ಈ ಬ್ಯಾಂಕ್ ಗಳ ಕ್ರೆಡಿಟ್, ಡೆಬಿಟ್ ಕಾರ್ಡ್ ಬಳಸಿ ಹಬ್ಬದ ಶಾಪಿಂಗ್ ಮಾಡಿದ್ರೆ ಆಕರ್ಷಕ ಆಫರ್ ಗಳು!

By Suvarna News  |  First Published Sep 28, 2022, 12:06 PM IST

ಹಬ್ಬಗಳ ಸಂಭ್ರಮ ಪ್ರಾರಂಭವಾಗಿದೆ. ಹಬ್ಬ ಅಂದ್ಮೇಲೆ ಶಾಪಿಂಗ್ ಕೂಡ ಜೋರಾಗಿಯೇ ಇರಬೇಕು. ಹೀಗಿರುವಾಗ ಬ್ಯಾಂಕ್ ಗಳು ಕೂಡ ಗ್ರಾಹಕರಿಗೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಒಂದಿಷ್ಟು ಆಫರ್ ಗಳನ್ನು ಘೋಷಿಸಿವೆ. ಹಾಗಾದ್ರೆ ಯಾವೆಲ್ಲ ಬ್ಯಾಂಕ್ ಗಳು ಏನೆಲ್ಲ ಆಫರ್ ಗಳನ್ನು ಘೋಷಿಸಿವೆ? ಇಲ್ಲಿದೆ ಮಾಹಿತಿ.


ಬೆಂಗಳೂರು (ಸೆ.28): ಹಬ್ಬಗಳ ಸೀಸನ್ ಪ್ರಾರಂಭವಾಗಿದೆ. ನವರಾತ್ರಿ ರಂಗು ಎಲ್ಲೆಡೆ ಹರಡಿದೆ. ಕೆಲವೇ ದಿನಗಳಲ್ಲಿ ದಸರಾ ಹಬ್ಬವಿದೆ. ಅದಾದ ಕೆಲವು ದಿನಗಳ ಬಳಿಕ ಬೆಳಕಿನ ಹಬ್ಬ ದೀಪಾವಳಿ. ಹಬ್ಬಗಳು ಅಂದ್ರೆ ಖರೀದಿ ಭರಾಟೆ ಕೂಡ ಹೆಚ್ಚಿರುತ್ತದೆ. ಬಟ್ಟೆ, ಒಡವೆ, ಮನೆಗೆ ಅಗತ್ಯವಾದ ಸಾಮಗ್ರಿಗಳು ಹೀಗೆ ಹಬ್ಬದ ಸಂಭ್ರಮ ಹೆಚ್ಚಿಸಲು ಶಾಪಿಂಗ್ ಮಾಡೋದು ಕಾಮನ್. ಹೀಗಾಗಿ ಈ ಹಬ್ಬದ ಸೀಸನ್ ನಲ್ಲಿ ಗ್ರಾಹಕರಿಗೆ ಅನೇಕ ಬ್ಯಾಂಕ್ ಗಳು ಕೂಡ ಆಕರ್ಷಕ ಆಫರ್ ಗಳನ್ನು ಘೋಷಿಸಿವೆ. ಕೆಲವು ಬ್ಯಾಂಕ್ ಗಳು ಕ್ರೆಡಿಟ್, ಡೆಬಿಟ್ ಕಾರ್ಡ್ ಗಳ ಬಳಕೆ ಮೇಲೆ ಡಿಸ್ಕೌಂಟ್ಸ್ ಹಾಗೂ ಕ್ಯಾಶ್ ಬ್ಯಾಕ್ ಗಳನ್ನು ಒದಗಿಸುತ್ತಿವೆ.ಇನ್ನೂ ಕೆಲವು ಬ್ಯಾಂಕುಗಳು ಗೃಹ, ವಾಹನ ಹಾಗೂ ವೈಯಕ್ತಿಕ ಸಾಲಗಳ ಮೇಲೆ ಕೂಡ ಆಕರ್ಷಕ ಆಫರ್ ಗಳನ್ನು ಒದಗಿಸುತ್ತಿವೆ. ಹಬ್ಬದ ಸಮಯದಲ್ಲಿ ಗ್ರಾಹಕರ ಖರೀದಿ ಹೆಚ್ಚಿರುವ ಕಾರಣ ಹಣದ ಅವಶ್ಯಕತೆ ಕೂಡ ಜಾಸ್ತಿ ಇರುತ್ತದೆ. ಹೀಗಾಗಿ ಈ ಸಂದರ್ಭವನ್ನು ಬ್ಯಾಂಕ್ ಗಳು ಕೂಡ ಬಳಸಿಕೊಳ್ಳಲು ಮುಂದಾಗಿವೆ. ಈ ಕಾರಣದಿಂದ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕುಗಳ ವೆಬ್ ಸೈಟ್ ಗಳು ವಿವಿಧ ಆಫರ್ ಗಳಿಂದ ತುಂಬಿ ತುಳುಕುತ್ತಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ), ಪಂಜಾಬ್ ನ್ಯಾಷನಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಗಳು ಹಬ್ಬದ ಸೀಸನ್ ಗೆ ಏನೆಲ್ಲ ಆಫರ್ ಗಳನ್ನು ನೀಡಿವೆ ಎಂಬ ಮಾಹಿತಿ ಇಲ್ಲಿದೆ.

ಐಸಿಐಸಿಐ ಬ್ಯಾಂಕ್
ಹಬ್ಬದ ಸೀಸನ್ ಹಿನ್ನೆಲೆಯಲ್ಲಿ ತನ್ನ ಎಲ್ಲ ಗ್ರಾಹಕರಿಗೆ ಅನೇಕ ಬಗೆಯ ಆಫರ್ ಗಳನ್ನೊಳಗೊಂಡ 'ಫೆಸ್ಟಿವ್ ಬೋನಂಜಾ' ಬಿಡುಗಡೆ ಮಾಡೋದಾಗಿ ಐಸಿಐಸಿಐ ಬ್ಯಾಂಕ್ ಘೋಷಿಸಿದೆ. ಗ್ರಾಹಕರು ಕ್ರೆಡಿಟ್, ಡೆಬಿಟ್ ಕಾರ್ಡ್ಸ್, ಇಂಟರ್ನೆಟ್ ಬ್ಯಾಂಕಿಂಗ್, ಗ್ರಾಹಕರ ಹಣಕಾಸು ಹಾಗೂ ಕಾರ್ಡ್ ರಹಿತ ಇಎಂಐ ಸೇವೆಗಳ ಬಳಕೆ ಮೇಲೆ  ಡಿಸ್ಕೌಂಟ್ಸ್  ಹಾಗೂ 25,000 ರೂ. ತನಕದ ಕ್ಯಾಶ್ ಬ್ಯಾಕ್ ಪ್ರಯೋಜನವನ್ನು ಪಡೆಯಬಹುದಾಗಿದೆ. ಗೃಹ, ವಾಹನ, ವೈಯಕ್ತಿಕ, ಟ್ರ್ಯಾಕ್ಟರ್, ಚಿನ್ನ ಹಾಗೂ ದ್ವಿಚಕ್ರ ವಾಹನಗಳ ಸಾಲಗಳ ಮೇಲೆ ಆಕರ್ಷಕ ಆಫರ್ ಗಳನ್ನು ಕೂಡ ನೀಡುತ್ತಿದೆ. ಹಾಗೆಯೇ ಕ್ರೋಮಾ, ರಿಲಯನ್ಸ್ ಡಿಜಿಟಲ್, ವಿಜಯ್ ಸೇಲ್ಸ್ , ಬಜಾಜ್ ಎಲೆಕ್ಟ್ರಾನಿಕ್ಸ್  ಇತ್ಯಾದಿ ಪ್ರಮುಖ ಶಾಪ್ ಗಳಲ್ಲಿ ಆಪಲ್, ಒನ್ ಪ್ಲಸ್, ಸ್ಯಾಮ್ ಸಂಗ್, ಸೋನಿ, ಎಲ್ ಜಿ ಹಾಗೂ ವೊಲ್ಟಸ್ ಮುಂತಾದ ಪ್ರಮುಖ ಬ್ರ್ಯಾಂಡ್ ಗಳ ಖರೀದಿ ಮೇಲೆ ನೋ ಕಾಸ್ಟ್ ಆಫರ್ ಗಳನ್ನು ನೀಡುತ್ತಿದೆ.

Tap to resize

Latest Videos

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಾರಿದ ಗೌತಮ್ ಅದಾನಿ; ಟಾಪ್ 10 ಪಟ್ಟಿಯಿಂದ ಮುಖೇಶ್ ಅಂಬಾನಿ ಔಟ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಕೂಡ ಹಬ್ಬಕ್ಕೆ ಅನೇಕ ಆಫರ್ ಗಳನ್ನು ಘೋಷಿಸಿದೆ. 'ನವರಾತ್ರಿಯ ಸಂಭ್ರಮವನ್ನು ನಿಮ್ಮ ಜೊತೆಗೆ ಆಚರಿಸಿ ನಿಮ್ಮ ಕನಸುಗಳನ್ನು ನನಸಾಗಿಸಲು ಎಸ್ ಬಿಐ ಜೊತೆಗಿದೆ. ಕಾರ್ ಸಾಲ, ವೈಯಕ್ತಿಕ ಸಾಲಗಳು ಹಾಗೂ ಚಿನ್ನದ ಸಾಲಗಳ ಮೇಲೆ ವಿಶೇಷ ಆಫರ್ ಗಳು ಲಭ್ಯವಿವೆ. ಈಗಲೇ ಯೋನೋ ಅಪ್ಲಿಕೇಷನ್ ಅಥವಾ https://bank.sbi ಭೇಟಿ ನೀಡಿ ಅರ್ಜಿ ಸಲ್ಲಿಸಿ.' ಹಬ್ಬದ ಸೀಸನ್ ಪ್ರಯುಕ್ತ ಎಸ್ ಬಿಐ ಸಾಲಗಳ ಪ್ರೋಸೆಸಿಂಗ್ ಶುಲ್ಕವನ್ನು ರದ್ದು ಮಾಡಿದೆ. ಕಾರ್ ಸಾಲದ ಮೇಲೆ ಒಂದು ಲಕ್ಷಕ್ಕೆ 1,551ರೂ. ಇಎಂಐ ಪ್ರಾರಂಭವಾದ್ರೆ, ವೈಯಕ್ತಿಕ ಸಾಲಕ್ಕೆ ಇಎಂಐ ಲಕ್ಷಕ್ಕೆ 1868ರೂ.ನಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಚಿನ್ನದ ಸಾಲದ ಮೇಲಿನ ಇಎಂಐ ಲಕ್ಷಕ್ಕೆ 3,134 ರೂ.ನಿಂದ ಪ್ರಾರಂಭವಾಗುತ್ತದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಯೂನಿಯನ್ ಬ್ಯಾಂಕ್ ಕೂಡ ಹಬ್ಬಗಳ ಹಿನ್ನೆಲೆಯಲ್ಲಿ ಗೃಹ ಸಾಲದ ಮೇಲಿನ ಪ್ರೊಸೆಸಿಂಗ್ ಶುಲ್ಕ ರದ್ದುಗೊಳಿಸಿರೋದಾಗಿ ತನ್ನ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಿದೆ.

58 ಸಾವಿರ ಕೋಟಿ ರೂ. ಆನ್‌ಲೈನ್‌ ಬಹುಮಾನಕ್ಕೆ ತೆರಿಗೆಯೇ ಬಂದಿಲ್ಲ: ಟ್ಯಾಕ್ಸ್‌ ವಂಚಕರಿಗೆ IT Notice

ಸೆಂಟ್ರಲ್ ಬ್ಯಾಂಕ್
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡೋದಾಗಿ ಟ್ವೀಟ್ ಮಾಡಿದೆ.


 

click me!