Fact Check About ₹500 Note ಯಾವುದು ಅಸಲಿ ಯಾವುದು ನಕಲಿ?

By Kannadaprabha News  |  First Published Dec 10, 2021, 9:21 AM IST

*500 ರು. ಮುಖಬೆಲೆಯ ಎಲ್ಲಾ ನೋಟುಗಳೂ ಅಸಲಿ ಅಲ್ಲ?
*ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌!
*ಸತ್ಯ ಬಿಚ್ಚಿಟ್ಟ ಕೇಂದ್ರ ಸರ್ಕಾರದ ನೋಡಲ್‌ ಸಂಸ್ಥೆ ಪಿಬಿಐ


ನವದೆಹಲಿ(ಡಿ. 10): ಅಂತರ್ಜಾಲದಲ್ಲಿ (Internet) ನಾವು ಕರೆನ್ಸಿ ನೋಟುಗಳನ್ನು ಏಕೆ ಸ್ವೀಕರಿಸಬಾರದು ಎಂಬುದರ ಬಗ್ಗೆ ಪದೇ ಪದೇ ವದಂತಿಗಳನ್ನು ಕೇಳುತ್ತೇವೆ. ಇಂಥಹ ಸಲಹೆ ನೀಡುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತವೆ. ಹಲವು ಬಾರಿ ಜನರು ಇವುಗಳನ್ನು ನಂಬಿ ಆತಂಕಕ್ಕೊಳಗಾಗುತ್ತಾರೆ. ಸದ್ಯ ಭಾರತದಲ್ಲಿ ಚಲಾವಣೆಯಲ್ಲಿರುವ 500 ರು. ಮುಖಬೆಲೆಯ (Rs.500 Note) ಎಲ್ಲಾ ನೋಟುಗಳೂ ಅಸಲಿ ಅಲ್ಲ ಎಂದು ಹೇಳಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರೀ ಚರ್ಚೆಗೆ ಗ್ರಾಸವಾಗಿದೆ. 

ವಿಡಿಯೋದಲ್ಲಿ, 500 ರುಪಾಯಿಯ ಎಲ್ಲಾ ನೋಟುಗಳೂ ಅಸಲಿಯಲ್ಲ. ನೋಟಿನ ಒಂದು ಬದಿಯಲ್ಲಿ ಮಹಾತ್ಮ ಗಾಂಧೀಜಿ (Mahatma Gandhi) ಚಿತ್ರ ಹಾಗೂ ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ ಗವರ್ನರ್‌ ಸಹಿಯ ನಡುವಿನ ಮಧ್ಯದ ಜಾಗದಲ್ಲಿ ಹಸಿರು ಪಟ್ಟಿಯೊಂದು (Green Strip) ಇದೆ. ಇದರ ಮೇಲೆ ಇಂಗ್ಲಿಷ್‌ ಭಾಷೆಯಲ್ಲಿ ‘ಆರ್‌ಬಿಐ’ (RBI) ಎಂದೂ, ಹಿಂದಿ ಭಾಷೆಯಲ್ಲಿ ‘ಭಾರತ್‌’ ಎಂದೂ ಮುದ್ರಿಸಲಾಗಿದೆ. 

Tap to resize

Latest Videos

undefined

ಈ ಹಸಿರು ಪಟ್ಟಿಯು ಗವರ್ನರ್‌ ಸಹಿಯ ಸಮೀಪದಲ್ಲಿದ್ದರೆ ಅದು ಅಸಲಿ ನೋಟು. ಗಾಂಧೀಜಿ ಚಿತ್ರದ ಸಮೀಪ ಇದ್ದರೆ ಅದು ನಕಲಿ ನೋಟು ಎಂದು ಹೇಳಲಾಗಿದೆ.ಈ ವದಂತಿ ಹಬ್ಬುತ್ತಿದ್ದಂತೆಯೇ ವ್ಯಾಪಾರಿಗಳು 500 ರೂ ನೋಟಿನ ಬಗ್ಗೆ ಸಂದೇಹ ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ. ಹಲವು ಕಡೆಗಳಲ್ಲಿ ಈ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಹಾಗಾಗಿ ಯಾವ ನೋಟು ಚಲಾವಣೆಯಲ್ಲಿದೆ ಎಂಬುದರ ಬಗ್ಗೆ ಗ್ರಾಹಕರಲ್ಲಿ ಹಲವು ಸಂದೇಹಗಳು ಮೂಡಿವೆ. ಆದರೆ  ಕೇಂದ್ರ ಸರ್ಕಾರದ ನೋಡಲ್‌ ಸಂಸ್ಥೆ ಪಿಬಿಐ ಈ ವಿಡಿಯೋ ಫೇಕ್‌ ಎಂದು ದೃಢೀಕರಿಸಿದೆ.

 

 

ಸತ್ಯ ಬಿಚ್ಚಿಟ್ಟ ಕೇಂದ್ರ ಸರ್ಕಾರದ ನೋಡಲ್‌ ಸಂಸ್ಥೆ ಪಿಬಿಐ!

ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ಕೇಂದ್ರ ಸರ್ಕಾರದ ನೋಡಲ್‌ ಸಂಸ್ಥೆ ಪಿಬಿಐ (PBI) ಇದು ಸುಳ್ಳುಸುದ್ದಿ ಎನ್ನುವುದನ್ನು ಖಚಿತಪಡಿಸಿದೆ. ಗಾಂಧೀಜಿ ಭಾವಚಿತ್ರದ ಸಮೀಪ ಹಸಿರುಪಟ್ಟಿಹೊಂದಿರುವ 500 ರು. ಮುಖಬೆಲೆಯ ನೋಟುಗಳು ಚಲಾವಣೆಗೆ ಯೋಗ್ಯವಲ್ಲ ಎಂಬ ವಾದವನ್ನು ಅದು ಅಲ್ಲಗಳೆದಿದೆ. ಎರಡೂ ರೀತಿಯ ನೋಟುಗಳು ಚಲಾವಣೆಗೆ ಅರ್ಹವಾಗಿವೆ. ದಾರಿ ತಪ್ಪಿಸುವ ಇಂಥ ವಿಡಿಯೋ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಪಿಐಬಿ ಮನವಿ ಮಾಡಿದೆ.

ನೋಟಿನ ದೃಢೀಕರಣವನ್ನು ಪರಿಶೀಲಿಸಲು ವಿಧಾನ!

₹ 500 ನೋಟಿನ ಪ್ರಮಾಣಿತ ಗಾತ್ರ 66mmX150mm ಆಗಿದೆ. ಇದರ ಮೂಲ ಬಣ್ಣ ಕಲ್ಲು ಬೂದು  (stone grey) ಆಗಿದೆ. ನೋಟು ವಾಲಿದಾಗ ಭದ್ರತಾ ಪಟ್ಟಿ (security thread ) ಬಣ್ಣವನ್ನು ಹಸಿರು (Green) ಬಣ್ಣದಿಂದ ನೀಲಿ (Blue) ಬಣ್ಣಕ್ಕೆ ಬದಲಾಯಿಸುತ್ತದೆ ಎಂದು ಸರ್ಕಾರ ಹೇಳಿದೆ. ₹ 500 ನೋಟಿನ ದೃಢೀಕರಣವನ್ನು ಪರಿಶೀಲಿಸಲು ಬಳಸಬಹುದಾದ ಹಲವಾರು ಇತರ ಜ್ಯಾಮಿತೀಯ ವಿನ್ಯಾಸಗಳು ಮತ್ತು ಮಾದರಿಗಳಿವೆ. ಜತಗೆ  ದೃಷ್ಟಿಹೀನರಿಗೆ  ₹ 500 ನೋಟು ಪರಿಶೀಲಿಸಲು ಹಲವು ಮಾರ್ಗಗಳಿವೆ.

ಆನ್‌ಲೈನ್‌ನಲ್ಲಿ ಹರಿದಾಡುವ ನಕಲಿ ವೀಡಿಯೊಗಳು (Fake Video) ಅಥವಾ ಸಂದೇಶಗಳ ಕುರಿತು ಪಿಐಬಿ ನಿಯಮಿತವಾಗಿ ಸಾರ್ವಜನಿಕರಿಗೆ ಅಪ್‌ಡೇಟ್ (Update) ಮಾಡುತ್ತದೆ. ಜನರು ಯಾವುದೇ ಮಾಹಿತಿಯ ಮೂಲವನ್ನು (Information Source) ನಂಬುವ ಮೊದಲು ಪರಿಶೀಲಿಸಬೇಕು ಎಂದು ಪಿಐಬಿ ಸಲಹೆ ನೀಡಲಾಗುತ್ತದೆ. ಇಂಥಹ ಫ್ಯಾಕ್ಟ್‌ ಚೆಕ್‌ ವಿಡಿಯೋಸ್‌ಗಾಗಿ ಸರ್ಕಾರದ ಅಧಿಕೃತ ವೆಬ್‌ಸೈಟ್ ಅಥವಾ ಸಾಮಾಜಿಕ ಜಾಲತಾಣದಲ್ಲಿರುವ ಪಿಐಬಿಯ ಅಧಿಕೃತ ಖಾತೆಗಳನ್ನು ಫಾಲೋ ಮಾಡಬಹುದು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಬಹತೇಕ ವಿಡಿಯೋ ಬಗ್ಗೆ ಇದು ನಿಖರ ಮಾಹಿತಿ ನೀಡುತ್ತದೆ.

click me!