Personal Finance : ಸಾಲ ಮಾಡಿ ಸ್ಕೂಟಿ ಖರೀದಿ ಮಾಡ್ತಿದ್ರೆ ಇದು ನೆನಪಿರಲಿ

By Suvarna NewsFirst Published Feb 6, 2023, 2:08 PM IST
Highlights

ದಿನಕ್ಕೆ ಒಂದಿಷ್ಟು ಬ್ಯಾಂಕ್ ನಿಂದ ಕರೆಗಳು ಬರ್ತಿರುತ್ತವೆ. ಕಡಿಮೆ ಬಡ್ಡಿಗೆ ಸಾಲ ನೀಡ್ತೇವೆ ಎನ್ನುವ ಜಾಹೀರಾತನ್ನು ನಾವು ನೋಡ್ತೇವೆ. ಅದನ್ನೊಂದೇ ನಂಬಿ ಸಾಲಪಡೆದು ಮುಂದೆ ಸಮಸ್ಯೆ ಎದುರಿಸುವ ಬದಲು ಸಾಲ ಪಡೆಯುವ ಮುನ್ನ ಎಚ್ಚರಿಕೆವಹಿಸಿದ್ರೆ ಒಳ್ಳೆಯದು.
 

ಒಂದು ಕಡೆಯಿಂದ ಇನ್ನೊಂದು ಕಡೆ ಪ್ರಯಾಣ ಬೆಳೆಸಲು ವಾಹನಗಳ ಅಗತ್ಯ ಈಗಿದೆ. ಕಚೇರಿಗೆ ತೆರಳಲು, ಸಣ್ಣಪುಟ್ಟ ಮಾರುಕಟ್ಟೆ ಕೆಲಸಕ್ಕೆ, ಮಕ್ಕಳನ್ನು ಕ್ಲಾಸ್ ಗಳಿಗೆ ಬಿಡಲು, ಪಾರ್ಸಲ್ ಕೆಲಸಕ್ಕೆ ಸ್ಕೂಟಿ ಹೇಳಿ ಮಾಡಿಸಿದ ವಾಹನ. ಈ ಎಲ್ಲ ಕೆಲಸಕ್ಕೆ ಕಾರ್ ನಲ್ಲಿ ಹೋಗೋದು ಕಷ್ಟ. ಇನ್ನು ದೊಡ್ಡ ಬೈಕ್ ಹೊಡೆಯೋದು ಎಲ್ಲರಿಗೂ ಸಾಧ್ಯವಿಲ್ಲ. ಹಾಗಾಗಿಯೇ ಇತ್ತೀಚಿನ ದಿನಗಳಲ್ಲಿ ಸ್ಕೂಟಿಗೆ ಬೇಡಿಕೆ ಹೆಚ್ಚಾಗಿದೆ. ಬಹತೇಕ ಎಲ್ಲರ ಮನೆಯಲ್ಲಿ ನೀವು ಒಂದೋ ಎರಡೋ ಸ್ಕೂಟಿ ನೋಡ್ಬಹುದು.

ಮಹಿಳೆಯರಿಗೆ ಹೇಳಿ ಮಾಡಿಸಿದ ವಾಹನ ಸ್ಕೂಟಿ (Scooty). ಇದನ್ನು ಮಹಿಳೆ (Woman) ಯರ ವಾಹನ ಎಂದೇ ಕರೆಯಲಾಗುತ್ತದೆ. ಹೆಚ್ಚು ಭಾರವಿಲ್ಲದ ಹಾಗೆ ಆರಾಮವಾಗಿ ಚಲಾಯಿಸಬಹುದಾದ ಸ್ಕೂಟಿಗೆ ಬೇಡಿಕೆ ಹೆಚ್ಚು. ಹಾಗಾಗಿಯೇ ಮಾರುಕಟ್ಟೆಗೆ ಅನೇಕ ಕಂಪನಿ (Company) ಗಳು ಲಗ್ಗೆಯಿಟ್ಟಿವೆ. ಬ್ಯಾಂಕ್ ಗಳು ಕೂಡ ವಾಹನ ಸಾಲವನ್ನು ಜನರಿಗೆ ನೀಡ್ತಿವೆ. ಕೆಲವರು ಸ್ಕೂಟಿ ಖರೀದಿಗೆ ಬ್ಯಾಂಕ್ ನಿಂದ ಸಾಲ ಪಡೆಯುತ್ತಾರೆ. ನೀವೂ ಕೂಡ ಬ್ಯಾಂಕ್ (Bank) ನಲ್ಲಿ ಸಾಲ ಪಡೆದು ಸ್ಕೂಟಿ ಖರೀದಿ ಪ್ಲಾನ್ ಮಾಡಿದ್ದರೆ ಸಾಲ ಪಡೆಯುವ ಮುನ್ನ ಕೆಲ ವಿಷ್ಯವನ್ನು ನೆನಪಿಟ್ಟುಕೊಳ್ಳಿ. ತರಾತುರಿಯಲ್ಲಿ ಸಿಕ್ಕ ಬ್ಯಾಂಕ್ ನಲ್ಲಿ ಸಾಲ ಪಡೆದು ನಂತ್ರ ತೊಂದರೆ ಅನುಭವಿಸುವ ಬದಲು ಮೊದಲೇ ಆಲೋಚನೆ ಮಾಡಿ ಸಾಲ ಪಡೆದ್ರೆ ಒಳ್ಳೆಯದು. ನಾವಿಂದು ಸಾಲ ಪಡೆಯುವ ಮೊದಲು ಯಾವೆಲ್ಲ ವಿಷ್ಯವನ್ನು ಗಮನಿಸಬೇಕು ಎಂಬುದನ್ನು ನಿಮಗೆ ಹೇಳ್ತೆವೆ.

ಎಲ್ಐಸಿಯ ಈ ಪಾಲಿಸಿಯಲ್ಲಿ ದಿನಕ್ಕೆ 45ರೂ. ಹೂಡಿಕೆ ಮಾಡಿದ್ರೆ 25ಲಕ್ಷ ರೂ. ರಿಟರ್ನ್!

ಉತ್ತಮ ಆಯ್ಕೆಯನ್ನು ಪರಿಶೀಲಿಸಿ : ಸ್ಕೂಟಿ ಖರೀದಿಸಲು ಸಾಲ ಪಡೆಯುತ್ತಿದ್ದರೆ, ವಿವಿಧ ಬ್ಯಾಂಕ್‌ಗಳಿಂದ ಲಭ್ಯವಿರುವ ಸಾಲಗಳು ಮತ್ತು ಬಡ್ಡಿಯ ಬಗ್ಗೆ ಮಾಹಿತಿ ಪಡೆಯಿರಿ. ಉತ್ತಮ ಷರತ್ತುಗಳೊಂದಿಗೆ ಸಾಲವನ್ನು ನೀಡುವ ಬ್ಯಾಂಕ್ ಅನ್ನು ಆಯ್ಕೆ ಮಾಡಿ. ಹಬ್ಬದ ಸಮಯದಲ್ಲಿ  ಸ್ಕೂಟಿ ಖರೀದಿಸಲು ವಿಶೇಷ ಕೊಡುಗೆಯನ್ನು ನೀಡಲಾಗುತ್ತದೆ. ನೀವು ವಿಶೇಷ ಸಂದರ್ಭದಲ್ಲಿ ಸ್ಕೂಟಿ ಖರೀದಿಸಲು ಪ್ರಯತ್ನಿಸಬೇಕು. ಕಡಿಮೆ ಬಡ್ಡಿ ಇರುವ ಬ್ಯಾಂಕ್ ನಿಂದ ಸಾಲ ಪಡೆದ್ರೆ ಒಳ್ಳೆಯದು. 

ನೀವು ಸಾಲದ ಸಾಮರ್ಥ್ಯವನ್ನು ಪರಿಶೀಲಿಸಬೇಕು : ಸಾಲವನ್ನು ತೆಗೆದುಕೊಳ್ಳುವ ಮೊದಲು ಅತ್ಯಂತ ಮುಖ್ಯವಾದ ವಿಷಯವೆಂದರೆ  ಮರುಪಾವತಿ ಸಾಮರ್ಥ್ಯವನ್ನು ನೀವು ಪರಿಶೀಲಿಸಬೇಕು. ನೀವು ಸ್ಕೂಟಿಗೆ ಹೆಚ್ಚಿನ ಇಎಂಐ (EMI ) ಪಾವತಿಸಿದರೆ ನಿಮಗೆ ನಷ್ಟ. ಹಾಗೆಯೇ ದೀರ್ಘಾವಧಿಯಲ್ಲಿ  ಹಣಕಾಸಿನ ಸಮಸ್ಯೆ ಎದುರಾಗಬಹುದು. ನಿಮ್ಮ ಬಜೆಟ್ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ದೀರ್ಘಕಾಲದ ಆಲೋಚನೆ ಮಾಡಿ, ಎಷ್ಟು ಸಾಲವನ್ನು ನೀವು ಮರುಪಾವತಿಸಲು ಸಾಧ್ಯ ಎಂಬುದನ್ನು ಲೆಕ್ಕ ಮಾಡಿ ನಂತ್ರ ಸಾಲ ಪಡೆಯಿರಿ.  ಮರುಪಾವತಿ ಸಾಮರ್ಥ್ಯಕ್ಕೆ ಅನುಗುಣವಾಗಿ ನೀವು ಸಾಲದ ಮೊತ್ತವನ್ನು ನಿರ್ಧರಿಸಬೇಕು.  

ಕ್ರೆಡಿಟ್ ಸ್ಕೋರ್ (Credit Score) : ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ ಕೂಡ ಮುಖ್ಯ. ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದರೆ ನಿಮಗೆ ಸಾಲ ಬೇಗ ಸಿಗುತ್ತದೆ.  ಹಾಗೆಯೇ ಬ್ಯಾಂಕ್ ಕ್ರೆಡಿಟ್ ಸ್ಕೋರ್ ಹೆಚ್ಚಿರುವವರಿಗೆ ಕೆಲ ವಿಶೇಷ ಸೌಲಭ್ಯವನ್ನು ಕೂಡ ನೀಡುತ್ತದೆ. ಹಾಗಾಗಿ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಕ್ರೆಡಿಟ್ ಸ್ಕೋರ್ ತಿಳಿದುಕೊಳ್ಳಿ. 

New Investment : ಮಹಿಳೆಯರಿಗೆ ಲಾಭಕಾರಿ ಈ ಹೂಡಿಕೆ ಯೋಜನೆ

ಸಾಲದ ಬಗ್ಗೆ ಸಂಪೂರ್ಣ ಮಾಹಿತಿ ಇರಲಿ : ತರಾತುರಿಯಲ್ಲಿ ಯಾವುದೇ ಕಾರಣಕ್ಕೂ ಸಾಲ ಪಡೆಯಬೇಡಿ. ಸಾಲ ಪಡೆಯುವ ಮುನ್ನ ಎಷ್ಟು ಹಣ ನಿಮಗೆ ಸಿಗುತ್ತದೆ, ಅದು ಡೌನ್ ಪೇಮೆಂಟ್ ಗೆ ಸಾಕಾಗುತ್ತದೆಯೇ ಎಂಬುದನ್ನು ತಿಳಿಯಿರಿ. ಜೊತೆಗೆ ಸಾಲವನ್ನು ಎಷ್ಟು ಅವಧಿಯಲ್ಲಿ ಮರುಪಾವತಿ ಮಾಡಬೇಕು, ಬಡ್ಡಿ ಎಷ್ಟು, ಇಎಂಐ ಎಷ್ಟು ಬರುತ್ತದೆ ಎಂಬೆಲ್ಲ ಮಾಹಿತಿಯನ್ನು ತಿಳಿದ ನಂತ್ರವೇ ಸಾಲ ಪಡೆಯಿರಿ. 
 

click me!