ಫೇಸ್‌ಬುಕ್‌ನಲ್ಲಿ ಉದ್ಯೋಗವಕಾಶ, ಈ ತಂತ್ರಜ್ಞಾನ ಗೊತ್ತಿದ್ದರೆ ಸ್ಯಾಲರಿಯಲ್ಲಿ ಚೌಕಾಸಿ ಇಲ್ಲ

Published : Feb 08, 2025, 04:42 PM IST
ಫೇಸ್‌ಬುಕ್‌ನಲ್ಲಿ ಉದ್ಯೋಗವಕಾಶ, ಈ ತಂತ್ರಜ್ಞಾನ ಗೊತ್ತಿದ್ದರೆ ಸ್ಯಾಲರಿಯಲ್ಲಿ ಚೌಕಾಸಿ ಇಲ್ಲ

ಸಾರಾಂಶ

ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ ಇದೀಗ ನೇಮಕಾತಿ ಪ್ರಕ್ರಿಯೆ ಚುರುಕುಗೊಳಿಸುತ್ತಿದೆ. ಯುವ ಹಾಗೂ ಉತ್ಸಾಹಿಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಮುಂದಾಗಿದೆ. ಇದರ ಮೊದಲ ಹಂತದ ಪ್ರಕ್ರಿಯೆ ಆರಂಭಗೊಂಡಿದೆ. ಇನ್ನು ಸ್ಯಾಲರಿ ನೀವು ಕೇಳಿದಷ್ಟು.

ನ್ಯೂಯಾರ್ಕ್(ಫೆ.08) ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ ಇದೀಗ ನೇಮಕಾತಿ ಪ್ರಕ್ರಿಯೆ ಚುರುಕುಗೊಳಿಸಿದೆ. ಇದರ ಮೊದಲ ಹಂತದ ಪ್ರಕ್ರಿಯೆ ಆರಂಭಗೊಂಡಿದೆ. ನೀವು ಕೇಳಿದಷ್ಟು ಸ್ಯಾಲರಿ ನೀಡಿ ಯುವ ಹಾಗೂ ಪ್ರತಿಭಾನ್ವಿತರನ್ನು ಆಯ್ಕೆ ಮಾಡಿಕೊಳ್ಳಲು ಮೆಟಾ ಮುಂದಾಗಿದೆ. ಇದರ ಮೊದಲ ಪ್ರಕ್ರಿಯೆಯಾಗಿ ಮೆಟಾ ಲೋ ಪರ್ಫಾಮೆನ್ಸ್ ಉದ್ಯೋಗಿಗಳ ವಜಾ ಮಾಡುತ್ತಿದೆ. ಮುಂದಿನ ವಾರದಿಂದ ಮೆಟಾ ಉದ್ಯೋಗ ಕಡಿತ ಆರಂಭಗೊಳ್ಳುತ್ತಿದೆ. ಇದರ ಜೊತೆಗೆ ನೇಮಕಾತಿ ಪ್ರಕ್ರಿಯೆ ಕೂಡ ಆರಂಭಗೊಳ್ಳುತ್ತಿದೆ.

ಮಶಿನ್ ಲರ್ನಿಂಗ್ ಎಂಜಿನೀಯರ್ಸ್‌ಗೆ ಅವಕಾಶ
ಮೆಟಾ ಇದೀಗ ಆರ್ಟಿಫೀಶಿಯಲ್ ಹಾಗೂ ಮಶಿನ್ ಲರ್ನಿಂಗ್ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಮುಂದಾಗಿದೆ. ಇದರಿಂದ ಪರಿಣಾಮಕಾರಿಯಾಗಿ ಕೆಲಸ ನಡೆಯಲಿದೆ. ಇಷ್ಟೇ ಅಲ್ಲ ಹೆಚ್ಚಿನ ಮಾನವ ಸಂಪಲನ್ಮೂಲದ ಅವಶ್ಯಕತೆಯೂ ಇರುವುದಿಲ್ಲ. ಇನ್ನು ಪರ್ಫಾಮೆನ್ಸ್ ಯಾವತ್ತೂ ಉತ್ತಮವಾಗಿರುತ್ತದೆ. ಹೀಗಾಗಿ ಎಐ ಹಾಗೂ ಮಶೀನ್ ಲರ್ನಿಂಗ್ ಎಂಜಿನೀಯರ್ಸ್ ನೇಮಕಾತಿ ಆರಂಭಿಸುತ್ತಿದೆ.

ಭಾರತದ ಚುನಾವಣೆ ಕುರಿತು ತಪ್ಪು ಮಾಹಿತಿ ನೀಡಿದ ಜುಕರ್‌ಬರ್ಗ್‌

ದೈತ್ಯ ಸೋಶಿಯಲ್ ಮೀಡಿಯಾ ಕಂಪನಿಯಾಗಿ ಬೆಳೆದಿರುವ ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ ಇದೀಗ ಉದ್ಯೋಗ ಕಡಿತ ಆರಂಭಿಸಿದೆ. ಹಲವು ದೇಶಗಳಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತಿದೆ. ಹಂತ ಹಂತವಾಗಿ ಉದ್ಯೋಗಳಿಗೆ ಇಮೇಲ್ ಮೂಲಕ ಅಮಾನತು ಸಂದೇಶ ಕಳುಹಿಸಲಾಗಿದೆ. ಹಲವರಿಗೆ ಇಂದು ಇಮೇಲ್ ಕಳುಹಿಸಲಾಗಿದೆ.  ನಿಮ್ಮ ಸೇವೆಗೆ ಧನ್ಯವಾದ. ಸೋಮವಾರದಿಂದ ನಿಮ್ಮನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ ಅನ್ನೋ ಸಂದೇಶವನ್ನು ಕಳುಹಿಸಲಾಗಿದೆ. ಮೆಟಾ ಮುಂದಿನ ವಾರದಿಂದ ಭಾರಿ ಉದ್ಯೋಗ ಕಡಿತ ಮಾಡುತ್ತಿದೆ.

ಮಾರ್ಕ್ ಜುಕರ್ಬರ್ಗ್ ಮೆಟಾ ಸಂಸ್ಥೆಯ ಉದ್ಯೋಗ ಕಡಿತ ಹಲವು ನೌಕಕರಲ್ಲಿ ಆತಂಕ ತಂದಿದೆ. ಹಲವರನ್ನು ತಕ್ಷಣದಿಂದ ನಿರ್ಗಮಿಸುವಂತೆ ಸೂಚಿಸಲಾಗಿದೆ. ಜನವರಿಯಲ್ಲಿ ಮಾರ್ಕ್ ಜುಕರ್ಬರ್ಗ್ ಈ ಕುರಿತು ಜನವರಿಯಲ್ಲಿ ಘೋಷಣೆ ಮಾಡಿದ್ದರು. ಉದ್ಯೋಗಿಗಳ ಪರ್ಫಾಮೆನ್ಸ್ ಆಧಾರದಲ್ಲಿ ಉದ್ಯೋಗ ಕಡಿತ ನಡೆಯಲಿದೆ. ಕಂಪನಿ ಮಾನದಂಡಗಳಿಗೆ ಅನುಗಣವಾಗಿಲ್ಲದಿದ್ದರೆ ಅಂತಹ ಉದ್ಯೋಗಿಗಳ ವಜಾಗೊಳಿಸಲಾಗುತ್ತದೆ ಎಂದು ಮಾರ್ಕ್ ಹೇಳಿದ್ದರು. ಹಲವು ಉದ್ಯೋಗಿಗಳ ಉದ್ಯೋಗ ಕಡಿತ ಮಾಡುತ್ತಿರುವ ಮೆಟಾ ಶೀಘ್ರದಲ್ಲೇ ಆರ್ಟಫೀಶಿಯಲ್ ಇಂಟಲಿಜೆನ್ಸ್ ಹಾಗೂ ಮಶಿನ್ ಲರ್ನಿಂಗ್ ಎಂಜಿನೀಯರ್ಸ್ ನೇಮಕಾತಿ ಮಾಡಲಿದೆ. 

ಚೀನಾದ ಡೀಪ್‌ಸೀಕ್ ಎಐ ಬಂದ್ಮೇಲೆ ಅಮೆರಿಕದ ಟೆಕ್ ಕಂಪನಿಗಳು ಭಯ ಪಟ್ಟಿವೆ. ಆದ್ರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ನಲ್ಲಿ ಹಣ ಹೂಡೋದನ್ನ ಮುಂದುವರಿಸುತ್ತೇವೆ ಅಂತ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ. ಡೀಪ್‌ಸೀಕ್ ಬಂದಿದ್ದು ಅಮೆರಿಕದ ಟೆಕ್ ಕಂಪನಿಗಳಿಗೆ ಮುಂದೆ ತೊಂದರೆ ಆಗಬಹುದು ಅಂತ ಎಲ್ಲರೂ ಹೇಳ್ತಿದ್ದಾರೆ. ಆದ್ರೆ ಡೀಪ್‌ಸೀಕ್ ಬಂದಿದ್ದು ಎಐ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆಗೆ ಪ್ರೇರಣೆ ಅಂತ ಜುಕರ್‌ಬರ್ಗ್ ಹೇಳಿದ್ದಾರೆ.

ಜುಕರ್‌ಬರ್ಗ್ ಎಐನಲ್ಲಿ ಹಿಂದೆ ಬೀಳಲ್ಲ
ಎಐ ಕ್ಷೇತ್ರದಲ್ಲಿ ಓಪನ್ ಎಐ, ಗೂಗಲ್ ಮತ್ತು ಮೆಟಾ ಮುಂದೆ ಇದ್ದಾಗ ಚೀನಾದ ಡೀಪ್‌ಸೀಕ್ ತನ್ನ ಆರ್1 ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್‌ನಿಂದ ಫೇಮಸ್ ಆಗಿದೆ. ಡೀಪ್‌ಸೀಕ್ ಆರ್1, ಓಪನ್ ಎಐನ ಚಾಟ್ ಜಿಪಿಟಿಗೆ ಸರಿಸಮಾನ ಅಂತ ಟೆಕ್ ತಜ್ಞರು ಹೇಳ್ತಿದ್ದಾರೆ. ಡೀಪ್‌ಸೀಕ್ ಆರ್1 ಬಂದ್ಮೇಲೆ ಅಮೆರಿಕದ ಚಿಪ್ ಮತ್ತು ಗ್ರಾಫಿಕ್ಸ್ ಪ್ರೊಸೆಸರ್ ಕಂಪನಿ ಎನ್ವಿಡಿಯಾದ ಶೇರುಗಳು ಶೇ.20ರಷ್ಟು ಕಡಿಮೆ ಆಗಿವೆ. ಆದ್ರೂ ಎಐನಲ್ಲಿ ಹಣ ಹೂಡೋದನ್ನ ಮುಂದುವರಿಸುತ್ತೇವೆ ಅಂತ ಜುಕರ್‌ಬರ್ಗ್ ಹೇಳಿದ್ದಾರೆ. 2025ರಲ್ಲಿ 60 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಹಣವನ್ನು ಎಐಗೆ ಹೂಡಲು ಮೆಟಾ ಪ್ಲ್ಯಾನ್ ಮಾಡ್ತಿದೆ. ಡಾಟಾ ಸೆಂಟರ್‌ಗಳನ್ನ ಅಭಿವೃದ್ಧಿಪಡಿಸಲು ಮೆಟಾ ಹೆಚ್ಚು ಹಣ ಖರ್ಚು ಮಾಡ್ತಿದೆ.

ಟ್ರಂಪ್ ಪ್ರಭಾವ; ಮೆಟಾ ಕಚೇರಿಗಳಲ್ಲಿದ್ದ ಟ್ಯಾಂಪೂನ್‌ಗಳನ್ನು ತೆಗೆಯಲು ಜುಕರ್‌ಬರ್ಗ್ ಆದೇಶ

 


 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!