ರಾಗಿ, ಭತ್ತ ಜೋಳ ತೊಗರಿ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ: ಯಾವುದು ಎಷ್ಟು?

Published : Jul 04, 2019, 09:42 AM ISTUpdated : Jul 04, 2019, 09:57 AM IST
ರಾಗಿ, ಭತ್ತ ಜೋಳ ತೊಗರಿ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ: ಯಾವುದು ಎಷ್ಟು?

ಸಾರಾಂಶ

ಬೆಂಬಲ ಬೆಲೆಗಳ ಏರಿಕೆ| ರಾಗಿ, ಭತ್ತ ಜೋಳ ತೊಗರಿ ಬೆಲೆ ಹೆಚ್ಚಿಸಿದ ಕೇಂದ್ರ| ಯಾವುದು ಎಷ್ಟು? ಇಲ್ಲಿದೆ ವಿವರ

ನವದೆಹಲಿ[ಜು.04]: ಭತ್ತ, ರಾಗಿ, ಜೋಳ, ತೊಗರಿ, ಉದ್ದು, ಸೋಯಾಬಿನ್‌, ಹತ್ತಿ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ.

ಪ್ರಧಾನಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಭತ್ತದ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 65 ರು. ಹೆಚ್ಚಿಸಲಾಗಿದೆ. ಇದರಿಂದಾಗಿ ಕ್ವಿಂಟಲ್‌ ಭತ್ತಕ್ಕೆ 1815 ರು. ಬೆಂಬಲ ಬೆಲೆ ದೊರೆಯಲಿದೆ.

ಇದೇ ವೇಳೆ, ರಾಗಿಯ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 253 ರು.ನಷ್ಟುಏರಿಕೆ ಮಾಡಲಾಗಿದ್ದು, ಕ್ವಿಂಟಲ್‌ ರಾಗಿಯ ಬೆಲೆ 2897 ರು.ನಿಂದ 3150 ರು.ಗೆ ಏರಿಕೆಯಾಗಿದೆ.

ಜೋಳದ ಬೆಂಬಲ ಬೆಲೆ 120 ರು. ಹೆಚ್ಚಳವಾಗಿದ್ದು, ಹೈಬ್ರಿಡ್‌ ಜೋಳದ ಬೆಲೆ ಕ್ವಿಂಟಲ್‌ಗೆ 2550, ಮಾಲ್ದಂಡಿ ಜೋಳದ ಬೆಲೆ ಕ್ವಿಂಟಲ್‌ಗೆ 2570 ರು.ಗೆ ಏರಿಕೆಯಾಗಿದೆ. ಮುಸುಕಿನ ಜೋಳದ ಬೆಂಬಲ ಬೆಲೆಯನ್ನು 60 ರು. ಹೆಚ್ಚಿಸಲಾಗಿದೆ. ಇದರಿಂದಾಗಿ ರೈತರಿಗೆ ಇನ್ನು 1760 ರು. ಸಿಗಲಿದೆ. ಸಜ್ಜೆ ಬೆಂಬಲ ಬೆಲೆಯನ್ನು 50 ರು. ಏರಿಕೆ ಮಾಡಲಾಗಿದ್ದು, ಇದರಿಂದ ಕ್ವಿಂಟಲ್‌ಗೆ 2000 ರು. ಸಿಗಲಿದೆ. ತೊಗರಿ ಬೆಂಬಲ ಬೆಲೆಯನ್ನು 125 ರು. ಹೆಚ್ಚಳ ಮಾಡಿ, 5800 ರು.ಗೆ ಏರಿಸಲಾಗಿದೆ.

ಉದ್ದು ಬೆಂಬಲ ಬೆಲೆ 100 ರು. ಏರಿಕೆಯಾಗಿ 5700 ರು.ಗೆ ತಲುಪಿದೆ. ಹೆಸರು ಕಾಳಿನ ಬೆಂಬಲ ಬೆಲೆ 75 ರು. ಏರಿಕೆಯಾಗಿ 7050ಕ್ಕೆ ಹೆಚ್ಚಳಗೊಂಡಿದೆ. ಸೋಯಾಬಿನ್‌ (ಹಳದಿ) ಬೆಂಬಲ ಬೆಲೆಯನ್ನು 311 ರು. ಹೆಚ್ಚಳ ಮಾಡಿದ್ದು, 3710 ರು.ಗೆ ಏರಿಕೆ ಮಾಡಲಾಗಿದೆ. ಸೂರ್ಯಕಾಂತಿಯ ಬೆಲೆ 262 ರು. ಏರಿಕೆ ಕಂಡಿದ್ದು, 5650 ರು.ಗೆ ಹೆಚ್ಚಳಗೊಂಡಿದೆ. ನೆಲಗಡಲೆ ಬೆಂಬಲ ಬೆಲೆ 200 ರು. ಏರಿಕೆಯೊಂದಿಗೆ ಕ್ವಿಂಟಲ್‌ಗೆ 5090 ರು. ತಲುಪಿದೆ. ಹತ್ತಿಯ ಬೆಂಬಲ ಬೆಲೆಯನ್ನು 100ರಿಂದ 105 ರು.ನಷ್ಟುಏರಿಸಲಾಗಿದೆ.

ಬೆಳೆಏರಿಕೆಎಷ್ಟು?
ರಾಗಿ253 ರೂ.3150 ರೂ.
ಭತ್ತ65 ರೂ.1815 ರೂ.
ಜೋಳ120 ರೂ.2550 ರೂ.
ತೊಗರಿ125 ರೂ.5800 ರೂ.
ಉದ್ದು100 ರೂ.5700 ರೂ.

ಬಾಡಿಗೆ ತಾಯ್ತನ ನಿಷೇಧ ಮಸೂದೆಗೆ ಸಂಪುಟ ಓಕೆ

ನವದೆಹಲಿ: ಬಾಡಿಗೆ ತಾಯ್ತನ ನಿಷೇಧಿಸುವ, ಹತ್ತಿರದ ಬಂಧುಗಳಿಗೆ ಮಾತ್ರ ಬಾಡಿಗೆ ತಾಯಂದಿರಾಗುವ ಅನುಕೂಲ ಕಲ್ಪಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. 2018ರ ಡಿಸೆಂಬರ್‌ನಲ್ಲಿ ಈ ಕುರಿತ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿತ್ತು. ಲೋಕಸಭೆ ವಿಸರ್ಜನೆಯೊಂದಿಗೆ ಅಸ್ತಿತ್ವ ಕಳೆದುಕೊಂಡಿತ್ತು. ಹೀಗಾಗಿ ಹೊಸದಾಗಿ ಸರ್ಕಾರ ಮಸೂದೆ ತರುತ್ತಿದೆ.

ಮಾಲ್ಡೀವ್ಸ್ಗೆ ಇನ್ನು ಹಡಗಲ್ಲೂ ಹೋಗಿ

ಸಮುದ್ರ ಮಾರ್ಗದ ಮೂಲಕ ಪ್ರಯಾಣಿಕರ ಸಂಚಾರ ಮತ್ತು ಕಾರ್ಗೋ ಸೇವೆ ಕುರಿತಾಗಿ ಮಾಲ್ಡೀವ್‌್ಸ ಹಾಗೂ ಭಾರತ ನಡುವೆ ಏರ್ಪಟ್ಟಿದ್ದ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ಅಸ್ತು ನೀಡಿದೆ. ಹೀಗಾಗಿ, ಭಾರತೀಯ ಪ್ರವಾಸಿಗರು ಇನ್ನು ಮುಂದಿನ ದಿನಗಳಲ್ಲಿ ಹಡಗಿನ ಮೂಲಕವೇ ಮಾಲ್ಡೀವ್ಸ್ ಪ್ರವಾಸ ಕೈಗೊಳ್ಳಬಹುದಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!
Vastu Tips: ಮನೆಯಲ್ಲಿ 'ಓಡುತ್ತಿರುವ ಏಳು ಕುದುರೆ' ಫೋಟೋ ಯಾಕೆ ಹಾಕ್ತಾರೆ? ಸೀಕ್ರೆಟ್ ಗೊತ್ತಾದ್ರೆ ಈಗ್ಲೇ ಹಾಕ್ತೀರಾ..