Breaking: ಜುಲೈ 23ಕ್ಕೆ ಕೇಂದ್ರ ಬಜೆಟ್‌ ಮಂಡನೆ

By Santosh Naik  |  First Published Jul 6, 2024, 4:01 PM IST

ಪ್ರಧಾನಿ ನರೇಂದ್ರ ಮೋದಿ ಅವರ 3.0 ಸರ್ಕಾರದ ಮೊದಲ ಬಜೆಟ್‌ ಜುಲೈ 23 ರಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಜುಲೈ 22 ರಿಂದ ಸಂಸತ್‌ನ ಬಜೆಟ್‌ ಅಧಿವೇಶನ ಆರಂಭವಾಗಲಿದೆ ಎಂದು ಸರ್ಕಾರ ತಿಳಿಸಿದೆ.
 


ನವದೆಹಲಿ (ಜು.6):  ಪ್ರಧಾನಿ ನರೇಂದ್ರ ಮೋದಿ ಅವರ ಮೂರವೇ ಅವಧಿಯ ಸರ್ಕಾರದ ಮೊದಲ ಬಜೆಟ್ ಅಧಿವೇಶನ ಜುಲೈ 22 ರಿಂದ ಆಗಸ್ಟ್ 12 ರವರೆಗೆ ಪ್ರಾರಂಭವಾಗಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಶನಿವಾರ ಘೋಷಿಸಿದ್ದಾರೆ. ಜುಲೈ 23 ರಂದು ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಕೇಂದ್ರ ಬಜೆಟ್‌ ಮಂಡನೆ ದಿನಾಂಕವನ್ನು ಟ್ವಿಟರ್‌ನಲ್ಲಿ ಘೋಷಣೆ ಮಾಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜುಜು, ' ಕೇಂದ್ರ ಸರ್ಕಾರದ ಶಿಫಾರಸಿನ ಬೆನ್ನಲ್ಲಿಯೇ, ರಾಷ್ಟ್ರಪತಿಗಳು 2024ರ ಬಜೆಟರ್‌ ಅಧಿವೇಶನಕ್ಕೆ ಎರಡೂ ಸದನಗಳಿಗೂ ಅನುಮೋದನೆ ನೀಡಿದ್ದಾರೆ. ಜುಲೈ 22 ರಿಂದ ಆಗಸ್ಟ್‌ 12ರವರೆಗೆ ಬಜೆಟ್‌ ಅಧಿವೇಶನ ನಡೆಯಲಿದೆ(ಸಂಸದೀಯ ವ್ಯವಹಾರದ ಅಗತ್ಯತೆಗಳಿಗೆ ಒಳಪಟ್ಟಿರುತ್ತದೆ).” ಎಂದು ಅವರು ಬರೆದಿದ್ದಾರೆ. "2024-25 ನೇ ಸಾಲಿನ ಕೇಂದ್ರ ಬಜೆಟ್ ಅನ್ನು 23 ಜುಲೈ 2024 ರಂದು ಲೋಕಸಭೆಯಲ್ಲಿ ಮಂಡಿಸಲಾಗುವುದು" ಎಂದು ಅವರು ಹೇಳಿದರು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿ 3.0 ಸರ್ಕಾರದ ಪೂರ್ಣ ಬಜೆಟ್ ಮಂಡಿಸಲಿದ್ದಾರೆ. ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಮಧ್ಯಂತರ ಬಜೆಟ್ ಮಂಡನೆ ಮಾಡಲಾಗಿತ್ತು.

ಸತತ ಎರಡನೇ ಅವಧಿಗೆ ಕೇಂದ್ರ ಹಣಕಾಸು ಸಚಿವರಾಗಿ ನೇಮಕಗೊಂಡಿರುವ ಸೀತಾರಾಮನ್, ಸತತ 6 ಬಾರಿ ಮಂಡಿಸಿದ್ದ ಮೊರಾರ್ಜಿ ದೇಸಾಯಿ ಅವರನ್ನು ಹಿಂದಿಕ್ಕಿ ಸತತ ಏಳು ಬಾರಿ ಕೇಂದ್ರ ಬಜೆಟ್ ಮಂಡಿಸಿದ ಮೊದಲಿಗರಾಗಲಿದ್ದಾರೆ.

Tap to resize

Latest Videos

undefined

ಕೇಂದ್ರ ಬಜೆಟ್ 2024 ರ ದಿನಾಂಕಗಳು ಘೋಷಣೆ ಆಗಿರುವ ಕಾರಣ, ಮೋದಿ 3.0 ಸರ್ಕಾರದ ಅಡಿಯಲ್ಲಿ ಹಣಕಾಸು ಸಚಿವರು ತೆರಿಗೆದಾರರಿಗೆ ಕೆಲವು ಪ್ರಯೋಜನಗಳನ್ನು ಘೋಷಿಸಬಹುದು ಎಂಬ ಹೆಚ್ಚಿನ ನಿರೀಕ್ಷೆಗಳು ಮತ್ತು ಊಹಾಪೋಹಗಳಿವೆ. ಆದಾಯ ತೆರಿಗೆಯಲ್ಲಿ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಮಿತಿಯನ್ನು 50 ಸಾವಿರದಿಂದ 1 ಲಕ್ಷಕ್ಕೆ ಏರಿಕೆ ಮಾಡಬಹುದು ಎಂದು ಹೇಳಲಾಗಿದೆ. ಇದು ಆದಾಯ ತೆರಿಗೆಯಲ್ಲಿ ಅತ್ಯಂತ ದೀರ್ಘಾವದಿಯ ಬೇಡಿಕೆಯಾಗಿದೆ ಎಂದೂ ಹಣಕಾಸು ತಜ್ಞರು ನಂಬಿದ್ದಾರೆ.

ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡವರಿಗೆ ಕೇಂದ್ರ ಬಜೆಟ್‌ನಲ್ಲಿ ಆದಾಯ ಮಿತಿ ಏರಿಕೆ?

ಯೂನಿಯನ್ ಬಜೆಟ್‌ನಲ್ಲಿ ಗ್ರಾಮೀಣ ವಸತಿಗಾಗಿ ರಾಜ್ಯ ಸಬ್ಸಿಡಿಗಳನ್ನು ಹೆಚ್ಚಿಸಲು ಕೇಂದ್ರವು ತಯಾರಿ ನಡೆಸುತ್ತಿದೆ, ಅವುಗಳನ್ನು ಕಳೆದ ವರ್ಷದಿಂದ ಶೇಕಡಾ 50 ರಷ್ಟು ಹೆಚ್ಚಿಸಿ US$6.5 ಬಿಲಿಯನ್ ಮೀರುವ ನಿರೀಕ್ಷೆಯಿದೆ ಎಂದು ಇಬ್ಬರು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಮಹಾದಾಖಲೆಗೆ ನಿರ್ಮಲಾ ಸಜ್ಜು, ಜುಲೈ 22ಕ್ಕೆ ಕೇಂದ್ರ ಬಜೆಟ್‌ ಮಂಡನೆ ಸಾಧ್ಯತೆ!

click me!