾಜೆಕ್ಟ್‌ನ ಕಂಪನಿಯಲ್ಲಿ ಮುಖೇಶ್ ಅಂಬಾನಿ ನೇತೃತ್ವದ  ರಿಲಯನ್ಸ್ ಶೇ. 26ರಷ್ಟು ಪಾಲು ಖರೀದಿ ಮಾಡಿದೆ.

ನವದೆಹಲಿ (ಮಾ.28): ದೇಶದ ಅಗ್ರ ಕೋಟ್ಯಧಿಪತಿಗಳಾದ ಮುಖೇಶ್‌ ಅಂಬಾನಿ ಹಾಗೂ ಗೌತಮ್‌ ಅದಾನಿ ನಡುವೆ ಮೊಟ್ಟಮೊದಲ ವ್ಯವಹಾರ ಕುದುರಿದೆ. ಮುಖೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌, ಗೌತಮ್‌ ಅದಾನಿ ಅವರ ಮಧ್ಯಪ್ರದೇಶ ಪವರ್‌ ಪ್ರಾಜೆಕ್ಟ್‌ನಲ್ಲಿ ಶೇ. 26ರಷ್ಟು ಪಾಲು ಖರೀದಿ ಮಾಡಿದೆ. ಅದರೊಂದಿಗೆ ವಿದ್ಯುತ್‌ ಸ್ಥಾವರಗಳ 500 ಮೆಗಾವ್ಯಾಟ್ ವಿದ್ಯುತ್ ಅನ್ನು ಕ್ಯಾಪ್ಟಿವ್ ಬಳಕೆಗಾಗಿ ಬಳಸಲು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಅದಾನಿ ಪವರ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಮಹಾನ್ ಎನರ್ಜೆನ್ ಲಿಮಿಟೆಡ್‌ನಲ್ಲಿ ರಿಲಯನ್ಸ್ 5 ಕೋಟಿ ಇಕ್ವಿಟಿ ಷೇರುಗಳನ್ನು ತೆಗೆದುಕೊಳ್ಳಲಿದೆ. ಈ ಷೇರಿನ ಮುಖಬೆಲೆಯ 10 ರೂ. (50 ಕೋಟಿ ರೂ.) ಮತ್ತು ಕ್ಯಾಪ್ಟಿವ್ ಬಳಕೆಗಾಗಿ 500 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯವನ್ನು ಬಳಸುತ್ತದೆ ಎಂದು ಎರಡು ಸಂಸ್ಥೆಗಳು ಸಲ್ಲಿಕೆ ಮಾಡಿರುವ ಪ್ರತ್ಯೇಕ ಸ್ಟಾಕ್‌ ಎಕ್ಸ್‌ಚೇಂಜ್‌ ಫೈಲಿಂಗ್‌ನಲ್ಲಿ ತಿಳಿಸಿದೆ.

ಗುಜರಾತ್‌ ಮೂಲದ ಇಬ್ಬರು ಉದ್ಯಮಿಗಳನ್ನು ಸಾಮಾನ್ಯವಾಗಿ ಮಾಧ್ಯಮಗಳು ವಿರೋಧಿಗಳೇ ಎಂದೇ ಬಣ್ಣಿಸುತ್ತಿದೆ. ಆದರೆ, ಇದಕ್ಕೆ ಅವರ ವ್ಯವಹಾರಗಳು ಕಾರಣವಲ್ಲ. ಏಷ್ಯಾದ ಅಗ್ರ ಶ್ರೀಮಂತ ಎನಿಸಿಕೊಳ್ಳುವ ಪಟ್ಟಿಯಲ್ಲಿ ಗೌತಮ್‌ ಅದಾನಿ ಹಾಗೂ ಮುಖೇಶ್‌ ಅಂಬಾನಿ ನಡುವೆ ಹಾವು ಏಣಿ ಆಟ ಆರಂಭವಾಗಿ ವರ್ಷಗಳೇ ಕಳೆದಿವೆ.

ಮುಖೇಶ್‌ ಅಂಬಾನಿ ತಮ್ಮ ವ್ಯಾಪಾರ ವಹಿವಾಟನ್ನು ರಿಟೇಲ್‌ ವ್ಯಾಪಾರ, ದೂರಸಂಪರ್ಕ, ತೈಲ ಹಾಗೂ ಅನಿಲ ವಿಭಾಗಕ್ಕೆ ವ್ಯಾಪಿಸಿದ್ದರೆ, ಗೌತಮ್‌ ಅದಾನಿಯ ವ್ಯವಹಾರಗಳು ಹೆಚ್ಚಾಗಿ ಬಂದರುಗಳು, ವಿಮಾನ ನಿಲಗ್ದಾಣ, ಕಲ್ಲಿದ್ದಲು, ಗಣಿಗಾರಿಕೆಯ ಮೂಲಸೌಕರ್ಯಗಳತ್ತ ಗಮನಹರಿಸಿವೆ. ಕ್ಲೀನ್‌ ಎನರ್ಜಿ ವಿಚಾರದಲ್ಲಿ ಮಾತ್ರವೇ ಇವರಿಬ್ಬರ ನಡುವೆ ಪೈಪೋಟಿ ಇದೆ. ಅದರ ಹೊರತಾಗಿ ಇಬ್ಬರ ಉದ್ಯಮಗಳು ಸಂಪೂರ್ಣ ವಿರುದ್ಧವಾಗಿದೆ.

ಅದಾನಿ 2030 ರ ವೇಳೆಗೆ ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದಕರಾಗಲು ಬಯಸಿದ್ದರೆ, ರಿಲಯನ್ಸ್ ಗುಜರಾತ್‌ನ ಜಾಮ್‌ನಗರದಲ್ಲಿ ನಾಲ್ಕು ಗಿಗಾಫ್ಯಾಕ್ಟರಿಗಳನ್ನು ನಿರ್ಮಾಣ ಮಾಡುತ್ತಿದೆ. ಸೌರ ಫಲಕಗಳು, ಬ್ಯಾಟರಿಗಳು, ಹಸಿರು ಹೈಡ್ರೋಜನ್ ಮತ್ತು ಫ್ಯುಲ್‌ ಸೆಲ್‌ಗಳಿಗಾಗಿ ಈ ಫ್ಯಾಕ್ಟರಿ ನಿರ್ಮಾಣವಾಗುತ್ತಿದೆ. ಸೌರ ಮಾಡ್ಯೂಲ್‌ಗಳು, ವಿಂಡ್ ಟರ್ಬೈನ್‌ಗಳು ಮತ್ತು ಹೈಡ್ರೋಜನ್ ಎಲೆಕ್ಟ್ರೋಲೈಸರ್‌ಗಳನ್ನು ತಯಾರಿಸಲು ಅದಾನಿ ಮೂರು ಗಿಗಾ ಕಾರ್ಖಾನೆಗಳನ್ನು ನಿರ್ಮಿಸುತ್ತಿದೆ.

ಅದಾನಿಗೆ ಮತ್ತೆ ಸಂಕಷ್ಟ; ಲಂಚ ಆರೋಪದ ತನಿಖೆಗೆ ಮುಂದಾದ ಅಮೆರಿಕ ಸರ್ಕಾರ; ಕುಸಿದ ಷೇರು, ಬಾಂಡ್ ಮೌಲ್ಯ

ಐದನೇ ತಲೆಮಾರಿನ (5G) ಡೇಟಾ ಮತ್ತು ಧ್ವನಿ ಸೇವೆಗಳನ್ನು ಸಾಗಿಸುವ ಸಾಮರ್ಥ್ಯವಿರುವ ಸ್ಪೆಕ್ಟ್ರಮ್ ಅಥವಾ ಏರ್‌ವೇವ್‌ಗಳ ಹರಾಜಿನಲ್ಲಿ ಭಾಗವಹಿಸಲು ಅದಾನಿ ಗುಂಪು ಅರ್ಜಿ ಸಲ್ಲಿಸಿದಾಗ ಇಬ್ಬರ ನಡುವೆ ಪೈಪೋಟಿ ಆಗುವ ಸೂಚನೆ ಸಿಕ್ಕಿತ್ಉತ. ಆದೆ, ಅದಾನಿ 26 GHz ಬ್ಯಾಂಡ್‌ನಲ್ಲಿ 400 MHz ಸ್ಪೆಕ್ಟ್ರಮ್ ಅನ್ನು ಖರೀದಿಸಿದರು. ಇದು ಸಾರ್ವಜನಿಕ ಬಳಕೆಯ ನೆಟ್‌ವರ್ಕ್‌ಗಳಿಗೆ ಅಲ್ಲ. ಈ ತಿಂಗಳ ಆರಂಭದಲ್ಲಿ ಜಾಮ್‌ನಗರದಲ್ಲಿ ನಡೆದ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅವರ ವಿವಾಹ ಪೂರ್ವ ಸಂಭ್ರಮಾಚರಣೆಯಲ್ಲಿ ಅದಾನಿ ಕೂಡ ಉಪಸ್ಥಿತರಿದ್ದರು.

ಅಂಬಾನಿ, ಅದಾನಿ, ಟಾಟಾ ಬಿಸಿನೆಸ್‌ಗೆ ತೀವ್ರ ಪೈಪೋಟಿ; ಭಾರತದಲ್ಲಿ ಅತಿ ದೊಡ್ಡ ಬ್ರ್ಯಾಂಡ್‌ನಿಂದ ಡೈಮಂಡ್ ಬಿಸಿನೆಸ್

click me!