ಮೋದಿ ಸರ್ಕಾರದ ಆರ್ಥಿಕ ಸಮೀಕ್ಷೆ: ಖಾಸಗಿ ಬಂಡವಾಳದ ನೀಲನಕ್ಷೆ!

Published : Jul 04, 2019, 02:35 PM IST
ಮೋದಿ ಸರ್ಕಾರದ ಆರ್ಥಿಕ ಸಮೀಕ್ಷೆ: ಖಾಸಗಿ ಬಂಡವಾಳದ ನೀಲನಕ್ಷೆ!

ಸಾರಾಂಶ

ಮೋದಿ 2.0 ಸರ್ಕಾರದ ಆರ್ಥಿಕ ಸಮೀಕ್ಷೆ ವರದಿ ಬಹಿರಂಗ| ರಾಜ್ಯಸಭೆಯಲ್ಲಿ ಆರ್ಥಿಕ ಸಮೀಕ್ಷೆ ವರದಿ ಮಂಡಿಸಿದ ಕೇಂದ್ರ ವಿತ್ತ ಸಚಿವೆ| ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಸಿದ್ಧಪಡಿಸಿರುವ ಆರ್ಥಿಕ ಸಮೀಕ್ಷೆ| 2019-20ನೇ ಸಾಲಿನ ನೈಜ ಜಿಡಿಪಿ ಬೆಳವಣಿಗೆ ಶೇ.7ರಷ್ಟು ಅಂದಾಜು| ಪ್ರಸಕ್ತ ಸಾಲಿನ ವಿತ್ತೀಯ ಕೊರತೆ ಶೇ.5.8ಕ್ಕೆ ನಿಗದಿ| ಖಾಸಗಿ ಬಂಡವಾಳದ ಹರಿವಿಗೆ ಒತ್ತು ನೀಡಿದ ಆರ್ಥಿಕ ಸಮೀಕ್ಷೆ| 5 ಮಿಲಿಯನ್ ಟ್ರಿಲಿಯನ್ ಡಾಲರ್ ಆರ್ಥಿಕತೆ ತಲುಪುವ ನೀಲನಕ್ಷೆ|

ನವದೆಹಲಿ(ಜು.04): ಮೋದಿ 2.0 ಸರ್ಕಾರದ ಆರ್ಥಿಕ ಸಮೀಕ್ಷೆ ಇಂದು ಸಂಸತ್ತಿನಲ್ಲಿ ಮಂಡನೆಯಾಗಿದೆ. ಈ ಆರ್ಥಿಕ ಸಮೀಕ್ಷೆ 2019-20 ನೇ ಹಣಕಾಸು ವರ್ಷದ ಜಿಡಿಪಿ ದರವನ್ನು ಶೇ.7ರಷ್ಟು ನಿಗದಿ ಮಾಡಿದೆ.

ರಾಜ್ಯಸಭೆಯಲ್ಲಿ ಇಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಿದ 2018-19ರ ಆರ್ಥಿಕ ಸಮೀಕ್ಷೆಯ ಪ್ರಕಾರ, 2019-20ನೇ ಸಾಲಿನ ನೈಜ ಜಿಡಿಪಿ ಬೆಳವಣಿಗೆಯನ್ನು ಶೇ.7ರಷ್ಟು ಅಂದಾಜಿಸಲಾಗಿದೆ.

ಇದೇ ವೇಳೆ 2018 ನೇ ಸಾಲಿನಲ್ಲಿ ಶೇ.6.4 ರಷ್ಟಿದ್ದ ವಿತ್ತೀಯ ಕೊರತೆಯನ್ನು ಪ್ರಸಕ್ತ ಸಾಲಿಗೆ ಶೇ.5.8 ಕ್ಕೆ ನಿಗದಿ ಮಾಡಲಾಗಿದೆ. ದೇಶದ ರಾಜಕೀಯ ಸ್ಥಿರತೆ ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ ಎಂದು ಈ ವೇಳೆ ವಿತ್ತ ಸಚಿವೆ ನುಡಿದರು.

ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಈ ಆರ್ಥಿಕ ಸಮೀಕ್ಷೆ ಸಿದ್ಧಪಡಿಸಿದ್ದು, ಹೆಚ್ಚಿನ ಖಾಸಗಿ ಹೂಡಿಕೆ ಜಿಡಿಪಿ ಬೆಳವಣಿಗೆಯ ವೃದ್ಧಿಗೆ ಸಹಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಅವರ ಕನಸಾದ 5 ಮಿಲಿಯನ್ ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಲು ಶೇ.8 ರಷ್ಟು ಜಿಡಿಪಿ ಬೆಳವಣಿಗೆ ಅಗತ್ಯವಾಗಿದ್ದು, ಇದಕ್ಕಾಗಿ ಖಾಸಗಿ ಹೂಡಿಕೆ ಅತ್ಯವಶ್ಯಕ ಎಂಬುದು ಕೃಷ್ಣಮೂರ್ತಿ ಸುಬ್ರಮಣಿಯನ್ ಅವರ ವಾದವಾಗಿದೆ.

ಬಂಡವಾಳ ವೆಚ್ಚದ ಹಚ್ಚಳಕ್ಕೆ ಕೆಟ್ಟ ಸಾಲಗಳ ಅನುಪಾತದಲ್ಲಿ ಕಡಿತ ಮಾಡುವುದು ಸೂಕ್ತ ಕ್ರಮವಾಗಿದ್ದು, ಸಾಮಾನ್ಉ ಹಣಕಾಸಿನ ಕೊರತೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ,5.8ರಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ತಯಾರಿಸಿರುವ ಈ ಆರ್ಥಿಕ ಸಮೀಕ್ಷೆ 2024 ರ ವೇಳೆಗೆ ಆರ್ಥಿಕತೆಯ ಗಾತ್ರವನ್ನು 5 ಟ್ರಿಲಿಯನ್ ಡಾಲರ್‌ಗೆ ದ್ವಿಗುಣಗೊಳಿಸುವ ಮೋದಿಯವರ ಗುರಿಯನ್ನು ಪೂರೈಸಲು ಅಗತ್ಯವಾದ ನೀಲನಕ್ಷೆ ಎಂದೇ ಬಣ್ಣಿಸಲಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!