ಮುಂದಿನ 10 ವರ್ಷಗಳಲ್ಲಿ ಇಂಟರ್ನೆಟ್ ಕಂಪನಿಗಳಿಂದ ಭಾರತದ ಸಂಪತ್ತಿನಲ್ಲಿ ಭಾರೀ ಹೆಚ್ಚಳ?

By Suvarna NewsFirst Published Sep 5, 2022, 5:32 PM IST
Highlights

ಇಂದು ಮಾಹಿತಿ ತಂತ್ರಜ್ಞಾನ ಕ್ಷೇತ್ರ ಅಗಾಧವಾಗಿ ಬೆಳೆದಿದೆ. ಬಹುರಾಷ್ಟ್ರೀಯ ಕಂಪನಿಗಳು ಕೂಡ ತಮ್ಮ ಐಟಿ ಬಜೆಟ್ ವೆಚ್ಚವನ್ನು ಹೆಚ್ಚಿಸಿವೆ. ಇದು ಭಾರತದ ಐಟಿ ಕಂಪನಿಗಳಿಗೆ ವರದಾನವಾಗಲಿದೆ ಎನ್ನುತ್ತಾರೆ ತಜ್ಞರು.ಅದ್ರಲ್ಲೂ ಇಂಟರ್ನೆಟ್ ಕಂಪನಿಗಳಿಂದ ಮುಂದಿನ ಹತ್ತು ವರ್ಷಗಳಲ್ಲಿ ಭಾರತದ ಸಂಪತ್ತು ತ್ವರಿತ ಹೆಚ್ಚಳ ಕಾಣಲಿದೆ ಎಂದು ಅಂದಾಜಿಸಲಾಗಿದೆ. 

ನವದೆಹಲಿ( ಸೆ.5): ಭಾರತ ಮುಂದಿನ 10  ವರ್ಷಗಳಲ್ಲಿ ಮಾಹಿತಿ ತಂತ್ರಜ್ಞಾನದಿಂದ ತ್ವರಿತವಾಗಿ ಸಂಪತ್ತು ಗಳಿಸಲಿದೆ ಎನ್ನುವುದು ಹೂಡಿಕೆ ತಜ್ಞರ ಅಭಿಪ್ರಾಯವಾಗಿದೆ. ಇಂದು ಎಲ್ಲ ಟಾಪ್ ಕಂಪನಿಗಳು ತಂತ್ರಜ್ಞಾನದ ಮೇಲಿನ ಹೂಡಿಕೆ ಎಷ್ಟು ಅಗತ್ಯ ಎಂಬುದನ್ನು ಮನಗಂಡಿವೆ. ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡೋದು ಅಗತ್ಯ ಎಂಬುದು ಕಂಪನಿಗಳಿಗೆ ತಿಳಿದಿದೆ. ಇದೇ ಕಾರಣಕ್ಕೆ ಬೆಳವಣಿಗೆ ದರ ಕುಂಠಿತವಾಗಿದ್ದರೂ ಕೂಡ ಜಗತ್ತಿನ ಟಾಪ್ 500ರ ಪಟ್ಟಿಯಲ್ಲಿರುವ ಕಂಪನಿಗಳು ತಮ್ಮ ಐಟಿ ಬಜೆಟ್ ನಲ್ಲಿ ಯಾವುದೇ ಕಡಿತ ಮಾಡಿಲ್ಲ ಎನ್ನುತ್ತಾರೆ ರಿನೈಸೆನ್ಸ್ ಇನ್ವೆಸ್ಟ್ ಮೆಂಟ್ ಸಿಐಒ ಪಂಕಜ್ ಮುರರ್ಕ. ಬೆಳವಣಿಗೆಯ ಹಾದಿಯಲ್ಲಿ ಮುನ್ನಡೆಯಲು ಹಾಗೂ ಇತರ ಕಂಪನಿಗಳ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಲು ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡೋದು ಅನಿವಾರ್ಯ ಎಂಬುದು ಕಂಪನಿಗಳಿಗೆ ಇಂದು ಅರಿವಾಗಿದೆ. ಜಗತ್ತಿನ ಟಾಪ್ ಕಂಪನಿಗಳು ಇಂದು ತಮ್ಮ ಉದ್ಯಮದ ಡಿಜಿಟಲೀಕರಣಕ್ಕಾಗಿ ತಂತ್ರಜ್ಞಾನದ ಮೇಲಿನ ವೆಚ್ಚವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿವೆ. ಅಲ್ಲದೆ, ಎಐ ಅಥವಾ ಮಷಿನ್ ಲರ್ನಿಂಗ್ ಸೇರಿದಂತೆ ತಂತ್ರಜ್ಞಾನದ ಹೊಸ ವಲಯಗಳ ಮೇಲೆ ಹೂಡಿಕೆ ಮಾಡಲು ಮುಂದಾಗಿವೆ. ಈ ಬೆಳವಣಿಗೆ ಭಾರತದ ಐಟಿ ಕ್ಷೇತ್ರದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ. ಐಟಿ ಕ್ಷೇತ್ರಕ್ಕೆ ಸಂಬಂಧಿಸಿ ಪಂಕಜ್ ಮುರರ್ಕ ಮಂಡಿಸಿರುವ ಅಭಿಪ್ರಾಯಗಳನ್ನು ಈ ಕೆಳಗೆ ನೀಡಲಾಗಿದೆ. 

ಅಮೆರಿಕ ಹಾಗೂ ಯುರೋಪಿನ ಆರ್ಥಿಕ ಹಿಂಜರಿತ ಭಾರತದ ಐಟಿ ಕ್ಷೇತ್ರದ ಮೇಲೆ ಪರಿಣಾಮ ಬೀರೋದಿಲ್ಲವೆ?
ಇಂದಿಗೂ ಹಾಗೂ ಹಿಂದಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ.15-20 ವರ್ಷಗಳ ಹಿಂದೆ ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಕಾಣಿಸಿಕೊಂಡಿದ್ರೆ ಅಲ್ಲಿನ ನಿರುದ್ಯೋಗ ಪ್ರಮಾಣ ಕೂಡ ಹೆಚ್ಚಿರುತ್ತಿತ್ತು. ಆದ್ರೆ ಈಗಿನ ಅಂಕಿಅಂಶಗಳನ್ನು ತೆರೆದು ನೋಡಿ ಅಮೆರಿಕದಲ್ಲಿ ಇಂದು ಪ್ರತಿ ನಿರುದ್ಯೋಗಿ ವ್ಯಕ್ತಿಗೆ ಎರಡು ಉದ್ಯೋಗಾವಕಾಶವಂತೂ ಇದ್ದೇಇದೆ. ಅಂದ್ರೆ ಅಮರಿಕದ ಆರ್ಥಿಕತೆಯ ಸಾಮರ್ಥ್ಯ ತಗ್ಗಿಲ್ಲ ಎನ್ನುತ್ತಾರೆ ಪಂಕಜ್ ಮುರರ್ಕ. ಕಳೆದ ಕೆಲವು ಸಮಯದಿಂದ ಅಮೆರಿಕದ ಆರ್ಥಿಕತೆ ಹಿಂಜರಿತಕ್ಕೊಳಗಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ನಾನು ಇದನ್ನು ಒಪ್ಪುವುದಿಲ್ಲ ಎನ್ನುತ್ತಾರೆ ಮುರರ್ಕ. ಏಕೆಂದ್ರೆ ಅಮೆರಿಕದಲ್ಲಿ ತಂತ್ರಜ್ಞಾನದಲ್ಲಿ ಹಿಂಜರಿಕೆಯಾಗಿರಬಹುದೇ ಹೊರತು ಆರ್ಥಿಕತೆಗಲ್ಲ ಎನ್ನುತ್ತಾರೆ ಅವರು. ಇನ್ನು ಪ್ರಮುಖ ಕಂಪನಿಗಳು ಮಾಹಿತಿ ತಂತ್ರಜ್ಞಾನದ ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿವೆ. ಇದು ಭಾರತದ ಐಟಿ ಕಂಪನಿಗಳ ಬೆಳವಣಿಗೆಯನ್ನು ಉತ್ತೇಜಿಸಲಿದೆ. ಹೀಗಾಗಿ ಮುಂದಿನ ಮೂರು ಅಥವಾ ಐದು ವರ್ಷಗಳಲ್ಲಿ ಭಾರತದ ಬೃಹತ್ ಕಂಪನಿಗಳು ಎರಡಂಕಿ ಪ್ರಗತಿ ಸಾಧಿಸುತ್ತವೆ ಎಂಬುದು ನನ್ನ ನಂಬಿಕೆಯಾಗಿದೆ ಎನ್ನುತ್ತಾರೆ ಪಂಕಜ್ ಮುರರ್ಕ.

Latest Videos

PF Update:ಪಿಎಫ್ ಖಾತೆಗೆ ಶೀಘ್ರದಲ್ಲೇ ಬರಲಿದೆ ಬಡ್ಡಿ ಹಣ; ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?

ಮುಂದಿನ ದಿನಗಳಲ್ಲಿ ಯಾವ ಕಂಪನಿಗಳ ಮೇಲಿನ ಹೂಡಿಕೆ ಲಾಭ ತರಬಹುದು?
ನಾನು ಭಾರತದ ಇಂಟರ್ನೆಟ್ ಕಂಪನಿಗಳು ಎಂದು ಹೇಳಲು ಇಚ್ಛಿಸುತ್ತೇನೆ. ಭಾರತದ ಇಂಟರ್ನೆಟ್ ಆರ್ಥಿಕತೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿಲ್ಲ. ಮುಂದಿನ 10 ವರ್ಷಗಳಲ್ಲಿ ಭಾರತದ ಇಂಟರ್ನೆಟ್ ಹಾಗೂ  ಡಿಜಿಟಲ್ ಉದ್ಯಮ ಸಾಕಷ್ಟು ಪ್ರಗತಿ ಸಾಧಿಸಲಿದೆ. ಈ ಸಮಯದಲ್ಲಿ ಭಾರತ 7 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳವಣಿಗೆ ಹೊಂದಲಿದೆ. ಅಲ್ಲದೆ, ಭಾರತದ ಆರ್ಥಿಕತೆಯ ಶೇ.15ರಷ್ಟು ಪಾಲು ಇಂಟರ್ನೆಟ್ ಕ್ಷೇತ್ರದ್ದೇ ಆಗಿರಲಿದೆ ಎನ್ನುತ್ತಾರೆ ಪಂಕಜ್ ಮುರರ್ಕ.

World Economy: ಯುಕೆ ಹಿಂದಿಕ್ಕಿದ ಭಾರತ; ನರಸಿಂಹ ರಾವ್, ಮನಮೋಹನ್‌ ಸಿಂಗ್‌ಗೆ ಕ್ರೆಡಿಟ್‌ ನೀಡಿದ ಆರ್ಥಿಕ ಸಲಹೆಗಾರ

ನೀವು ಹೇಳಿದ ಇಂಟರ್ನೆಟ್ ಕಂಪನಿಗಳಲ್ಲಿ ಪೇಟಿಎಂ ಹಾಗೂ ಝೊಮ್ಯಾಟೋ ಮಾದರಿಯ ಸಂಸ್ಥೆಗಳು ಕೂಡ ಸೇರಿವೆಯಾ?
ಹೌದು, ಎಲ್ಲ ತರಹದ ಇಂಟರ್ನೆಟ್ ಆಧಾರಿತ ವ್ಯವಹಾರಗಳು ಸೇರಿವೆ. ಸರಿಯಾದ ಷೇರುಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಪ್ರತಿಯೊಬ್ಬರು ಜಾಗೃತರಾಗಿರಬೇಕು. ಇಂಟರ್ನೆಟ್ ಆಧಾರಿತ ವ್ಯವಹಾರದಲ್ಲಿ ಸ್ಪರ್ಧೆ ಹೆಚ್ಚಿರುವ ಕಾರಣ ಬದಲಾವಣೆಗಳು ಕೂಡ ಬೇಗ ಆಗುತ್ತವೆ. ಹೀಗಾಗಿ ಎಚ್ಚರಿಕೆ ಅಗತ್ಯ ಎನ್ನುತ್ತಾರೆ ಪಂಕಜ್ ಮುರರ್ಕ.

click me!