ಓಲಾದಲ್ಲಿ ಸಚಿನ್ ಭಾರೀ ಹೂಡಿಕೆ: ಎಷ್ಟು ಕೋಟಿ ಎಂದು ತಿಳಿಯಬೇಕೆ?

By Web DeskFirst Published Feb 19, 2019, 6:30 PM IST
Highlights

ಓಲಾದಲ್ಲಿ 650 ಕೋಟಿ ರೂ. ಹೂಡಿಕೆ ಮಾಡಿದ ಸಚಿನ್| ಬೃಹತ್ ಹೂಡಿಕೆಯಿಂದ ಓಲಾಗೆ ಬಂತು ಬಲ| ಫ್ಲಿಪ್‍ಕಾರ್ಟ್ ಸಹ ಸ್ಥಾಪಕ ಸಚಿನ್ ಬನ್ಸಲ್ ಹೂಡಿಕೆ| ಓಲಾ ಸೇವೆಯನ್ನು ಶ್ಲಾಘಿಸಿದ ಸಚಿನ್ ಬನ್ಸಲ್| 

ಕೊಲ್ಕತ್ತಾ(ಫೆ.19): ಮಹತ್ವದ ಬೆಳವಣಿಗೆಯೊಂದರಲ್ಲಿ ಫ್ಲಿಪ್‍ಕಾರ್ಟ್ ಸಹ ಸ್ಥಾಪಕ ಸಚಿನ್ ಬನ್ಸಲ್, ವಿಶ್ವದ ಅತಿದೊಡ್ಡ ಬಾಡಿಗೆ ಕಾರು ಸಂಸ್ಥೆ 'ಓಲಾ'ದಲ್ಲಿ 650 ಕೋಟಿ ರೂ. ಹೂಡಿಕೆ ಮಾಡಲಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಓಲಾ, ಈ ಹೂಡಿಕೆಯು ಓಲಾದ ಜಾಗತಿಕ ನಿಧಿ ಸಂಗ್ರಹದ ಭಾಗವಾಗಿದೆ ಎಂದು ತಿಳಿಸಿದೆ. ಅಲ್ಲದೇ ಈ ಹೂಡಿಕೆ ಬನ್ಸಲ್ ಅವರ ವೈಯಕ್ತಿಕ ಸಾಮರ್ಥ್ಯದ ಪ್ರತೀಕ ಎಂದೂ ಸಂಸ್ಥೆ ತಿಳಿಸಿದೆ.

ಇದೇ ವೇಳೆ ಹೂಡಿಕೆಯ ಕುರಿತು ಮಾತನಾಡಿರುವ ಬನ್ಸಲ್, ‘ಓಲಾ, ಭಾರತದ ಅತ್ಯಂತ ಭರವಸೆಯ ಗ್ರಾಹಕರ ಉದ್ಯಮಗಳಲ್ಲಿ ಒಂದಾಗಿದೆ. ಪ್ರಯಾಣಿಕ ಸಾರಿಗೆ ವ್ಯವಸ್ಥೆಯಲ್ಲಿ ಆಳವಾದ ಪ್ರಭಾವವನ್ನು ಮತ್ತು ಶಾಶ್ವತ ಮೌಲ್ಯವನ್ನು ಸೃಷ್ಟಿಸುತ್ತಿದೆ. ಓಲಾ ಶತಕೋಟಿ ಭಾರತೀಯರ ವಿವಿಧ ಅಗತ್ಯಗಳನ್ನು ಪೂರೈಸುತ್ತಿದ್ದು, ವಿಶ್ವಾಸಾರ್ಹ ಕಂಪೆನಿಯಾಗಿ ಮನೆಮಾತಾಗಿದೆ' ಎಂದು ಹೇಳಿದ್ದಾರೆ.

click me!
Last Updated Feb 19, 2019, 6:30 PM IST
click me!