Personal Finance : ಕೆಲಸ ಕಳೆದುಕೊಂಡಿದ್ದೀರಾ? ಹೀಗೂ ಜೀವನ ನಡೆಸ್ಬಹುದು ಯೋಚಿಸ್ಬೇಡಿ!

By Suvarna News  |  First Published Feb 23, 2023, 12:03 PM IST

ಉದ್ಯೋಗದಲ್ಲಿದ್ದಾಗ ಸಂಬಳಕ್ಕೆ ತಕ್ಕಂತೆ ಖರ್ಚನ್ನು ಹೊಂದಿಸಿಕೊಂಡಿರ್ತೇವೆ. ಆದ್ರೆ ಏಕಾಏಕಿ ಕೆಲಸ ಹೋದ್ರೆ ತಲೆ ಮೇಲೆ ಕಲ್ಲುಬಿದ್ದಂತಾಗುತ್ತದೆ. ಏನು ಮಾಡ್ಬೇಕು ಎಂಬುದು ತಿಳಿಯೋದಿಲ್ಲ. ಇಂಥ ಸಂದರ್ಭದಲ್ಲಿ ಭಯಪಡದೆ ಬುದ್ಧಿವಂತಿಕೆಯಿಂದ ಕೆಲಸ ಮಾಡ್ಬೇಕು.
 


ಆರ್ಥಿಕ ಹಿಂಜರಿತದಿಂದಾಗಿ ಅನೇಕ ಕಂಪನಿಗಳು ಉದ್ಯೋಗಿಗಳನ್ನು ವಜಾ ಮಾಡ್ತಿವೆ. ಸಂಬಳ ನಂಬಿ ಬದುಕುತ್ತಿರುವವರು ಏಕಾ ಏಕಿ ಕೆಲಸ ಕಳೆದುಕೊಂಡಾಗ ಶಾಕ್ ಗೆ ಒಳಗಾಗ್ತಾರೆ. ಉದ್ಯೋಗದ ಅನುಪಸ್ಥಿತಿಯಲ್ಲಿ ಜನರು ಆರ್ಥಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮನೆ ಖರ್ಚನ್ನು ಹೇಗೆ ನಿಭಾಯಿಸಬೇಕು, ಸಾಲ ತೀರಿಸೋದು ಹೇಗೆ, ಪ್ರತಿ ತಿಂಗಳ ಇಎಂಐ ಎಲ್ಲಿಂದ ಕಟ್ಟೋದು, ಹೊಸ ಕೆಲಸ ಸಿಗೋದು ಯಾವಾಗ ಹೀಗೆ ನಾನಾ ಪ್ರಶ್ನೆಗಳು ತಲೆಯಲ್ಲಿ ಓಡ್ತಿರುತ್ತವೆ. ಏನು ಮಾಡ್ಬೇಕೆಂಬುದು ಗೊತ್ತಾಗದೆ ಕೆಲವರ ಡಿಪ್ರೆಶನ್ ಗೆ ಹೋಗ್ತಾರೆ. ನೀವು  ಆರ್ಥಿಕ ಹಿಂಜರಿತದಲ್ಲಿ  ಕೆಲಸವನ್ನು ಕಳೆದುಕೊಂಡಿದ್ದರೆ ಚಿಂತಿಸಬೇಡಿ. ನಾವು ನಿಮಗೊಂದಿಷ್ಟು ಸಲಹೆಗಳನ್ನು ನೀಡ್ತೇವೆ. ಅದನ್ನು ಪಾಲಿಸುವ ಮೂಲಕ ನೀವು ಪ್ರಮುಖ ವೆಚ್ಚಗಳು, ಇಎಂಐ ಮತ್ತು ಕೆಲ ಅಗತ್ಯ ಬಿಲ್ ಗಳನ್ನು ಪಾವತಿ ಮಾಡಬಹುದು.

ಮೊದಲು ಖರ್ಚಿನ ಪಟ್ಟಿ ಮಾಡಿ : ಕೆಲಸ (Work) ಕಳೆದುಕೊಳ್ಳುವ ಸ್ಥಿತಿ ಇದೆ ಎಂದಾಗ ಅಥವಾ ಕೆಲಸ ಹೋದ ಸಂದರ್ಭದಲ್ಲಿ ನೀವು ತಿಂಗಳ ಖರ್ಚಿ (Expense) ನ ಪಟ್ಟಿಯನ್ನು ಮೊದಲು ತಯಾರಿಸಿ. ಯಾವ ವಸ್ತು ನಿಮಗೆ ಅತ್ಯಗತ್ಯವೋ ಅದನ್ನು ಮಾತ್ರ ಖರೀದಿ ಮಾಡಿ.

Tap to resize

Latest Videos

ಇನ್ಮುಂದೆ ದೇಶದಲ್ಲೇ ಔಷಧಗಳ ಮೂಲ ಪದಾರ್ಥ, MRI ಮಷಿನ್ ಉತ್ಪಾದನೆಯೂ ಆಗುತ್ತೆ!

ಅನವಶ್ಯಕ ಖರ್ಚನ್ನು ಬಿಡ್ಬಿಡಿ : ಕೆಲಸವಿದ್ದಾಗ, ಕೈನಲ್ಲಿ ಹಣ (Money) ವಿದ್ದಾಗ ನೀವು ವಾರದಲ್ಲಿ ಒಂದೋ ಎರಡೋ ದಿನ ರೆಸ್ಟೋರೆಂಟ್, ಹೊಟೇಲ್ ಆಹಾರ (Food) ವನ್ನು ಸೇವನೆ ಮಾಡ್ತಿರಬಹುದು. ಆದ್ರೆ ಈಗ ಪರಿಸ್ಥಿತಿ ಬದಲಾಗಿರುತ್ತದೆ. ವಾಸ್ತವವನ್ನು ನೀವು ಅರಿಯಬೇಕು. ರೆಸ್ಟೋರೆಂಟ್‌ಗಳು, ಶಾಪಿಂಗ್ ಇತ್ಯಾದಿ ಅನಗತ್ಯ ವೆಚ್ಚಗಳನ್ನು ತಕ್ಷಣ ನಿಲ್ಲಿಸಬೇಕ. ಬ್ಯಾಂಕ್ ನಲ್ಲಿ ಇರುವ ಹಣವನ್ನು ಅನಗತ್ಯ ವಸ್ತುಗಳ ಖರೀದಿ ಅಥವಾ ಅನಗತ್ಯ ಕಾರಣಕ್ಕೆ ಖರ್ಚು ಮಾಡ್ಬಾರದು. ಒಂದೇ ಬಾರಿ ಎಲ್ಲವನ್ನೂ ನಿಲ್ಲಿಸಲು ಸಾಧ್ಯವಿಲ್ಲದೆ ಹೋದ್ರೂ ನಿಧಾನವಾಗಿ ಅದ್ರ ಮೇಲೆ ನಿಯಂತ್ರಣ ಸಾಧಿಸಿ.

ಪಾವತಿಸಬೇಕಾದ ಬಿಲ್ ಬಗ್ಗೆ ಗಮನವಿರಲಿ : ಕೆಲವೊಂದು ಬಿಲ್ ಗಳನ್ನು ಪ್ರತಿ ತಿಂಗಳು ಪಾವತಿ ಮಾಡುವುದು ಅನಿವಾರ್ಯ. ಇಲ್ಲದೆ ಹೋದ್ರೆ ನಿತ್ಯದ ಕೆಲಸಕ್ಕೆ ತೊಂದರೆಯಾಗುತ್ತದೆ. ನೀವು ಕರೆಂಟ್ ಬಿಲ್, ಇಎಂಐ ಬಿಲ್, ನೀರಿನ ಬಿಲ್ ಹೀಗೆ ನಿಮ್ಮ ಮನೆಗೆ ಬರುವ ಎಲ್ಲ ಬಿಲ್ ಗಳನ್ನು ಲೆಕ್ಕ ಹಾಕಿ. ಎಷ್ಟು ಖರ್ಚಾಗುತ್ತದೆ ಎಂಬುದನ್ನು ಪರಿಶೀಲಿಸಿ. ಅದಕ್ಕೆ ಅಗತ್ಯವಿರುವ ಹಣವನ್ನು ಮೊದಲು ಪ್ರತ್ಯೇಕವಾಗಿಡಿ. ನಂತ್ರ ಉಳಿದ ಖರ್ಚಿನ ಬಗ್ಗೆ ಆಲೋಚನೆ ಮಾಡಿ.

ಈ ಹೂಡಿಕೆಯಿಂದ ಸಹಾಯ ಪಡೆಯಿರಿ : ಕೆಲಸ ಕಳೆದುಕೊಂಡಿದ್ದು, ಮನೆಯ ಖರ್ಚಿಗೂ ಹಣ ಸಾಲ್ತಿಲ್ಲ ಎನ್ನುವವರು ಪಿಪಿಎಫ್ ಖಾತೆ ಅಥವಾ ಎಫ್ ಡಿ ಖಾತೆಯ ಸಹಾಯ ಪಡೆದು ಅದ್ರಿಂದ ಹಣವನ್ನು ಹಿಂಪಡೆಯಬಹುದು.

ಚಿನ್ನದ ಮೇಲೆ ಸಾಲ : ಪಿಪಿಎಫ್, ಎಫ್ ಡಿ ಹಣ ಕೂಡ ಸಾಕಾಗ್ತಿಲ್ಲ ಎನ್ನುವ ಸಂದರ್ಭದಲ್ಲಿ ನೀವು ಚಿನ್ನದ ಮೇಲೆ ಸಾಲ ಪಡೆಯಬಹುದು. ಚಿನ್ನದ ಮೇಲಿನ ಬಡ್ಡಿ ದರ ಕಡಿಮೆಯಿರುತ್ತದೆ. ಹಾಗೆಯೇ ಇದನ್ನು ನೀವು ತ್ವರಿತವಾಗಿ ಪಡೆಯಬಹುದಾಗಿದೆ. ಇದು ನಿಮ್ಮ ಕಷ್ಟದ ಸಮಯದಲ್ಲಿ ನೆರವಿಗೆ ಬರುತ್ತದೆ. ನಿಮಗೆ ಕೆಲಸ ಸಿಕ್ಕ ನಂತರ ಹಣ ಪಾವತಿಸಿ ಚಿನ್ನವನ್ನು ನೀವು ಪಡೆಯಬಹುದು. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಾಗಿಲ್ಲ.

Personal Finance : ಹೆಚ್ಚು ಖರ್ಚು ಮಾಡೋ ಅಭ್ಯಾಸವಿದ್ರೆ ಈ ಟಿಪ್ಸ್ ಫಾಲೋ ಮಾಡಿ

ಸಿಕ್ಕ ಕೆಲಸ ಒಪ್ಪಿಕೊಳ್ಳಿ : ನಮ್ಮ ವಿದ್ಯಾರ್ಹತೆಗೆ ತಕ್ಕಂತೆ ತಕ್ಷಣ ಕೆಲಸ ಸಿಗೋದು ಸ್ವಲ್ಪ ಕಷ್ಟವಾಗ್ಬಹುದು. ಹಾಗಾಗಿ ನಿಮ್ಮಲ್ಲಿ ಯಾವುದಾದ್ರೂ ಹವ್ಯಾಸವಿದ್ರೆ, ಇಲ್ಲ ತಕ್ಷಣ ಸಣ್ಣ ಸಂಬಳ ನೀಡುವ ಕೆಲಸ ಸಿಕ್ಕಿದ್ರೆ ಅದನ್ನು ಮಾಡ್ತಿರಿ. ಇದ್ರಿಂದ ಪರದಾಡುವುದು ತಪ್ಪುತ್ತದೆ.

click me!