ಕೊರೊನಾ ನಂತ್ರ ಎರಡನೇ ಮನೆ ಖರೀದಿ ಕ್ರೇಜ್ ಭಾರತೀಯರಲ್ಲಿ ಹೆಚ್ಚಾಗಿದೆ. ಹೂಡಿಕೆ, ರಜಾ ದಿನಗಳಲ್ಲಿ ವಿಶ್ರಾಂತಿ ಸೇರಿದಂತೆ ನಾನಾ ಕಾರಣಕ್ಕೆ ಜನರು ಎರಡನೇ ಮನೆ ಖರೀದಿ ಮಾಡ್ತಿದ್ದಾರೆ. ಸಾಲ ಮಾಡಿ ಮನೆ ಪಡೆಯುವ ಮುನ್ನ ಕೆಲ ವಿಷ್ಯ ಗಮನದಲ್ಲಿಟ್ಟುಕೊಂಡ್ರೆ ಮುಂದೆ ಟೆನ್ಷನ್ ಕಾಡೋದಿಲ್ಲ.
ಸ್ವಂತಕ್ಕೆ ಒಂದು ಸೂರಿರಬೇಕು ಎನ್ನುವ ಮಾತು ಈಗನ ದಿನಗಳಲ್ಲಿ ಅರ್ಥ ಕಳೆದುಕೊಳ್ತಿದೆ. ಯಾಕೆಂದ್ರೆ ಬಹುತೇಕರು ಒಂದಲ್ಲ ಒಂದಕ್ಕಿಂತ ಹೆಚ್ಚು ಮನೆ ಹೊಂದಿರುತ್ತಾರೆ. ಭಾರತದಲ್ಲಿ ಎರಡನೇ ಮನೆ ಖರೀದಿ ಕ್ರೇಜ್ ಹೆಚ್ಚಾಗ್ತಿದೆ. ಜನರು ರಜಾ ದಿನಗಳಲ್ಲಿ ಆರಾಮವಾಗಿ ಕಳೆಯಲು ಎರಡನೇ ಮನೆ ಖರೀದಿಸುವ ಪ್ಲಾನ್ ಮಾಡ್ತಿದ್ದಾರೆ. ಕೊರೊನಾ ನಂತ್ರ ಈ ಎರಡನೇ ಮನೆ ಖರೀದಿ ಸಂಖ್ಯೆ ಹೆಚ್ಚಾಗಿದೆ ಎಂದು ಅನೇಕ ವರದಿಗಳು ಹೇಳಿವೆ. 2021 ರಲ್ಲಿ ಎರಡನೇ ಮನೆಗಳಿಗೆ ಒಟ್ಟು 1.394 ಬಿಲಿಯನ್ ಡಾಲರ್ ಅಂದ್ರೆ ಸುಮಾರು 10 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಮನೆ ಖರೀದಿ ಯಾರಿಗೆ ಇಷ್ಟವಿರಲ್ಲ ಹೇಳಿ, ಆದ್ರೆ ನೀವು ಎರಡನೇ ಮನೆ ಖರೀದಿ ಮಾಡುವ ವೇಳೆ ಸ್ಥಳ, ಆರ್ಥಿಕ ಸ್ಥಿತಿ, ಕಾನೂನು, ತೆರಿಗೆ ಸೇರಿದಂತೆ ಅನೇಕ ವಿಷ್ಯಗಳ ಬಗ್ಗೆ ನೀವು ಗಮನ ಹರಿಸಬೇಕು. ನಾವಿಂದು ಎರಡನೇ ಮನೆ ಖರೀದಿ ವೇಳೆ ನೀವು ಯಾವೆಲ್ಲ ವಿಷ್ಯ ತಲೆಯಲ್ಲಿಟ್ಟುಕೊಳ್ಬೇಕು ಎಂಬುದನ್ನು ಹೇಳ್ತೇವೆ.
ಎರಡನೇ ಮನೆ (House) ಖರೀದಿ ವೇಳೆ ಈ ವಿಷ್ಯ ಗಮನಿಸಿ : ಎರಡನೇ ಮನೆ ಖರೀದಿ ಕೆಟ್ಟ ನಿರ್ಧಾರವಲ್ಲ. ಇದು ಹೂಡಿಕೆ (Investment) ಯನ್ನು ಆಕರ್ಷಿಸುತ್ತದೆ. ರಿಯಲ್ ಎಸ್ಟೇಟ್ ಪೋರ್ಟ್ಫೋಲಿಯೊವನ್ನು ವೈವಿಧ್ಯಗೊಳಿಸುತ್ತದೆ. ನಿಮ್ಮ ವೈಯಕ್ತಿಕ ಗುರಿ ತಲುಪಲು ಇದು ಸಹಾಯ ಮಾಡುತ್ತದೆ. ಬಾಡಿಗೆಯಿಂದ ನೀವು ಆದಾಯ ಹೆಚ್ಚಿಸಿಕೊಳ್ಳುವ ಅವಕಾಶವೂ ಇಲ್ಲಿದೆ.
ಲಾಭಾಂಶ ಇಳಿಕೆ ಬಗ್ಗೆ ತಲೆಕೆಡಿಸಿಕೊಳ್ಳದೆ ಮತ್ತಷ್ಟು ಆಪ್ ಲೈನ್ ಕೇಂದ್ರಗಳ ಸ್ಥಾಪನೆಗೆ ಮುಂದಾದ ಫಿಸಿಕ್ಸ್ ವಾಲಾ!
ನೀವು ಎರಡನೇ ಮನೆ ಖರೀದಿ ಮಾಡುವ ಮುನ್ನ ಅದನ್ನು ಯಾವ ಉದ್ದೇಶಕ್ಕೆ ಖರೀದಿ ಮಾಡ್ತಿದ್ದೀರಿ ಎಂಬುದನ್ನು ನಿರ್ಧರಿಸಿ. ಬಾಡಿಗೆಗಾಗಿ ನೀಡ್ತಿದ್ದರೆ, ರಜಾ ದಿನಗಳಲ್ಲಿ ಅದನ್ನು ಬಳಸುತ್ತಿದ್ದರೆ ಅಥವಾ ನಿವೃತ್ತಿ ನಂತ್ರದ ಜೀವನಕ್ಕಾಗಿ ಖರೀದಿ ಮಾಡ್ತಿದ್ದರೆ, ಉದ್ದೇಶಕ್ಕೆ ತಕ್ಕಂತೆ ಮನೆಯ ಸ್ಥಳವನ್ನು ನಿರ್ಧರಿಸಿ. ಇದ್ರ ಜೊತೆ ಎಷ್ಟು ಹಣ ಖರ್ಚು ಮಾಡ್ಬೇಕು ಎಂಬುದು ಕೂಡ ನಿಮ್ಮ ಮನೆ ಖರೀದಿ ಉದ್ದೇಶವನ್ನು ಅವಲಂಭಿಸಿರುತ್ತದೆ. ಆಸ್ತಿ ತೆರಿಗೆ, ವಿಮೆ, ವೆಚ್ಚ ಎಲ್ಲವನ್ನೂ ನೀವು ಗಮನಿಸಬೇಕಾಗುತ್ತದೆ.
ಎರಡನೇ ಮನೆ ಖರೀದಿ ವೇಳೆ ನಿಮ್ಮ ಆರ್ಥಿಕ ಸ್ಥಿತಿ ಬಗ್ಗೆ ಪರಿಶೀಲಿಸಿ. ಈಗಾಗಲೇ ನಿಮ್ಮ ಮೈಮೇಲೆ ಬೇರೊಂದು ಸಾಲವಿದ್ರೆ ಮೊದಲು ಅದನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಇಲ್ಲವೆ ಎರಡೂ ಸಾಲವನ್ನು ಮರುಪಾವತಿಸುವ ಸಾಮರ್ಥ್ಯ ನಿಮಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ತಿಂಗಳ ಖರ್ಚನ್ನು ತಿಂಗಳ ಆದಾಯದಿಂದ ಬಾಗಿಸಬೇಕು. ಆಗ ನಿಮಗೆ ಎಷ್ಟು ಖರ್ಚಾಗ್ತಿದೆ, ಎಷ್ಟು ಉಳಿತಾಯವಾಗ್ತಿದೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಗಳಿಕೆ ಮತ್ತು ಸಾಲ ಮರುಪಾವತಿಯ ಅನುಪಾತವು ಶೇಕಡಾ 50 ಕ್ಕಿಂತ ಕಡಿಮೆ ಇರಬೇಕು. ಮನೆ ಖರೀದಿ ವೇಳೆ ಡೌನ್ ಪೇಮೆಂಟ್ ಗೂ ನೀವು ಆದ್ಯತೆ ನೀಡಬೇಕು. ಹೆಚ್ಚಿನ ಪ್ರಮಾಣದಲ್ಲಿ ಡೌನ್ ಪೇಮೆಂಟ್ ಮಾಡಿದ್ರೆ ಮುಂದೆ ಸಾಲದ ಮೊತ್ತ ಕಡಿಮೆ ಆಗುತ್ತದೆ.
ಮನೆ ಸಾಲದ ಜೊತೆ ನಿಮ್ಮ ಉಳಿದ ಖರ್ಚುಗಳ ಬಗ್ಗೆಯೂ ನೀವು ಲೆಕ್ಕ ಹಾಕಬೇಕು. ಹೊಸ ಮನೆ ಖರೀದಿಯಿಂದ ಹೊಸ ಜವಾಬ್ದಾರಿ ಬರುತ್ತದೆ. ಅದನ್ನು ನೀವು ನಿಭಾಯಿಸಬಲ್ಲಿರಾ ಎಂಬುದನ್ನು ಪರಿಶೀಲಿಸಿ. ತುರ್ತು ಪರಿಸ್ಥಿತಿಗೆ ಅಗತ್ಯವಿರುವ ಕಾರಣ ತುರ್ತು ನಿಧಿಯಲ್ಲಿ ಹಣವಿರುವಂತೆ ನೋಡಿಕೊಳ್ಳಿ.
ಶಾರ್ಕ್ ಟ್ಯಾಂಕ್ ಇಂಡಿಯಾ 3 ಜಡ್ಜ್ ಕ್ವಾಲಿಫಿಕೇಶನ್ ಏನು?
ಆಸ್ತಿ ಖರೀದಿ ವೇಳೆ ಕಾನೂನು ನಿಯಮಗಳನ್ನು ಸರಿಯಾಗಿ ತಿಳಿಯಿರಿ. ಮಾರಾಟ ಮಾಡ್ತಿರುವ ವ್ಯಕ್ತಿಯಿಂದ ಆಸ್ತಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಪಡೆಯಿರಿ. ಎರಡನೇ ಮನೆ ಖರೀದಿ ಮುನ್ನ ನೀವು ತೆರಿಗೆಯನ್ನೂ ಪರಿಶೀಲಿಸಬೇಕು. ಈ ಮನೆ ಖರೀದಿಯಿಂದ ನಿಮಗೆ ತೆರಿಗೆಯಲ್ಲಿ ಏನೆಲ್ಲ ಲಾಭವಿದೆ ಎಂಬುದನ್ನು ತಿಳಿದು ನಂತ್ರ ಮನೆ ಖರೀದಿಗೆ ಮುಂದಾಗಿ.