ಇನ್ನು ಆದಾಯ ತೆರಿಗೆ ಇಲಾಖೆಯಿಂದಲೇ ಐಟಿ ರಿಟರ್ನ್‌ ಭರ್ತಿ!

By Web DeskFirst Published Dec 6, 2018, 10:26 AM IST
Highlights

ಐಟಿ ರಿಟರ್ನ್‌ ಫಾರ್ಮ್‌ಗಳನ್ನು ಆದಾಯ ತೆರಿಗೆದಾರರಿಗೆ ನೀಡುವತ್ತ ಆದಾಯ ತೆರಿಗೆ ಇಲಾಖೆ ಕಾರ್ಯೋನ್ಮುಖವಾಗಿದೆ. ಶೀಘ್ರ ಈ ಫಾಮ್‌ರ್‍ಗಳನ್ನು ನೀಡುವ ಇರಾದೆ ಇಲಾಖೆಗೆ ಇದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧ್ಯಕ್ಷ ಸುಶೀಲ್‌ಚಂದ್ರ ಹೇಳಿದ್ದಾರೆ

ನವದೆಹಲಿ[ಡಿ.06]: ಮೊದಲೇ ಭರ್ತಿ ಮಾಡಲಾದ ಐಟಿ ರಿಟರ್ನ್‌ ಫಾರ್ಮ್‌ಗಳನ್ನು ಆದಾಯ ತೆರಿಗೆದಾರರಿಗೆ ನೀಡುವತ್ತ ಆದಾಯ ತೆರಿಗೆ ಇಲಾಖೆ ಕಾರ್ಯೋನ್ಮುಖವಾಗಿದೆ. ಶೀಘ್ರ ಈ ಫಾರ್ಮ್‌ಗಳನ್ನು ನೀಡುವ ಇರಾದೆ ಇಲಾಖೆಗೆ ಇದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧ್ಯಕ್ಷ ಸುಶೀಲ್‌ಚಂದ್ರ ಹೇಳಿದ್ದಾರೆ.

ಅನೇಕ ಕಂಪನಿಗಳಲ್ಲಿ ಮೂಲದಲ್ಲೇ ತೆರಿಗೆ ಕಡಿತ (ಟಿಡಿಎಸ್‌) ಮಾಡಲಾಗುತ್ತದೆ. ಇದನ್ನು ಆಧರಿಸಿ ಮೊದಲೇ ಭರ್ತಿ ಮಾಡಲಾದ ಐಟಿ ರಿಟರ್ನ್‌ ಫಾರ್ಮ್‌ಗಳನ್ನು ವಿತರಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದ್ದಾರೆ. ‘ಇನ್ನು ಕೆಲ ದಿವಸ ಅಥವಾ 1 ವಾರದಲ್ಲಿ ಈ ಫಾರ್ಮ್‌ಗಳನ್ನು ಅಂತಿಮಗೊಳಿಸಲಾಗುತ್ತದೆ. ಇನ್ನೊಂದು ವರ್ಷದಲ್ಲಿ ಇದು ಜಾರಿಗೆ ಬರಬಹುದು. ಇದಕ್ಕಾಗಿ ಶೇ.0.5ರಷ್ಟುರಿಟರ್ನ್‌ಗಳನ್ನು ಪರಿಶೀಲನೆಗೆ ತೆಗೆದುಕೊಳ್ಳಲಾಗಿದೆ’ ಎಂದರು.

click me!