ಭೂಮಿಯಾಳದಿಂದ ತೈಲ ತೆಗೆಯುವ ಭಾರತೀಯ ತೈಲ ನಿಗಮದ ಕಾರ್ಯಕ್ಷೇತ್ರಕ್ಕೆ ವಿದ್ಯಾರ್ಥಿಗಳ ಭೇಟಿ!

By Suvarna NewsFirst Published Sep 21, 2021, 7:46 PM IST
Highlights
  • ಭಾರತೀಯ ತೈಲ ನಿಗಮ ಕಂಪನಿಗೆ ವಿದ್ಯಾರ್ಥಿಗಳ ಭೇಟಿ
  • ಭೂಮಿಯಾಳದಿಂದ ತೈಲ ತೆಗೆಯುವ ಬಗೆ ನೋಡಿ ಸಂತಸ ಪಟ್ಟ ವಿದ್ಯಾರ್ಥಿಗಳು
  • ತಳಮಟ್ಟದಲ್ಲಿ ರಂಧ್ರ ಕೊರೆದು, ಅಲ್ಲಿಂದ ತೈಲವನ್ನೆತ್ತುವ ರೀತಿ
     

ನವದೆಹಲಿ(ಸೆ.21): ವಿದ್ಯಾರ್ಥಿಗಳಿಗೆ ಪ್ರಾಯೋಗಿಗ ಅನುಭವಕ್ಕಾಗಿ ಹಲವು ಕಂಪನಿಗಳು, ವಿಜ್ಞಾನ ಕೇಂದ್ರಗಳ ಭೇಟಿ ಸೇರಿದಂತೆ ಹಲವು ಕಾರ್ಯಕ್ರಮಗಳು ಸಾಮಾನ್ಯವಾಗಿದೆ. ಈ ಬಾರಿ ವಿದ್ಯಾರ್ಥಿಗಳಿಗೆ ಭೂಮಿಯಾಳದಿಂದ ತೈಲ ತೆಗೆಯುವ ರೀತಿ ಹಾಗೂ ಅದರ ಕಾರ್ಯಕ್ಷೇತ್ರದ ಕುರಿತು ಹೆಚ್ಚಿನ ಜ್ಞಾನ ಸಂಪಾದಿಸಲು ವಿದ್ಯಾರ್ಥಿಗಳಿಗೆ ವಿಶೇಷ ಅವಕಾಶ ಮಾಡಿಕೊಡಲಾಗಿದೆ. ಇದಕ್ಕಾಗಿ ಭಾರತೀಯ ತೈಲ ನಿಗಮ ಕಾರ್ಯಕ್ಷೇತ್ರಕ್ಕೆ ವಿದ್ಯಾರ್ಥಿಗಳು ಭೇಟಿ ನೀಡಿ ಅನುಭವ ಪಡೆದುಕೊಂಡಿದ್ದಾರೆ. 

ಏ.1ರ ಗಡುವಿಗೆ ಮುನ್ನವೇ ವಿಶ್ವದ ಅತಿ ಸ್ವಚ್ಛ ಪೆಟ್ರೋಲ್‌ ಪೂರೈಕೆ ಆರಂಭ!

ಭಾರತೀಯ ತೈಲ ನಿಗಮವು ಭಾರತೀಯ ಭಾರತೀಯ ಪರಿಶೋಧನೆ ಮತ್ತು ಉತ್ಪಾದನಾ ಕಂಪೆನಿಯಾಗಿದೆ. ಇದು ವಿದ್ಯಾರ್ಥಿಗಳಿಗೆ ಭೂಮಿಯಾಳದಿಂದ ಮೇಲ್ಮಟ್ಟಕ್ಕೆ ತೈಲ ತರುವ ಸಕ್ಕರ್‌ ರಾಡ್‌ಪಂಪ್‌ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಡುಲಿಯಾಜನ್‌ನಲ್ಲಿ ಈ ಸಕ್ಕರ್‌ ರಾಡ್‌ಪಂಪ್‌ ಅಳವಡಿಕೆ ಹಾಗೂ ಕಾರ್ಯನಿರ್ವಹಣೆಯನ್ನು ನೋಡಲು ಅವಕಾಶ ಮಾಡಿಕೊಡಲಾಗುತ್ತಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಈ ವಿಶೇಷ ಭೇಟಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.

ಆಯಿಲ್ ಇಂಡಿಯಾ ನೇಮಕಾತಿ: ಅಧಿಕಾರಿ ಹುದ್ದೆಗಳಿಗೆ ಸೂಪರ್ ಸಂಬಳ

 ಭಾರತೀಯ ತೈಲ ನಿಗಮದ ಉತ್ಪಾದನಾ ಎಂಜಿನಿಯರ್‌ಗಳು, ವಿದ್ಯಾರ್ಥಿಗಳಿಗೆ ಸಕ್ಕರ್‌ ರಾಡ್‌ ಪಂಪ್‌ನ ಕಾರ್ಯನಿರ್ವಹಣೆಯ ಕುರಿತು ವಿವರಿಸಿದರು. ಕೃತಕವಾಗಿ ತೈಲ ಮೇಲೆತ್ತುವ ತಂತ್ರಗಾರಿಕೆಯ ಕುರಿತೂ ವಿದ್ಯಾರ್ಥಿಗಳಿಗೆ ವಿವರಿಸಿದರು. ಭೂಮಿಯ ಅಂತರಾಳದಿಂದ ಮೇಲ್ಮಟ್ಟದಲ್ಲಿರುವ ರಂಧ್ರಕ್ಕೆ ತೈಲವನ್ನು ಎತ್ತುವ, ಸಾಗಣೆಯಾಗುವ ವಿಧಾನವನ್ನು ವಿವರಿಸಿದರು. ಈ ವಿಧಾನವು ಅದೆಷ್ಟು ಸರಳವಾಗಿದೆ ಹಾಗೂ ತಂತ್ರಗಾರಿಕೆಯಿಂದ ಕೂಡಿದೆ ಎಂಬುದು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟರು. ತೀರ ತಳಮಟ್ಟದಲ್ಲಿ ರಂಧ್ರ ಕೊರೆದು, ಅಲ್ಲಿಂದ ತೈಲವನ್ನೆತ್ತಲು ಈ ತಂತ್ರಗಾರಿಕೆಯನ್ನು ಹೇಗೆ ಬಳಸಲಾಗುತ್ತದೆ ಮತ್ತು ವೆಚ್ಚವನ್ನು ತಗ್ಗಿಸುವ ಬಗೆಯನ್ನೂ ವಿವರಿಸಲಾಯಿತು. 

PU ಪಾಸಾದವರಿಗೆ ಆಯಿಲ್ ಇಂಡಿಯಾ ಕಂಪನಿಯಲ್ಲಿ ಕೆಲಸ, ಅಪ್ಲೈ ಮಾಡಿ

ಸಮೀಪದ 25 ವಿದ್ಯಾರ್ಥಿಗಳು  ಸಕ್ಕರ್‌ ರಾಡ್‌ಪಂಪ್‌ ಇದ್ದಲ್ಲಿಗೆ ಭೇಟಿ ನೀಡಿದರು. ರಾಡ್‌ ಪಂಪ್‌ ಅಳವಡಿಕೆ, ಕಾರ್ಯಾನುಷ್ಠಾನ, ಎಂಜಿನಿಯರ್‌ಗಳು ಹಾಗೂ ಕಾರ್ಮಿಕರು ಅಲ್ಲಿ ಕಾರ್ಯ ನಿರ್ವಹಿಸುವ ಬಗೆ ಹಾಗೂ ಹೈಡ್ರೊ ಕಾರ್ಬನ್‌ ಉತ್ಪಾದನಾ ಪ್ರಕ್ರಿಯೆಯನ್ನು ನೇರವಾಗಿ ನೋಡಿ, ವಿಷಯ ತಿಳಿದು ಸಂತಸ ಪಟ್ಟರು

click me!