ಹಬ್ಬದ ಸೀಸನ್‌ಗೆ ಬಿಗ್ ಬಿಲಿಯನ್ ಡೇಸ್ ಮಾರಾಟ ಮೇಳ ಘೋಷಿಸಿದ ಫ್ಲಿಪ್‌ಕಾರ್ಟ್!

By Suvarna News  |  First Published Sep 21, 2021, 10:40 PM IST
  • ಹಬ್ಬದ ಪ್ರಯುಕ್ತ ಬಿಗ್ ಬಿಲಿಯನ್ ಡೇಸ್ ಮಾರಾಟ
  • ಅಕ್ಟೋಬರ್ 7, ರಿಂದ ಅಕ್ಟೋಬರ್ 12, 2021 ರವರೆಗೆ ಮಾರಾಟ ಮೇಳ
  • ಈ ಬಾರಿ ಹಲವು ಆಕರ್ಷಕ ಕೊಡುಗೆ

ಬೆಂಗಳೂರು(ಸೆ.21) ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಫ್ಲಿಪ್ ಕಾರ್ಟ್ ದೇಶದ ಹಬ್ಬದ ಸೀಸನ್‌ಗೆ  8 ನೇ ದಿ ಬಿಗ್ ಬಿಲಿಯನ್ ಡೇಸ್ ಘೋಷಿಸಿದೆ.  ಅಕ್ಟೋಬರ್ 7, ರಿಂದ ಅಕ್ಟೋಬರ್ 12, 2021 ರವರೆಗೆ ಬಿಗ್ ಬಿಲಿಯನ್ ಡೇಸ್ ಮಾರಾಟ ನಡೆಯಲಿದೆ. 6 ದಿನಗಳವರೆಗೆ ನಡೆಯಲಿರುವ ಈ ಬಿಗ್ ಬಿಲಿಯನ್ ಡೇಸ್ ನಲ್ಲಿ ಮಿಲಿಯನ್ ಗಟ್ಟಲೆ ಗ್ರಾಹಕರು, ಮಾರಾಟಗಾರರು, ಸಣ್ಣ ವ್ಯಾಪಾರಿಗಳು, ಕುಶಲಕರ್ಮಿಗಳು, ಕಿರಾಣಗಳು, ಬ್ರ್ಯಾಂಡ್ ಗಳು ಮತ್ತು ಇ-ಕಾಮರ್ಸ್ ಪರಿಸರ ವ್ಯವಸ್ಥೆಯ ಪಾಲುದಾರರು ಪಾಲ್ಗೊಳ್ಳಲಿದ್ದಾರೆ. 

3.6 ಬಿಲಿಯನ್‌ ಅಮೆರಿಕನ್ ಡಾಲರ್‌ ಸಂಗ್ರಹಿಸಿ ದಾಖಲೆ ಬರೆದ ಫ್ಲಿಪ್‌ಕಾರ್ಟ್

Tap to resize

Latest Videos

undefined

ಇದೇ ಮೊದಲ ಬಾರಿಗೆ ನಾನ್-ಪ್ಲಸ್ ಗ್ರಾಹಕರು ಫ್ಲಿಪ್ ಕಾರ್ಟ್ ಆ್ಯಪ್ ಮೂಲಕ ಮುಂಚಿತವಾಗಿಯೇ ಉತ್ಪನ್ನಗಳನ್ನು ಬುಕ್ ಮಾಡುವುದರೊಂದಿಗೆ ಗಳಿಸಿದ 50 ಸೂಪರ್ ಕಾಯಿನ್ ಗಳನ್ನು ರಿಡೀಮ್ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಈ ವರ್ಷದ ಬಿಗ್ ಬಿಲಿಯನ್ ಡೇಸ್ ಸ್ವದೇಶಿ ಬ್ರ್ಯಾಂಡ್ ಗಳು ಮತ್ತು ಮಾರಾಟಗಾರರಿಗೆ ಹಲವಾರು ಹೊಸ ಅವಕಾಶಗಳನ್ನು ಕಲ್ಪಿಸುತ್ತಿದೆ. ಇದರ ಮೂಲಕ 2 ಮತ್ತು ನಂತರದ ಶ್ರೇಣಿಯ ನಗರಗಳ ಮಾರಾಟಗಾರರು ಮತ್ತು ಬ್ರ್ಯಾಂಡ್ ಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದರೊಂದಿಗೆ ಗ್ರಾಹಕರೊಂದಿಗೆ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಬಹುದಾಗಿದೆ.

ಕಳೆದ ಒಂದೂವರೆ ವರ್ಷದಲ್ಲಿ ಫ್ಲಿಪ್ ಕಾರ್ಟ್ ಎಂಎಸ್ಎಂಇಗಳ ವ್ಯವಹಾರವನ್ನು ಉತ್ತಮಗೊಳಿಸುವ ಮೂಲಕ ಅವುಗಳನ್ನು ಪುನಶ್ಚೇತನಗೊಳಿಸುವತ್ತ ಗಮನ ಹರಿಸಿದೆ. ಫ್ಲಿಪ್ ಕಾರ್ಟ್ ತನ್ನ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ದೇಶದ ಪ್ರತಿಯೊಂದು ಮೂಲೆಗೂ ಉತ್ಪನ್ನಗಳನ್ನು ತಲುಪಿಸುವ ಕಾರ್ಯದಲ್ಲಿ ತೊಡಗಿದೆ. ಈ ವರ್ಷದ ಟಿಬಿಬಿಡಿ ಸಂದರ್ಭದಲ್ಲಿ ಹೊಸ ಹೊಸ ಉತ್ಪನ್ನಗಳು, ಗೇಮ್ಸ್, ಇಂಟರ್ಯಾಕ್ಟಿವ್ ವಿಡಿಯೋಗಳು, ಲೈವ್ ಸ್ಟ್ರೀಮ್ಸ್ ಮತ್ತು ಕೊಡುಗೆಗಳನ್ನು ಕಾಣಬಹುದಾಗಿದೆ. ಗ್ರಾಹಕರು ಈ ಹಿಂದೆಂದೂ ಕಾಣದಂತಹ ವಿಶೇಷ ಮತ್ತು ಆಕರ್ಷಕವಾದ ಶಾಪಿಂಗ್ ಅನುಭವಗಳನ್ನು ಹೊಂದಬಹುದಾಗಿದೆ.

ಪ್ರತಿ ವರ್ಷ ದಿ ಬಿಗ್ ಬಿಲಿಯನ್ ಡೇಸ್ ಮೂಲಕ ಭಾರತದ ಹಬ್ಬದ ಸೀಸನ್ ಆರಂಭವಾಗುತ್ತದೆ ಮತ್ತು ಪ್ರತಿ ಸಂದರ್ಭದಲ್ಲಿಯೂ ನಾವು ನಮ್ಮ ಎಲ್ಲಾ ಗ್ರಾಹಕರಿಗೆ, ಮಾರಾಟಗಾರರು ಮತ್ತು ಬ್ರ್ಯಾಂಡ್ ಪಾಲುದಾರರಿಗೆ ಸಾಧ್ಯವಿರುವಷ್ಟು ಅತ್ಯುತ್ತಮ ಅನುಭವವನ್ನು ನೀಡುತ್ತಾ ಬಂದಿದ್ದೇವೆ. ಕಳೆದ ಒಂದು ವರ್ಷದಲ್ಲಿ, ನಮ್ಮ ಪರಿಸರ ವ್ಯವಸ್ಥೆಯ ಪಾಲುದಾರರ ಸಹಯೋಗದೊಂದಿಗೆ ಈ ಸವಾಲಿನ ಸಂದರ್ಭದಲ್ಲಿ ಗ್ರಾಹಕರ ಭಾವನೆಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಭಾರತದ ಆರ್ಥಿಕ ಬೆಳವಣಿಗೆಯನ್ನು ಪುನಶ್ಚೇತನಗೊಳಿಸುವ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಿದ್ದೇವೆ ಎಂದು ಫ್ಲಿಪ್ ಕಾರ್ಟ್ ಗ್ರೂಪ್ ನ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಹೇಳಿದರು. 

ಫ್ಲಿಪ್‌ಕಾರ್ಟ್ ಕ್ಯಾಶ್ ಆನ್ ಡೆಲಿವರಿ ಮತ್ತಷ್ಟು ಸುಲಭ; ಫೋನ್‌ಪೇಯಿಂದ QR Code ಸ್ಕ್ಯಾನ್!

ಡಿಸೆಂಬರ್ 2021 ರ ವೇಳೆಗೆ ತನ್ನ ಪ್ಲಾಟ್ ಫಾರ್ಮ್ ನಲ್ಲಿ 4.2 ಲಕ್ಷ ಮಾರಾಟಗಾರರನ್ನು ಹೊಂದುವ ಗುರಿಯನ್ನು ಫ್ಲಿಪ್ ಕಾರ್ಟ್ ಹಾಕಿಕೊಂಡಿದೆ ಮತ್ತು ಈ ನಿಟ್ಟಿನಲ್ಲಿ ತನ್ನ ಮಾರಾಟಗಾರರ ಜಾಲವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಪ್ರಸ್ತುತ ಫ್ಲಿಪ್ ಕಾರ್ಟ್ ಮಾರ್ಕೆಟ್ ಪ್ಲೇಸ್ 3.75 ಲಕ್ಷಕ್ಕೂ ಅಧಿಕ ಮಾರಾಟಗಾರರಿಗೆ ಡಿಜಿಟಲ್ ಕಾಮರ್ಸ್ ಬೆಂಬಲವನ್ನು ನೀಡುತ್ತಿದೆ. ಈಗಾಗಲೇ ಫ್ಲಿಪ್ ಕಾರ್ಟ್ ಕಳೆದ ಕೆಲವು ತಿಂಗಳುಗಳಿಂದ 75,000 ಹೊಸ ಮಾರಾಟಗಾರರನ್ನು ಎಂಎಸ್ಎಂಇಗಳಾಗಿ ತನ್ನ ಪ್ಲಾಟ್ ಫಾರ್ಮ್ ನಲ್ಲಿ ಸೇರಿಸಿಕೊಂಡಿದೆ ಹಾಗೂ ಸಣ್ಣ ವ್ಯಾಪಾರ ಉದ್ಯಮಿಗಳು ಹಬ್ಬದ ಸೀಸನ್ ಗೆ ಮುಂಚಿತವಾಗಿ ಇ-ಕಾಮರ್ಸ್ ಸಾಮರ್ಥ್ಯದಿಂದ ಉತ್ಸುಕರಾಗಿದ್ದಾರೆ. ಆಗ್ರಾ, ಇಂದೋರ್, ಜೈಪುರ, ಪಾಣಿಪತ್, ರಾಜಕೋಟ್, ಸೂರತ್ ಮತ್ತು ಇತರೆ ಇನ್ನೂ ಹಲವಾರು 2 ಮತ್ತು 3 ನೇ ಶ್ರೇಣಿಯ ಮಾರುಕಟ್ಟೆಗಳಿಂದ ಹೊಸ ಮಾರಾಟಗಾರರು ಮತ್ತು ಎಂಎಸ್ಎಂಇಗಳು ಸೇರ್ಪಡೆಗೊಳ್ಳುತ್ತಿವೆ. ಫ್ಲಿಪ್ ಕಾರ್ಟ್ ಮಾರ್ಕೆಟ್ ಪ್ಲೇಸ್ ಪ್ಲಾಟ್ ಫಾರ್ಮ್ ಜನರಲ್ ಮರ್ಚಂಡೈಸ್, ಹೋಂ, ಕಿಚನ್ ಮತ್ತು ಪರ್ಸನಲ್ ಕೇರ್ ನಂತಹ ವಿಭಾಗಗಳ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಈ ಹೊಸ ಮಾರಾಟಗಾರರು ಪ್ರತಿಯೊಬ್ಬರೂ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚುವರಿ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅಲ್ಲದೇ, ಇವರು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವ ವಲಯವಾಗಿ ಇ-ಕಾಮರ್ಸ್ ನ ಸಾಮರ್ಥ್ಯವನ್ನು ತೆರೆಯುವಲ್ಲಿ ಸಮರ್ಥರಾಗಿದ್ದಾರೆ. ಈ ಹೊಸ ಕೊಡುಗೆಗಳ ಮೂಲಕ,  ಶೂನ್ಯ ವೆಚ್ಚದಲ್ಲಿ ತ್ವರಿತವಾಗಿ ಸಾಲ ಸೌಲಭ್ಯವನ್ನು ಪಡೆಯಲಿವೆ. 30 ದಿನಗಳವರೆಗೆ 5 ಲಕ್ಷ ರೂಪಾಯಿ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ಒದಗಿಸಲಾಗುತ್ತಿದೆ. ಇದಲ್ಲದೇ,  ಫ್ಲೆಕ್ಸಿಬಲ್ ಸಾಲ ಮರುಪಾವತಿ ಆಯ್ಕೆಗಳನ್ನು ನೀಡಲಾಗುತ್ತಿದೆ. ಇದು ನಗದು ಅಥವಾ ಆನ್ ಲೈನ್ ವರ್ಗಾವಣೆಯ ಆಯ್ಕೆಯನ್ನು ಹೊಂದಿರುತ್ತದೆ.

ಕೈಗೆಟಗುವ ಸೌಲಭ್ಯಗಳು:
ಆಕ್ಸಿಸ್ ಬ್ಯಾಂಕ್ ಮತ್ತು ICICI ಬ್ಯಾಂಕ್ ಸಹಯೋಗದಲ್ಲಿ ಕ್ರೆಡಿಟ್ & ಡೆಬಿಟ್ ಕಾರ್ಡ್‌ಗಳ ಮೇಲೆ 10% ತಕ್ಷಣದ ರಿಯಾಯಿತಿಗಳನ್ನು Flipkart ನೀಡುತ್ತದೆ. ಜತೆಗೆ, ಪೇಟಿಎಂ ಮೂಲಕ ನಡೆಸುವ UPI ವಹಿವಾಟುಗಳಿಗೆ ವ್ಯಾಲೆಟ್‌ನಲ್ಲಿ ಖಚಿತವಾದ ಕ್ಯಾಶ್‌ಬ್ಯಾಕ್ ಸೌಲಭ್ಯವಿದ್ದು, ಭಾರತದಾದ್ಯಂತ ಇರುವ ಗ್ರಾಹಕರಿಗೆ ಸುಲಭವಾಗಿ ಕೈಗೆಟಕುವಂತೆ ಮಾಡಿದೆ. Flipkart ಗ್ರಾಹಕರು ಈ ವರ್ಷ ಒಳಗೊಳ್ಳುವಿಕೆಯ ಹಾಗೂ ಗ್ರಾಹಕ ಕೇಂದ್ರಿತ ಶಾಪಿಂಗ್ ಅನುಭವವನ್ನು ಹೊಂದಲಿದ್ದಾರೆ. ಅರ್ಹ ಗ್ರಾಹಕರಿಗೆ ‘Flipkart Pay Later’ (Flipkart ಪೇ ಲೇಟರ್) ಮೇಲೆ EMI ಸೌಲಭ್ಯವಿರುವ 70,000 ರೂ.ವರೆಗಿನ ಕ್ರೆಡಿಟ್ ಲೈನ್ ತೆರೆದಿದೆ. ಈ ಮೊತ್ತವನ್ನು ಗ್ರಾಹಕರು ಅನುಕೂಲಕರವಾದ 3, 6, 9 ಹಾಗೂ 12 ತಿಂಗಳ ಮಾಸಿಕ ಕಂತುಗಳಲ್ಲಿ ಪಾವತಿಸಬಹುದು. ಈ ಮೂಲಕ ಹಬ್ಬದ ಋತುವಿಗೆ ಹೆಚ್ಚಿನ ಮೊತ್ತದ ಖರೀದಿ ಸಾಧ್ಯವಾಗುತ್ತದೆ. Flipkart ಬ್ರ್ಯಾಂಡ್ ಮಾರಾಟಗಾರರು ಮತ್ತು ಮಾರಾಟ ಪಾಲುದಾರರಿಂದ ಆಕ್ಸಿಸ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್, HDFC ಬ್ಯಾಂಕ್, ICICI ಬ್ಯಾಂಕ್, SBI ಸೇರಿದಂತೆ 18 ಸಂಸ್ಥೆಗಳ ಮೂಲಕ EMI ಆಯ್ಕೆಗಳನ್ನು ನೀಡುತ್ತಿದೆ.

click me!