Gold Price :ಈ ವಾರ ಚಿನ್ನದ ಬೆಲೆಯೇರಿಕೆ ಸಾಧ್ಯತೆ! ಕಾರಣವೇನು ಗೊತ್ತಾ?

Published : Jun 06, 2022, 03:52 PM IST
Gold Price :ಈ ವಾರ ಚಿನ್ನದ ಬೆಲೆಯೇರಿಕೆ ಸಾಧ್ಯತೆ! ಕಾರಣವೇನು ಗೊತ್ತಾ?

ಸಾರಾಂಶ

ಚಿನ್ನದ ಬೆಲೆಯಲ್ಲಿ ಏರಿಳಿತ ಸಹಜ. ಅದಕ್ಕೆ ಅನೇಕ ಅಂಶಗಳು ಕಾರಣವಾಗುತ್ತವೆ ಕೂಡ. ಈ ವಾರ ಚಿನ್ನದ ಬೆಲೆಯಲ್ಲಿ ವ್ಯತ್ಯಯವಾಗೋ ಸಾಧ್ಯತೆ ಹೆಚ್ಚಿದೆ. ಇದಕ್ಕೆ ಇಸಿಬಿ ಮೀಟಿಂಗ್, ಅಮೆರಿಕದ ಹಣದುಬ್ಬರ, ಆರ್ ಬಿಐ ಎಂಪಿಸಿ ಸಭೆ ಸೇರಿದಂತೆ ಅನೇಕ ಅಂಶಗಳು ಕಾರಣವಾಗಿವೆ. 

Business Desk:ಚಿನ್ನದ (Gold) ಬೆಲೆಯಲ್ಲಿ (Price) ಕಳೆದ ಮೂರು ವಾರಗಳಲ್ಲಿ ಏರಿಕೆ ಕಂಡುಬಂದಿದೆ. ಕಳೆದ ವಾರದ ಪ್ರಾರಂಭದಲ್ಲಿ ಚಿನ್ನದ ಬೆಲೆ ಎರಡು ವಾರಗಳ ಕಡಿಮೆ ಮಟ್ಟಕ್ಕೆ ಇಳಿಕೆಯಾಗಿತ್ತು. ಇದಕ್ಕೆ ಕಾರಣ ಹಣದುಬ್ಬರ (Inflation) ತಡೆಗೆ ಬಡ್ಡಿದರ ಇನ್ನಷ್ಟು ಹೆಚ್ಚಳವಾಗಬಹುದೆಂಬ ಅಂದಾಜಿನಿಂದ  ಯುಎಸ್ ಟ್ರೆಷರ್ ಯೀಲ್ಡ್ಸ್ ಏರಿಕೆ ಕಂಡಿರೋದು. ಈ ನಡುವೆ ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸೋರು ಸದ್ಯಕ್ಕೆ ಸುಮ್ಮನಿರೋದು ಉತ್ತಮ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಈ ವಾರ ಹಾಗೂ ಮುಂದಿನ ದಿನಗಳಲ್ಲಿ ಯುರೋಪಿಯನ್ ಫಸ್ಟ್ ಜಿಡಿಪಿ ಡೇಟಾ, ಇಸಿಬಿ ಮೀಟಿಂಗ್. ಅಮೆರಿಕದ ಹಣದುಬ್ಬರ ಅಂಕಿಅಂಶ ಇತ್ಯಾದಿ ಕಾರಣಗಳಿಂದ ಚಿನ್ನದ ಬೆಲೆಯಲ್ಲಿ ವ್ಯತ್ಯಯವಾಗೋ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಚಿನ್ನದ ಬೆಲೆಯೇರಿಕೆಗೆ ಕಾರಣವಾಗಬಲ್ಲ 5 ಮುಖ್ಯ ಕಾರಣಗಳು ಹೀಗಿವೆ.

1.ಇಸಿಬಿ ಸಭೆ (ECB meeting): ಯುರೋಪಿಯನ್ ವಲಯದಲ್ಲಿ ಹಣದುಬ್ಬರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಸಿಬಿ ಸಭೆ ನಡೆಯಲಿದೆ. ಇಂಧನ ದರದಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹಣದುಬ್ಬರ ಗರಿಷ್ಠ ಮಟ್ಟ ತಲುಪಿದೆ. ಇನ್ನು ಆಸ್ಟ್ರೇಲಿಯಾ ಹಾಗೂ ರಷ್ಯಾದ ಕೇಂದ್ರ ಬ್ಯಾಂಕಿನ ಸಭೆ ಕೂಡ ಮುಂದಿನ ವಾರದಲ್ಲಿ ನಡೆಯಲಿದೆ. ನೀತಿ ನಿರೂಪಕರ ನಡೆಯಲ್ಲಿ ಯಾವುದೇ ಬದಲಾವಣೆಯಾದ್ರೂ ಅದು ಡಾಲರ್ ಸೂಚ್ಯಂಕದ ಮೇಲೆ ನಕಾರಾತ್ಮಕ ಪರಿಣಾಮ ಬೀರೋ ಸಾಧ್ಯತೆಯಿದೆ. ಹೀಗಾದ್ರೆ ಚಿನ್ನದ ಬೆಲೆ ಹೆಚ್ಚುವ ಸಾಧ್ಯತೆಯಿದೆ ಎನ್ನುತ್ತಾರೆ ತಜ್ಞರು.

Gold Hallmarking Rule Change:ನಾಳೆಯಿಂದ ಎಲ್ಲ ವಿಧದ ಚಿನ್ನಾಭರಣಗಳಿಗೆ ಹಾಲ್ ಮಾರ್ಕ್ ಕಡ್ಡಾಯ; ತಿಳಿದಿರಲೇಬೇಕಾದ ಸಂಗತಿಗಳೇನು?

2.ಯುರೋಪ್ ಹಾಗೂ ಜಪಾನ್ ಮೊದಲ ತ್ರೈಮಾಸಿಕದ ಜಿಡಿಪಿ ಅಂಕಿಅಂಶ: ಜಪಾನ್ ಹಾಗೂ ಯುರೋಪ್ ಮೊದಲ ತ್ರೈಮಾಸಿಕದ ವರದಿ ಶೀಘ್ರವೇ ಬಿಡುಗಡೆಯಾಗಲಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಲು ಈ ಎರಡು ರಾಷ್ಟ್ರಗಳ ಜಿಡಿಪಿ ಪ್ರಗತಿಯನ್ನು ಪರಿಗಣಿಸೋ ಸಾಧ್ಯತೆಯಿದೆ. ಒಂದು ವೇಳೆ ಈ ಎರಡು ರಾಷ್ಟ್ರಗಳ ಜಿಡಿಪಿ ದರ ಕಡಿಮೆಯಿದ್ರೆ ಚಿನ್ನದ ಬೇಡಿಕೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ.

3.ಅಮೆರಿಕದ ಹಣದುಬ್ಬರ ಅಂಕಿಅಂಶ: ವಾರದ ಕೊನೆಯಲ್ಲಿ ಹೂಡಿಕೆದಾರರು ಅಮೆರಿಕದ ಹಣದುಬ್ಬರದ ಮೇಲೆ ಕಣ್ಣಿಡುವ ಸಾಧ್ಯತೆಯಿದೆ. ಇದ್ರಿಂದ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯೇರಿಕೆಯಾಗೋ ಸಾಧ್ಯತೆಯಿದೆ ಎನ್ನುತ್ತಾರೆ ತಜ್ಞರು.

4. ಆರ್ ಬಿಐ ಎಂಪಿಸಿ ಸಭೆ: ಇಂದು (ಸೋಮವಾರ) ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ಸಮಿತಿ ಸಭೆಯಿದೆ. ಈ ಸಭೆಯಲ್ಲಿ ರೆಪೋ ದರ ಪರಿಷ್ಕರಣೆ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಇದ್ರಿಂದ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಾಗೋ ಸಾಧ್ಯತೆಯಿದೆ. 

5. ಡಾಲರ್ ಸೂಚ್ಯಂಕ: ಈ ವಾರದ ಕೊನೆಯಲ್ಲಿ ಡಾಲರ್ ಸೂಚ್ಯಂಕದಲ್ಲಿ ಸ್ವಲ್ಪ ಮಟ್ಟಿಗಿನ ನಷ್ಟ ದಾಖಲಾಗಿದೆ. ಇದರಲ್ಲಿ ಮುಂದೆ ಯಾವುದೇ ಇಳಿಕೆ ಕಂಡುಬಂದರೂ ಯುಎಸ್ ಡಾಲರ್ ನಲ್ಲಿ ಕ್ಷಿಪ್ರ ಏರಿಕೆಯಾದ್ರೆ ಅದು ಚಿನ್ನದ ಬೆಲೆಯೇರಿಕೆಗೂ ಕಾರಣವಾಗಲಿದೆ.

ಚಿನ್ನಕ್ಕೆ ಹಾಲ್ ಮಾರ್ಕ್ ಕಡ್ಡಾಯ
ಜೂನ್ 1ರಿಂದ ದೇಶಾದ್ಯಂತ ಚಿನ್ನದ ಹಾಲ್ ಮಾರ್ಕ್ ಗೆ (Hallmark) ಸಂಬಂಧಿಸಿದ ನಿಯಮದಲ್ಲಿ ಬದಲಾವಣೆಯಾಗಿದೆ. ಕೇಂದ್ರ ಸರ್ಕಾರ (Central Government) ಹೊರಡಿಸಿರುವ ಅಧಿಸೂಚನೆ ( Notification) ಅನ್ವಯ ಭಾರತದಲ್ಲಿ (India) ಚಿನ್ನದ ವ್ಯಾಪಾರಿಗಳು (Jewellers) 2022ರ ಜೂನ್ 1ರಿಂದ ಹಾಲ್ ಮಾರ್ಕ್ ಹೊಂದಿರುವ ಚಿನ್ನಾಭರಣಗಳನ್ನು (Jewellery) ಮಾತ್ರ ಮಾರಾಟ ಮಾಡಬೇಕು.

Home Loan:ಗೃಹ ಸಾಲ ಪಡೆಯಲು ಯಾವ ಬ್ಯಾಂಕ್ ಬೆಸ್ಟ್; ಎಲ್ಲಿ ಬಡ್ಡಿದರ ಕಡಿಮೆಯಿದೆ? ಇಲ್ಲಿದೆ ಮಾಹಿತಿ

ಹಾಲ್ ಮಾರ್ಕ್ ಅಂದ್ರೆ ಚಿನ್ನಾಭರಣಗಳ ಶುದ್ಧತೆಯ ಮಾನದಂಡ ಪ್ರಮಾಣಪತ್ರ. ಹಾಲ್ ಮಾರ್ಕ್ ಇರೋ ಚಿನ್ನ ಪರಿಶುದ್ಧವಾಗಿದೆ ಎಂಬುದನ್ನು ಗ್ರಾಹಕರಿಗೆ ದೃಢಪಡಿಸುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶತಮಾನಗಳಿಂದಲೂ ಹಾಲ್‌ಮಾರ್ಕ್ ಪರಿಶುದ್ಧತೆಗೆ ಮಾನದಂಡವಾಗಿದೆ. ಹಾಲ್ ಮಾರ್ಕ್ ನಲ್ಲಿ ನಮೂದಿಸಿರುವ ಪರಿಶುದ್ಧತೆಯನ್ನೇ ಆ ಚಿನ್ನದ ವಸ್ತು ಹೊಂದಿರುವ ಕಾರಣ  ಹೊಸ ಹಾಲ್ ಮಾರ್ಕ್ ನಿಯಮ ಚಿನ್ನದ ಆಭರಣಗಳು ಅಥವಾ ಕಲಾಕೃತಿಗಳನ್ನು ಖರೀದಿಸುವ  ಗ್ರಾಹಕರ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಲಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!